ಶಾರ್ಜಾ: ಲೋಕ ಪ್ರವಾದಿ ಮುಹಮ್ಮದ್ ಮುಸ್ತಫಾ ಸ.ಅ ರವರ 1494ನೇ ಜನ್ಮ ದಿನದ ಪ್ರಯುಕ್ತ, “ಹಬೀಬ್ (ಸ.ಅ.) ನಮ್ಮ ಜತೆಗಿರಲಿ” ಎಂಬ ಘೋಷವಾಕ್ಯದೊಂದಿಗೆ, ದಿನಾಂಕ 22-11-19 ರಂದು ಶುಕ್ರವಾರ ಸಂಜೆ 6 ಗಂಟೆಗೆ ಶಾರ್ಜಾದ ಖಾಸಿಮಿಯಾದಲ್ಲಿರುವ ರಯಾನ್ ಹೋಟೆಲಿನಲ್ಲಿ ಗ್ರ್ಯಾಂಡ್ ಮೀಲಾದ್ ಸಮಾವೇಶ ಹಮ್ಮಿಕೊಳ್ಳಲಾಗಿದೆ.
ಕೆ.ಸಿ.ಎಫ್ ಶಾರ್ಜಾ ವಲಯದ ಅಧ್ಯಕ್ಷರಾದ ಬಹು! ಅಬೂಸ್ವಾಲಿಹ್ ಸಖಾಫಿಯವರ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರಂಭದಲ್ಲಿ, ಕೆ.ಸಿ.ಎಫ್ ಯು.ಎ.ಇ. ಶಿಕ್ಷಣ ವಿಭಾಗದ ಅಧ್ಯಕ್ಷರಾದ ಇಬ್ರಾಹಿಂ ಸಖಾಫಿಯವರು ದುಆ ನೆರವೇರಿಸಲಿದ್ದಾರೆ. ಕೆ.ಸಿ.ಎಫ್ ರಾಷ್ಟ್ರೀಯ ಸಮಿತಿ ಯು.ಎ.ಇ ಇದರ ಅಧ್ಯಕ್ಷರಾದ ಬಹು! ಅಬ್ದುಲ್ ಜಲೀಲ್ ನಿಝಾಮಿಯವರು ಸಮಾರಂಭದ ಉದ್ಘಾಟನೆಗೈಯಲಿದ್ದು, ಮೀಲಾದ್ ಸ್ವಾಗತ ಸಮಿತಿಯ ಅಧ್ಯಕ್ಷರಾದ ಯು.ಟಿ. ನೌಶದ್ ರವರು ಸ್ವಾಗತ ಭಾಷಣ ಮಾಡಲಿದ್ದಾರೆ. ಕೆ.ಸಿ.ಎಫ್ ಶಾರ್ಜಾ ವಲಯ ಸಮಿತಿಯ ಪ್ರಧಾನ ಕಾರ್ಯದರ್ಶಿ ರಜಬ್ ಮುಹಮ್ಮದ್ ಉಚ್ಚಿಲ ಪ್ರಾಸ್ತಾವಿಕ ಭಾಷಣ ಮಾಡಲಿದ್ದಾರೆ.

ಬಹುಮಾನ್ಯ ಬದ್ರುಸ್ಸಾದಾತ್ ಅಸ್ಸಯ್ಯಿದ್ ಇಬ್ರಾಹಿಮ್ ಖಲೀಲ್ ಅಲ್ ಬುಖಾರಿ ತಂಙಲ್ ರವರು ಮುಖ್ಯ ಅತಿಥಿಯಾಗಿ ಆಗಮಿಸಿ ದುಆಕ್ಕೆ ನೇತೃತ್ವ ನೀಡಲಿದ್ದಾರೆ.
ಬಹು! ಮಸ್ಊದ್ ಸಖಾಫಿ ಗೂಡಲ್ಲೂರು ರವರು ಹುಬ್ಬುರಸೂಲ್ ಮುಖ್ಯ ಭಾಷಣ ಮಾಡಲಿದ್ದಾರೆ.
ಸಮಾರಂಭದಲ್ಲಿ ಶಾರ್ಜಾ ಝೋನ್ ತಂಡದಿಂದ ಆಕರ್ಷಕ ದಫ್ ಪ್ರದರ್ಶನ, ಮೌಲಿದ್ ಪಾರಾಯಣ, ಮನಮೋಹಕ ಬುರ್ದಾ ಆಲಾಪನೆ, ನಾತೇ ಶರೀಫ್ ನಡೆಯಲಿದ್ದು, ಸಮಾರಂಭದಲ್ಲಿ ಕೆ.ಸಿ.ಎಫ್ ಅಂತರಾಷ್ಟ್ರೀಯ ನೇತಾರರು, ಉಮಾರಾ ನಾಯಕರು, ಉಲಮಾಗಳು ಭಾಗವಹಿಸುವುದಾಗಿ ಸ್ವಾಗತ ಸಮಿತಿ ನೇತಾರರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪತ್ರಿಕಾ ಗೋಷ್ಠಿಯಲ್ಲಿ ಭಾಗವಹಿಸಿದವರು:
ಬಹು ನೌಶಾದ್ ಯು.ಟಿ.(ಅಧ್ಯಕ್ಷರು ಮೀಲಾದ್ ಸ್ವಾಗತ ಸಮಿತಿ )
ಬಹು ಅಬೂಸ್ವಾಲಿಹ್ ಸಖಾಫಿ (ಕೆ.ಸಿ.ಎಫ್ ಶಾರ್ಜ ಝೋನ್ ಅಧ್ಯಕ್ಷರು)
ಬಹು ರಜಬ್ ಮಹಮ್ಮದ್ (ಕೆ.ಸಿ.ಎಫ್ ಶಾರ್ಜ ಝೋನ್ ಪ್ರಧಾನ ಕಾರ್ಯದರ್ಶಿ)
ಬಹು ಮುಹಮ್ಮದ್ ಹುಸೈನ್ ಇನೋಳಿ (ಕಾರ್ಯದರ್ಶಿ, ಕೆ.ಸಿ.ಎಫ್ ಶಾರ್ಜ ಝೋನ್ ಮೀಲಾದ್ ಸ್ವಾಗತ ಸಮಿತಿ)
ಬಹು ಕರೀಂ ಮುಸ್ಲಿಯಾರ್ (ಅಧ್ಯಕ್ಷರು , ಪ್ರಕಾಶನ ವಿಭಾಗ ಕೆ.ಸಿ.ಎಫ್ ಯು.ಎ.ಈ)
ಬಹು ತಾಜುದ್ಧೀನ್ ಅಮ್ಮುಂಜೆ (ಅಧ್ಯಕ್ಷರು ಮೀಡಿಯಾ ಸಮಿತಿ , ಮೀಲಾದ್ ಸ್ವಾಗತ ಸಮಿತಿ)















ಇನ್ನಷ್ಟು ಸುದ್ದಿಗಳು
ಝಮೀರ್ ಹಜ್ ಜಮೀನು ಹೇಳಿಕೆಗೆ ಖಂಡನೆ: ಮಂಗಳೂರಿನ ಸ್ಥಿತಿವಂತ ಮುಸ್ಲಿಮರು ಈ ರಾಜ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ: ಮಾಜಿ ಮೇಯರ್ ಕೆ.ಅಶ್ರಫ್
ಸಲೀಂ ಅಹ್ಮದ್ ರಿಯಾದಿನಲ್ಲಿ ನಿಧನ. ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್ ರಿಯಾದ್
ಕುದ್ರೋಳಿ ಮಖಾಂ ಉರೂಸ್ 2027 ಜನವರಿ 1 ರಿಂದ ಜನವರಿ 9
ಬೆಳ್ತಂಗಡಿ ತಾಲೂಕು ಮೊಹಲ್ಲಾಗಳಿಂದ ತಾಜುಲ್ ಉಲಮಾ ದರ್ಸ್ ಗೆ 10 ಲಕ್ಷ ರೂಪಾಯಿ ಚೆಕ್ ಹಸ್ತಾಂತರ
ತಾಜುಲ್ ಉಲಮಾ ಉರೂಸ್ ಯಶಸ್ಸಿಗೆ ಎಸ್ ವೈ ಎಸ್ ಕರೆ
ಮಂಗಳಪೇಟೆಯ ಈ ಮಕ್ಕಳು ನಮ್ಮ ಮಕ್ಕಳಿಗೆ ಮಾದರಿಯಾಗಲಿ
ಬುರೈದದಲ್ಲಿ ಕೆಸಿಎಫ್ ಅಲ್ ಕಸೀಮ್ ಝೋನ್ ವತಿಯಿಂದ ಲೆಗಸಿ ನೈಟ್-2026 ಫ್ಯಾಮಿಲಿ ಮೀಟ್
ನಮ್ಮ ಭಾರತ ನಮ್ಮ ಹೆಮ್ಮೆ’: ಕೆಸಿಎಫ್ ಸೌದಿ ಅರೇಬಿಯಾದ ರಾಷ್ಟ್ರೀಯ ಮಟ್ಟದ ಆನ್ಲೈನ್ ಸಂವಾದ
ಗೂಡಿನಬಳಿ ಸುನ್ನೀ ಸೆಂಟರ್ ವತಿಯಿಂದ ಸ್ವಾತಂತ್ರ್ಯೋತ್ಸವ
ಕೆ.ಸಿ.ಎಫ್. ಸೌದಿ ರಾಷ್ಟ್ರೀಯ ಸಮಿತಿಯಿಂದ ಆನ್ಲೈನ್ ಸಂವಾದ ಕಾರ್ಯಕ್ರಮಈ