ದುಬೈ: ಕೆ ಸಿ ಎಫ್ ದುಬೈ ಹೋರ್ಲಂಝ್ ಸೆಕ್ಟರ್ ವತಿಯಿಂದ ಬೃಹತ್ ಬುರ್ದಾ ಮಜ್ಲಿಸ್ ಹಾಗೂ ಜೀಲಾನಿ, ತಾಜುಲ್ ಉಲಮ ಅನುಸ್ಮರಣೆ 12/12/2019 ರಂದು ಹೋರ್ಲಂಝ್ ನಲ್ಲಿ ನಡೆಯಿತು.
ಇಲ್ಯಾಸ್ ಸಅದಿ ಹಾಗೂ ಸ್ವಾದಿಕ್ ರವರ ನೇತೃತ್ವದಲ್ಲಿ ಬುರ್ದಾ ಮಜ್ಲಿಸ್ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸೆಕ್ಟರ್ ಅಧ್ಯಕ್ಷರಾದ ಅಬ್ದುಲ್ ರಹಿಮಾನ್ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಹಬೀಬ್ ಸಜೀಪ ಸ್ವಾಗತ ಕೋರಿದರು. ಕೆಸಿಎಫ್ ರಾಷ್ಟ್ರೀಯ ಅಧ್ಯಕ್ಷರಾದ ಜಲೀಲ್ ನಿಝಾಮಿ ಉಸ್ತಾದರು ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಎಸ್ ವೈ ಎಸ್ ಕಾಸರಗೋಡು ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ಸಿದ್ದೀಖ್ ಸಖಾಫಿ ಜೀಲಾನಿ, ತಾಜುಲ್ ಉಲಮಾ ಅನುಸ್ಮರಣಾ ಮುಖ್ಯ ಪ್ರಭಾಷಣಗೈದರು. ಸೆಕ್ಟರ್ ಶಿಕ್ಷಣ ವಿಭಾಗದ ಅಧ್ಯಕ್ಷರಾದ ಇಬ್ರಾಹಿಂ ಮದನಿ ಕಾರ್ಯಕ್ರಮವನ್ನು ನಿರೂಪಿಸಿದರು.
ಕಾರ್ಯಕ್ರಮದಲ್ಲಿ ದುಬೈ ನೋರ್ತ್ ಝೋನ್ ಶಿಕ್ಷಣ ವಿಭಾಗದ ಅಧ್ಯಕ್ಷರಾದ ಅಬ್ದುಲ್ ಅಝೀಝ್ ಲೆತ್ವೀಫಿ, ಹೋರ್ಲಂಝ್ ಸೆಕ್ಟರ್ ಉಸ್ತುವಾರಿ ಹಾಗೂ ದುಬೈ ನೋರ್ತ್ ಝೋನ್ ಇಹ್ಸಾನ್ ವಿಭಾಗದ ಅಧ್ಯಕ್ಷರಾದ ಹಮೀದ್ ಸಖಾಫಿ, ದುಬೈ ನೋರ್ತ್ ಝೋನ್ ಕ್ಯಾಬಿನೆಟ್ ನಾಯಕರಾದ ನಿಯಾಝ್ ಬಸರ, ಲೆತೀಫ್ ಪಾತೂರ್, ಮಜೀದ್ ಮಂಜನಾಡಿ, ಅಲೀ ಕೂಲೂರು, ಅಬ್ಬಾಸ್ ಮಂಜನಾಡಿ, ಸೆಕ್ಟರ್ ಮಾಜಿ ಅಧ್ಯಕ್ಷರಾದ ಹಮೀದ್ ಅಳಿಕೆ, ಸೆಕ್ಟರ್ ಕ್ಯಾಬಿನೆಟ್ ನಾಯಕರು ಹಾಗೂ ಸದಸ್ಯರು, ಯೂನಿಟ್ ನ ನಾಯಕರು ಉಪಸ್ಥಿತರಿದ್ದರು.
ಕೊನೆಯಲ್ಲಿ ಇಬ್ರಾಹಿಂ ಮದನಿ ಧನ್ಯವಾದಗೈದರು.






