ದುಬೈ: ಕರ್ನಾಟಕ ಕಲ್ಚರಲ್ ಫೌಂಡೇಶನ್ ಕೆಸಿಎಫ್ ದುಬೈ ನಾರ್ತ್ ಝೋನ್ ಆಶ್ರಯದಲ್ಲಿ “ಹಬೀಬ್ ﷺ ನಮ್ಮ ಜತೆಗಿರಲಿ” ಎಂಬ ಶೀರ್ಷಿಕೆಯಲ್ಲಿ ಬೃಹತ್ ಮೀಲಾದ್ ಸಮಾವೇಶ ನವೆಂಬರ್ 22 ರಂದು ಸಂಜೆ 5. 30ಕ್ಕೆ ದುಬೈ ದೇರಾ ಸಿಟಿ ಸೆಂಟರ್ ಹತ್ತಿರವಿರುವ ಪರ್ಲ್ ಸಿಟಿ ಸೂಟ್ ಹೋಟೆಲ್ ಸಂಭಾಂಗಣದಲ್ಲಿ ನಡೆಯಲಿದೆ.
ದಕ್ಷಿಣ ಕನ್ನಡ ಜಿಲ್ಲಾ ಸಂಯುಕ್ತ ಖಾಝಿ ಖುರ್ರತ್ತುಸ್ಸಾದಾತ್ ಸಯ್ಯದ್ ಪಝಲ್ ಕೋಯಮ್ಮ ತಂಙ್ಞಳ್ ಕೂರತ್ ದುಆ ನೇತೃತ್ವವನ್ನು ನೀಡಲಿದ್ದು, ಮೀಲಾದ್ ಸ್ವಾಗತ ಸಮಿತಿ ಅಧ್ಯಕ್ಷ ಇಬ್ರಾಹಿಂ ಮದನಿ ಸಾಮಣಿಗೆ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರಂಭದಲ್ಲಿ ಖ್ಯಾತ ವಾಗ್ಮಿಯೂ, ಕರ್ನಾಟಕ ರಾಜ್ಯ ಎಸ್ಸೆಸ್ಸೆಫ್ ಕಾರ್ಯದರ್ಶಿ ಮೌಲನಾ ಸಿರಾಜುದ್ದೀನ್ ಸಖಾಫಿ ಕನ್ಯಾನ ಮುಖ್ಯ ಭಾಷಣ ಮಾಡಲಿದ್ದಾರೆ.
ಕೆಸಿಎಫ್ ಅಂತರರಾಷ್ಟ್ರೀಯ ಸಮಿತಿ ಅಧ್ಯಕ್ಷ ಹಾಜಿ ಶೈಖ್ ಬಾವಾ ಮಂಗಳೂರು ಸಮಾರಂಭವನ್ನು ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಕರ್ನಾಟಕ ರಾಜ್ಯ ಎಸ್ಸೆಸ್ಸೆಫ್ ಪ್ರಧಾನ ಕಾರ್ಯದರ್ಶಿ ಯಾಕೂಬ್ ಮಾಸ್ಟರ್ ಕೊಳಕೇರಿ, ಕೆಸಿಎಫ್ ಅಂತರರಾಷ್ಟ್ರೀಯ ಸಮಿತಿ ಹಣಕಾಸು ವ್ಯವಸ್ಥಾಪಕರಾದ ಅಬ್ದುಲ್ ಹಮೀದ್ ಸಅದಿ ಈಶ್ವರಮಂಗಳ, ಕೆಸಿಎಫ್ ಯುಎಇ ರಾಷ್ಟ್ರೀಯ ಸಮಿತಿ ಅಧ್ಯಕ್ಷರಾದ ಅಬ್ದುಲ್ ಜಲೀಲ್ ನಿಝಾಮಿ ಎಮ್ಮೆಮಾಡು ಭಾಗವಹಿಸಲಿದ್ದಾರೆ.
ಡಾ. ರಫೀಕ್ ಅಹ್ಮದ್ (ಮಾಜೀ ಶಾಸಕರು ಹಾಗೂ ಡೈರೆಕ್ಟರ್ HMS Institute of technology, ತುಮಕೂರು), ಜನಾಬ್ ನಾಗೂರ್ ಅಬ್ದುಲ್ ಸಮದ್ (ಶಾರ್ಜಾ), ಜನಾಬ್ ನಝೀರ್ ಎಂ (HMS Institute of technology, ತುಮಕೂರು), ಸಯ್ಯದ್ ಶೈಖ್ ಮಖ್ದೂಂ (ಮೇನೇಜಿಂಗ್ ಡೈರೆಕ್ಟರ್, ರಾಯಲ್ ಡಿಲೈಟ್ ಈವೆಂಟ್ಸ್, ದುಬೈ), ಜನಾಬ್ ಇಕ್ಬಾಲ್ ಸಿದ್ದಕಟ್ಟೆ (ಮೇನೇಜಿಂಗ್ ಡೈರೆಕ್ಟರ್, ಅಲ್ ರಾಬಿಅ ಜನರಲ್ ಮೈನ್’ಟನೆನ್ಸ್, ದುಬೈ), ಶೈಖ್ ಅಲಿ ದಾರ್ವಿಶ್ ಹಸನ್ ಅಲ್ ಮಕ್ಕಿ (ದುಬೈ) , ಶೈಖ್ ಮಹ್ಮೂದ್ ಹುಸೈನ್ ಇಬ್ರಾಹಿಂ (ದುಬೈ), ಶೈಖ್ ಇಬ್ರಾಹಿಂ ದಾರ್ವಿಶ್ ಹಸನ್ ಅಲ್ ಮಕ್ಕಿ (ದುಬೈ), ಜನಾಬ್ ಅನ್ವರ್ ನೆಲ್ಲಿಕುನ್ನ್, ಜನಾಬ್ ರಶೀದ್ ಕೈಕಂಬ ಸೇರಿದಂತೆ ದುಬೈಯಲ್ಲಿರುವ ಪ್ರಮುಖ ಉದ್ಯಮಿಗಳು, ಸಾಮಾಜಿಕ ಸಾಂಸ್ಕೃತಿಕ ಕ್ಷೇತ್ರದ ಹಲವಾರು ಗಣ್ಯ ವ್ಯಕ್ತಿಗಳು ಭಾಗವಹಿಸಲಿದ್ದಾರೆ.
ಖ್ಯಾತ ಗಾಯಕರಾದ ಹಾಫಿಝ್ ಶಿಹಾಬುದ್ದೀನ್ ಬಾಖವಿ ಕಾವುಂಪಡಿ ನೇತೃತ್ವದಲ್ಲಿ ಬುರ್ದಾ ಆಲಾಪನೆ, ಮೌಲೂದ್ ಪಾರಾಯಣ, ಆಕರ್ಷಣೀಯ ದಫ್ಫ್ ಪ್ರದರ್ಶನ, ಪ್ರತಿಭೋತ್ಸವ ವಿಜೇತ ಸೆಕ್ಟರ್ ಹಾಗೂ ಕಲಾಪ್ರತಿಭೆಗೆ ಬಹುಮಾನ ವಿತರಣೆ, ಸನ್ಮಾನ ಸಮಾರಂಭ ನಡೆಯಲಿದೆ.
ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದವರು
1. ಇಬ್ರಾಹಿಂ ಮದನಿ ಸಾಮಣಿಗೆ (ಛೇರ್ಮನ್, ಮೀಲಾದ್ ಸ್ವಾಗತ ಸಮಿತಿ)
2. ಇಸ್ಮಾಯಿಲ್ ಮದನಿನಗರ (ಅಧ್ಯಕ್ಷರು ಕೆಸಿಎಫ್ ದುಬೈ ನಾರ್ತ್ ಝೋನ್)
3. ಬಶೀರ್ ಪಡುಬಿದ್ರಿ (ಕನ್ವೀನರ್, ಮೀಲಾದ್ ಸ್ವಾಗತ ಸಮಿತಿ)
4. ಕಲಂದರ್ ಕಬಕ (ಕನ್ವೀನರ್, ಪ್ರತಿಭೋತ್ಸವ ಸಮಿತಿ)
5. ರಿಯಾಝ್ ಕೊಂಡಂಗೇರಿ (ಕೊಆರ್ಡಿನೇಟರ್, ಮೀಲಾದ್ ಸ್ವಾಗತ ಸಮಿತಿ
















ಇನ್ನಷ್ಟು ಸುದ್ದಿಗಳು
ಝಮೀರ್ ಹಜ್ ಜಮೀನು ಹೇಳಿಕೆಗೆ ಖಂಡನೆ: ಮಂಗಳೂರಿನ ಸ್ಥಿತಿವಂತ ಮುಸ್ಲಿಮರು ಈ ರಾಜ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ: ಮಾಜಿ ಮೇಯರ್ ಕೆ.ಅಶ್ರಫ್
ಸಲೀಂ ಅಹ್ಮದ್ ರಿಯಾದಿನಲ್ಲಿ ನಿಧನ. ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್ ರಿಯಾದ್
ಕುದ್ರೋಳಿ ಮಖಾಂ ಉರೂಸ್ 2027 ಜನವರಿ 1 ರಿಂದ ಜನವರಿ 9
ಬೆಳ್ತಂಗಡಿ ತಾಲೂಕು ಮೊಹಲ್ಲಾಗಳಿಂದ ತಾಜುಲ್ ಉಲಮಾ ದರ್ಸ್ ಗೆ 10 ಲಕ್ಷ ರೂಪಾಯಿ ಚೆಕ್ ಹಸ್ತಾಂತರ
ತಾಜುಲ್ ಉಲಮಾ ಉರೂಸ್ ಯಶಸ್ಸಿಗೆ ಎಸ್ ವೈ ಎಸ್ ಕರೆ
ಮಂಗಳಪೇಟೆಯ ಈ ಮಕ್ಕಳು ನಮ್ಮ ಮಕ್ಕಳಿಗೆ ಮಾದರಿಯಾಗಲಿ
ಬುರೈದದಲ್ಲಿ ಕೆಸಿಎಫ್ ಅಲ್ ಕಸೀಮ್ ಝೋನ್ ವತಿಯಿಂದ ಲೆಗಸಿ ನೈಟ್-2026 ಫ್ಯಾಮಿಲಿ ಮೀಟ್
ನಮ್ಮ ಭಾರತ ನಮ್ಮ ಹೆಮ್ಮೆ’: ಕೆಸಿಎಫ್ ಸೌದಿ ಅರೇಬಿಯಾದ ರಾಷ್ಟ್ರೀಯ ಮಟ್ಟದ ಆನ್ಲೈನ್ ಸಂವಾದ
ಗೂಡಿನಬಳಿ ಸುನ್ನೀ ಸೆಂಟರ್ ವತಿಯಿಂದ ಸ್ವಾತಂತ್ರ್ಯೋತ್ಸವ
ಕೆ.ಸಿ.ಎಫ್. ಸೌದಿ ರಾಷ್ಟ್ರೀಯ ಸಮಿತಿಯಿಂದ ಆನ್ಲೈನ್ ಸಂವಾದ ಕಾರ್ಯಕ್ರಮಈ