ನವದೆಹಲಿ,ಡಿ.2: ಮೊಬೈಲ್ ಬಳಕೆದಾರರು ಮಂಗಳವಾರದಿಂದ (ಡಿ. 3) ಪ್ರತಿ ಕರೆ ಮತ್ತು ಡೇಟಾ ಬಳಕೆಗೆ ಶೇ 42ರವರೆಗೆ ಹೆಚ್ಚಿನ ಬೆಲೆ ತೆರಬೇಕಾಗುತ್ತದೆ.
ವೊಡಾಫೋನ್ ಐಡಿಯಾ ಮತ್ತು ಭಾರ್ತಿ ಏರ್ಟೆಲ್ ಕಂಪನಿಗಳು ಡಿಸೆಂಬರ್ 3ರಿಂದ ಜಾರಿಗೆ ಬರುವಂತೆ ಮೊಬೈಲ್ ಕರೆ ಮತ್ತು ಡೇಟಾ ಶುಲ್ಕದಲ್ಲಿ ಏರಿಕೆಯನ್ನು ಘೋಷಿಸಿವೆ. ರಿಲಯನ್ಸ್ ಜಿಯೊ ಕಂಪನಿಯ ಶೇ 40ರಷ್ಟು ದರ ಏರಿಕೆಯು ಇದೇ 6ರಿಂದ ಅನ್ವಯಿಸಲಿದೆ.
ವೊಡಾಫೋನ್ ಐಡಿಯಾದ ಪ್ರೀ–ಪೇಯ್ಡ್ ಗ್ರಾಹಕರು ಒಟ್ಟಾರೆ ಶೇ 42ರಷ್ಟು ಅಧಿಕ ಶುಲ್ಕ ತೆರಬೇಕಾಗಿದೆ. ಬೇರೆ ಕಂಪನಿಗಳ ಮೊಬೈಲ್ ನಂಬರ್ಗೆ ಕಾಲ್ ಮಾಡಿದರೆ ಪ್ರತಿ ನಿಮಿಷಕ್ಕೆ 6 ಪೈಸೆ ಶುಲ್ಕ ತೆರಬೇಕಾಗುತ್ತದೆ.
ಅನಿಯಮಿತ ಕೊಡುಗೆಯಲ್ಲಿ ಹಾಲಿ ಇರುವ ಎಲ್ಲಾ ಪ್ಲ್ಯಾನ್ಗಳೂ ಹೊಸ ಪ್ಲ್ಯಾನ್ಗೆ ಬದಲಾಗಲಿವೆ. ಮಾರುಕಟ್ಟೆಯ ಪ್ರತಿಕ್ರಿಯೆ ಆಧಾರದ ಮೇಲೆ ಹೊಸ ಪ್ಲ್ಯಾನ್ನಲ್ಲಿ ಪರಿಷ್ಕರಣೆ ಆಗಲಿದೆ ಎಂದು ಕಂಪನಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಭಾರಿ ನಷ್ಟದಲ್ಲಿರುವ ಈ ದೂರಸಂಪರ್ಕ ಸೇವಾ ಕಂಪನಿಗಳು ಆರ್ಥಿಕ ಬಿಕ್ಕಟ್ಟಿನಿಂದ ಹೊರಬರಲು ಗ್ರಾಹಕರಿಗೆ ನೀಡುವ ಸೇವೆಗಳ ಮೇಲೆ ಹೆಚ್ಚಿನ ಶುಲ್ಕ ವಿಧಿಸುವ ನಿರ್ಧಾರ ಕೈಗೊಂಡಿವೆ.
ಜಿಯೊ ಕಂಪನಿಯು ಹೊಸ ‘ಆಲ್ ಇನ್ ಒನ್ ಪ್ಲ್ಯಾನ್’ ಪರಿಚಯಿಸಲಿದ್ದು, ಅನಿಯಮಿತ ಕರೆ ಮತ್ತು ಡೇಟಾ ನೀಡಲಿದೆ. ಬೇರೆ ನೆಟ್ವರ್ಕ್ಗೆ ಮಾಡುವ ಕರೆಗೆ ಸಂಬಂಧಿಸಿದಂತೆ ನ್ಯಾಯೋಚಿತ ಬಳಕೆ ನೀತಿ ಪಾಲಿಸಲಾಗುವುದು ಎಂದು ತಿಳಿಸಿದೆ.















ಇನ್ನಷ್ಟು ಸುದ್ದಿಗಳು
ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ: ಏರ್ ಇಂಡಿಯಾ ಮತ್ತು ಇಂಡಿಗೋ ವಿಮಾನ ಹಾರಾಟ ರದ್ದು
ಚೀನಾದಲ್ಲಿ HMPV ವೈರಸ್ ವ್ಯಾಪಕ,ಆಸ್ಪತ್ರೆಗಳು ಫುಲ್: ಆತಂಕ ಬೇಡ- ಕೇಂದ್ರ ಸರ್ಕಾರ
ನೌಕರರ ಮಿಂಚಿನ ಮುಷ್ಕರ : ಅಂತಾರಾಷ್ಟ್ರೀಯ ವಿಮಾನಯಾನ ರದ್ದು
ಅಲ್ಪಸಂಖ್ಯಾತರ ಧಾರ್ಮಿಕ ಸ್ಥಳಗಳ ಮೇಲಿನ ದಾಳಿ ಖಂಡನೀಯ: ತೆಲಂಗಾಣ ಸಿಎಂಗೆ ಎ ಪಿ ಉಸ್ತಾದ್ ಪತ್ರ
ಲಂಚ: ಮೇಘಾ ಇಂಜಿನಿಯರಿಂಗ್ ವಿರುದ್ಧ ಸಿಬಿಐ ಪ್ರಕರಣ – 966 ಕೋಟಿ ಮೌಲ್ಯದ ಎಲೆಕ್ಟೋರಲ್ ಬಾಂಡ್ಗಳನ್ನು ಖರೀದಿಸಿದ್ದ ಕಂಪನಿ ಮೇಘಾ
ಸಮಗ್ರ ಅಭಿವೃದ್ಧಿ ಗೆ ಅಂಬೇಡ್ಕರ್ ತತ್ವ ಪಾಲನೆ ಅಗತ್ಯ : ದ್ರೌಪದಿ ಮುರ್ಮು
ಹರಿಯಾಣ : ಶಾಲಾ ಬಸ್ ಪಲ್ಟಿ; ಆರು ಮಕ್ಕಳು ಸಾವು ಈದ್ ರಜೆಯಲ್ಲೂ ತೆರೆದಿದ್ದ ಶಾಲೆ!
ಭಜರಂಗದಳ ಮಾಜಿ ರಾಜ್ಯ ಸಂಚಾಲಕ ರಘು ಪರಾರಿ
ಮುಸ್ಲಿಂ 2ಬಿ ಮೀಸಲು ರದ್ಧತಿ ಮತಬ್ಯಾಂಕ್ ಭದ್ರಪಡಿಸುವ ಸರಕಾರದ ನಡೆ ಖಂಡನೀಯ- ಎಸ್ ವೈ ಎಸ್
ದೇವಸ್ಥಾನಕ್ಕೆ ಮಾಂಸ ಎಸೆದು, ಕೋಮುಗಲಭೆ- ಪ್ರಮುಖ ಆರೋಪಿ ಚಂಚಲ್ ತ್ರಿಪಾಠಿ ಬಂಧನ