janadhvani

Kannada Online News Paper

ಡಿ.22: ಮೋಂಟುಗೋಳಿಯಲ್ಲಿ ತಾಜುಲ್ ಉಲಮಾ ಅನುಸ್ಮರಣೆ

ಮೋಂಟುಗೋಳಿ: SYS ಮೋಂಟುಗೋಳಿ ಬ್ರಾಂಚ್ ವತಿಯಿಂದ ತಾಜುಲ್ ಉಲಮಾ ಅನುಸ್ಮರಣೆ ಹಾಗೂ 5 ನೇ ನಾರಿಯತ್ ಸ್ವಲಾತ್ ವಾರ್ಷಿಕವು ಡಿ.22 ಆದಿತ್ಯವಾರ ರಾತ್ರಿ 7.30ಕ್ಕೆ ಸಾರ್ವಜನಿಕ ಮೈದಾನ ಮೊಂಟುಗೋಳಿಯಲ್ಲಿ ನಡೆಯಲಿದೆ.

ಸಯ್ಯಿದ್ ಶಿಹಾಬುದ್ದೀನ್ ಅಲ್-ಹೈದ್ರೋಸಿ ತಂಙಳ್ ಕಿಲ್ಲೂರು ರವರ ದುವಾ ದೊಂದಿಗೆ, ತಾಜುಲ್ ಫುಖಾಹಾಹ್ ಬಹು: ಪಿ.ಎಂ ಇಬ್ರಾಹಿಂ ಮುಸ್ಲಿಯಾರ್ ಬೇಕಲ್ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮವನ್ನು ಇಬ್ರಾಹಿಂ ಸಅದಿ ಮಾಣಿ ಉದ್ಘಾಟಿಸುವರು. ಬಹು:ಶಾಫಿ ಬಾಖವಿ ಚಾಲಿಯಮ್ ಮುಖ್ಯ ಪ್ರಭಾಷಣ ಗೈಯುವರು. ಅಲ್ಲದೇ ಹಲವಾರು ಉಲಮಾ, ಉಮರಾ ನೇತಾರರು ಭಾಗವಹಿಸುವರು.

ಅಧ್ಯಕ್ಷರು ಮತ್ತು ಸದಸ್ಯರು SYS ಮೊಂಟುಗೋಳಿ ಶಾಖೆ

error: Content is protected !! Not allowed copy content from janadhvani.com