ಮದೀನಾ ಮುನವ್ವರ: ದಾರುಲ್ ಇರ್ಷಾದ್ ಎಜುಕೇಶನ್ ಸೆಂಟರ್ ಮಾಣಿ ಇದರ ಮದೀನಾ ಘಟಕ ವತಿಯಿಂದ ಸ್ನೇಹ ಕೂಟ ಹಾಗೂ ಮಾಸಿಕ ಸ್ವಲಾತ್ ಮದೀನಾ ಮುನವ್ವರದಲ್ಲಿ ಶುಕ್ರವಾರ ನಡೆಯಿತು.
ಹುಬ್ಬುನ್ನಬಿ ಎಂಬ ವಿಷಯದ ಬಗ್ಗೆ ದಾರುಲ್ ಇರ್ಷಾದ್ ಎಜುಕೇಶನ್ ಸೆಂಟರ್ ಮಾಣಿ ಇದರ ಮುದರಿಸ್ ಇಸ್ಮಾಯಿಲ್ ಸಅದಿ ಮಾಚಾರ್ ಮಾತನಾಡಿದರು. ಧಾರ್ಮಿಕ ಲೌಕಿಕ ಸಮನ್ವಯ ಶಿಕ್ಷಣದ ಕರ್ನಾಟಕದ ಮೊದಲ ಸಂಸ್ಥೆ ದಾರುಲ್ ಇರ್ಷಾದ್ ಎಜುಕೇಶನ್ ಸೆಂಟರ್ ಮಾಣಿ.
30 ವರ್ಷಗಳ ಸುದೀರ್ಘ ಇತಿಹಾಸ ಹೊಂದಿರುವ ಸಂಸ್ಥೆಯು 2020 ಮಾರ್ಚ್ 2 ರಂದು ಮೂವತ್ತನೇ ವಾರ್ಷಿಕ ಸಮ್ಮೇಳನ ಆಚರಿಸಲಿದೆ ಎಂದರು.
ಎಸ್.ವೈ.ಎಸ್ ದ.ಕ.ಜಿಲ್ಲಾಧ್ಯಕ್ಷ ಉಸ್ಮಾನ್ ಸಅದಿ ಪಟೋರಿ ಅವರು, ಝೈನುಲ್ ಉಲಮಾ ಮಾಣಿ
ಉಸ್ತಾದರ ಆತ್ಮಾರ್ಥ ಸೇವೆಯ ಬಗ್ಗೆ ವಿವರಿಸಿದರು. ಈ ಸಂಸ್ಥೆಯಲ್ಲಿ ಹಲವಾರು ವಿದ್ಯಾರ್ಥಿಗಳು ಧಾರ್ಮಿಕ ಲೌಕಿಕ ಶಿಕ್ಷಣ ಪಡೆದು, ಸಮಾಜ ಮುಖಿ ಕಾರ್ಯದಲ್ಲಿ ತೊಡಗಿದ್ದಾರೆ ಎಂದರು.
ಸಯ್ಯದ್ ಅಬ್ದುಲ್ ಸಲಾಂ ಆದೂರು ಅವರು ದುವಾ ನೆರವೇರಿಸಿದರು. ದಾರುಲ್ ಇರ್ಷಾದ್ ಮದೀನಾ ಘಟಕದ ಆರ್ಗನೈಸರ್ ಉಮ್ಮರ್ ಕಾಮಿಲ್ ಸಖಾಫಿ ಸ್ವಾಗತಿಸಿದರು. ಅಶ್ರಫ್ ಸಖಾಫಿ ನೂಜಿ ವಂದಿಸಿದರು.
ವರದಿ : ಹಕೀಂ ಬೋಳಾರ್















ಇನ್ನಷ್ಟು ಸುದ್ದಿಗಳು
ಮುಸ್ಲಿಂ ನಾಯಕರ ಕಡೆಗಣನೆ: ಕಾಂಗ್ರೆಸ್ ಪಕ್ಷ ಧೂಳಿಪಟ ದೂರವಿಲ್ಲ- ರಜ್ವಿ
ವಾಮಂಜೂರು: ಸಾಂತ್ವನ ಹಾಗೂ ಹಣ್ಣು ಹಂಪಲು ವಿತರಣೆ
ಮಂಗಳೂರು ಮೂಲದ ಶಾಜಹಾನ್ ರಸ್ತೆ ಅಪಘಾತದಲ್ಲಿ ಮರಣ
ಕಿನ್ಯ:ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಸಾಹಿತ್ಯ ಹಬ್ಬಕ್ಕೆ ವಿದ್ಯುಕ್ತ ಚಾಲನೆ – ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಅಲ್ ಮದೀನಾದಲ್ಲಿ ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಮೇ 7ರಂದು ದಾರುಲ್ ಅಮಾನ್ ಎಲ್ಲೂರಿನಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಹಾಗೂ ಸನದು ದಾನ ಸಮಾರಂಭ
ಎಪ್ರಿಲ್ 29 ಕ್ಕೆ ಸಾಮೂಹಿಕ ಉಚಿತ ಸುನ್ನತ್ (ಮುಂಜಿ) ಕಾರ್ಯಕ್ರಮ
ಎಸ್ ವೈ ಎಸ್ ವಾರ್ಷಿಕ ಕೌನ್ಸಿಲ್ ಅಭಿಯಾನ ಆರಂಭ
ಬಾಬಾ ಬುಡನ್ ದರ್ಗಾದಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಸಂದಲ್ ಮತ್ತು ಉರುಸ್ ಆಚರಣೆಗೆ ಜಿಲ್ಲಾಡಳಿತ ಅವಕಾಶ ನಿರಾಕರಣೆ