ಪುತ್ತೂರು : ಪುತ್ತೂರು ತಾಲೂಕು ಕುರಿಯದಲ್ಲಿ ನಡೆದ ಕೊಲೆ ಪ್ರಕರಣದ ಆರೋಪಿಯನ್ನು ಇಪ್ಪತ್ತನಾಲ್ಕು ಗಂಟೆಯೊಳಗೆ ಬಂಧಿಸಿ ನಾಗರಿಕರ ಪ್ರಶಂಸೆಗೆ ಕಾರಣವಾದ ಸಂಪ್ಯ ಠಾಣಾಧಿಕಾರಿ ಸತ್ತಿವೇಲು ರವರನ್ನು ಕರ್ನಾಟಕ ಮುಸ್ಲಿಂ ಜಮಾಅತ್ ಪುತ್ತೂರು ತಾಲ್ಲೂಕು ಸಮಿತಿ ಪದಾಧಿಕಾರಿಗಳು ಶಾಲು ಹೊದಿಸಿ, ಸ್ಮರಣಿಕೆ ನೀಡಿ ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ಮುಸ್ಲಿಂ ಜಮಾಅತ್ ಕಮಿಟಿ ಅಧ್ಯಕ್ಷ ಅಬ್ದುಲ್ ರಹಿಮಾನ್ ಹಾಜಿ ಅರಿಯಡ್ಕ, ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಹಾಜಿ ಹಾಜಿ ಬೈತಡ್ಕ , ಕೋಶಾಧಿಕಾರಿ ಮುಹಮ್ಮದ್ ಹಾಜಿ ಕುಕ್ಕುವಳ್ಳಿ, ಶುಕೂರ್ ಹಾಜಿ,ಇಂಜಿನಿಯರ್ ಅಲಿಕುಂಞ್ಞಿ ಹಾಜಿ ಕೊರಿಂಗಿಲ, ಅಲೆಕ್ಕಾಡಿ ಇಬ್ರಾಹಿಂ ಹಾಜಿ, ರಶೀದ್ ಸಂಪ್ಯ ಮುಂತಾದವರು ಉಪಸ್ಥಿತರಿದ್ದರು.






