ಅಬುಧಾಬಿ: ಸಾಂಕ್ರಾಮಿಕ ಜ್ವರ- ಸರಕಾರದಿಂದ ಉಚಿತ ಲಸಿಕೆ

ಅಬುಧಾಬಿ: ಹವಾಮಾನ ಬದಲಾವಣೆಯ ಹಿನ್ನೆಲೆಯಲ್ಲಿ ಅಬುಧಾಬಿಯಾಧಯಂತ ಸಾಂಕ್ರಾಮಿಕ ಜ್ವರ ಹರಡುತ್ತಿದೆ. ಸರಕಾರವು ವಲಸಿಗರು ಸೇರಿದಂತೆ ಜನರಿಗೆ ಉಚಿತ ಲಸಿಕೆ ನೀಡಲಿದ್ದು, ಈ ಉದ್ದೇಶಕ್ಕಾಗಿ ಆಸ್ಪತ್ರೆಗಳಲ್ಲಿ ವಿಶೇಷ ಸೌಲಭ್ಯಗಳನ್ನು ಒದಗಿಸಲಾಗಿದೆ.

ಚಳಿಗಾಲದ ಆರಂಭದಿಂದ ಜ್ವರ, ಶೀತ ಮತ್ತು ಸಂಬಂಧಿತ ಕಾಯಿಲೆಗಳಿಗೆ ಚಿಕಿತ್ಸೆ ಪಡೆಯುವ ಜನರ ಸಂಖ್ಯೆ ಹೆಚ್ಚಾಗಿದೆ ಎಂದು ಆರೋಗ್ಯ ಕಾರ್ಯಕರ್ತರು ಅಭಿಪ್ರಾಯಪಟ್ಟಿದ್ದಾರೆ. ಮಕ್ಕಳು ಜ್ವರಪೀಡಿತರಾಗಿ ಶಾಲೆಯಿಂದ ಮನೆಗೆ ಮರಳುತ್ತಿದ್ದಾರೆ. ಚಿಕಿತ್ಸೆ ಪಡೆಯುವ ವಯಸ್ಕರ ಸಂಖ್ಯೆಯೂ ಕಡಿಮೆಯಲ್ಲ. ಈ ಪರಿಸ್ಥಿತಿಯಲ್ಲಿ ಅಬುಧಾಬಿ ಆರೋಗ್ಯ ಪ್ರಾಧಿಕಾರವು ಉಚಿತ ಫ್ಲೂ ಲಸಿಕೆ ಬಳಸಲು ಶಿಫಾರಸು ಮಾಡಿದೆ.

ಅಬುಧಾಬಿಯ ಎಲ್ಲಾ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮತ್ತು ಆಸ್ಪತ್ರೆಗಳಲ್ಲಿ ಎಲ್ಲಾ ಅಬುಧಾಬಿ ವಿಸಾ ಹೊಂದಿರುವವರಿಗೆ ಉಚಿತ ಫ್ಲೂ ಲಸಿಕೆ ಲಭ್ಯವಿದೆ. ಟೋಲ್ ಫ್ರೀ ಸಂಖ್ಯೆ 80050 ಗೆ ಕರೆ ಮಾಡಿ ಇಂಜೆಕ್ಷನ್ ಬುಕ್ ಮಾಡಬಹುದು. ಲಸಿಕೆ ಹಾಕಲು ಬರುವವರು ಎಮಿರೇಟ್ಸ್ ಐಡಿಯನ್ನು ಹೊಂದಿರಬೇಕು

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com
error: Content is protected !!