ಬೆಂಗಳೂರು :ಮಜ್ಲಿಸ್ ಶಿಫಾ ಅಸ್ಸ ಖಾಫಿ ಅಲ್ ಇಸ್ಲಾಮಿ ಆದೂರು ಇದರ ಸಾರಥ್ಯದಲ್ಲಿ ಮಜ್ಲಿಸ್ ಮದ್ರಸತುಸುಪ್ಪ ತರಗತಿ ಹಾಗೂ ಸಖಾಫಿಯ್ಯ ರಾತೀಬ್ ಬೆಂಗಳೂರಿನ ಎಂ.ಎಸ್.ಪಾಳ್ಯ ಕೋಯಸ್ ಪ್ಯಾಕ್ಟರಿ ಶಾಫಿ ಮಸ್ಜಿದ್ ನಲ್ಲಿ ನಡೆಯಿತು.
ಆದೂರು ಮಜ್ಲಿಸ್ ರೂವಾರಿ ಮುಹಮ್ಮದ್ ಅಶ್ರಫ್ ಅಸ್ಸಖಾಫ್ ತಂಙಳ್ ಮದನಿ ಅವರು 20 ವರ್ಷಗಳ ಹಿಂದೆ ತೊಡಗಿದ ರಾತೀಬ್ ನ ವಿಶೇಷತೆಯನ್ನು ತಿಳಿಸಿದರು. ಕ್ಯಾನ್ಸರ್ ನಿಂದ ಬಳಲುತ್ತಿದ್ದವರಿಗೆ ಚಿಕಿತ್ಸೆಯಿಲ್ಲದೆ ಕ್ಯಾನ್ಸರ್ ನಿವಾರಣೆ ಆಗಿದ್ದು, ಬಾಯಿ ಬಾರದ ಹಲವರು ಮಾತನಾಡಿದ್ದು ಹಾಗೂ ಡಯಾಲಿಸಿಸ್ ನಿಂದ ಬಳಲುತ್ತಿದ್ದವರ ರೋಗ ಗುಣಮುಖವಾದಂತಹ ಹಲವು ಪವಾಡಗಳು ಈ ರಾತೀಬ್ ಮುಖಾಂತರ ಆಗಿವೆ. ಎಲ್ಲರೂ ಇಂತಹ ರಾತೀಬ್ ನಲ್ಲಿ ಪಾಲ್ಗೊಳ್ಳುವಂತೆ ಕರೆ ನೀಡಿದರು.
ಈ ವೇಳೆ ತಾಜುದ್ದೀನ್ ಸಖಾಫಿ ಮಾತನಾಡಿ ಧಾರ್ಮಿಕ ಶಿಕ್ಷಣದ ಕೊರತೆಯಿರುವ 22ವರ್ಷದ ಮೇಲ್ಪಟ್ಟ ಪುರುಷರಿಗೆ ಹಾಗೂ ಮಹಿಳೆಯರಿಗೆ ಅರೇಬಿಕ್ ಭಾಷೆ ,ಖುರಾನ್ ಕಲಿಸುವ ಮೂಲಕ ಸಾಕ್ಷರರನ್ನಾಗಿ ಮಾಡಲು ಈ ಮಜ್ಲಿಸ್ ಉಪಕಾರಿಯಾಗಿದ್ದು, ಸಯ್ಯಿದ್ ಆದೂರು ತಂಙಳರ ಬಗ್ಗೆ ಮಾಹಿತಿ ನೀಡಿದರು. ರಹೀಮ್ ಅನುಗ್ರಹ ತಲಶ್ಶೇರಿ, ಡಾ. ಅನ್ಸಾಬ್ ಉಳ್ಳಾಲ, ಕೋಯ ಅಗರಬತ್ತಿ ಮಾಲಕ ಕೋಯ ಹಾಜಿ ಮತ್ತಿತರರು ಉಪಸ್ಥಿತರಿದ್ದರು.
ವರದಿ : ಹಕೀಂ ಬೋಳಾರ್















ಇನ್ನಷ್ಟು ಸುದ್ದಿಗಳು
ರಾಜ್ಯ ಸರ್ಕಾರಕ್ಕೆ ದಕ್ಷಿಣ ಕನ್ನಡ ಜಿಲ್ಲಾ ವಖ್ಫ್ ಸಲಹಾ ಸಮಿತಿಯಿಂದ ಅಭಿನಂದನೆಗಳು
‘ಎನ್ ಹಾನ್ಸ್ ಇಂಡಿಯಾ ಕಾನ್ಫರೆನ್ಸ್’- ಮಂಗಳೂರಿನ ಸಮಾವೇಶಕ್ಕೆ ಕ್ಷಣಗಣನೆ
ಪಬ್ಲಿಕ್ ಟಿವಿಯ ರಂಗನಾಥ್ ವಿರುದ್ಧ ಜಾಮೀನು ರಹಿತ ಪ್ರಕರಣ ದಾಖಲಿಸುವಂತೆ ನ್ಯಾಯಾಲಯ ಆದೇಶ
‘ಕೈ’ ಪಾಲಯಕ್ಕೆ ಸಿಎಂ ಇಬ್ರಾಹಿಂ ಗುಡ್ ಬೈ – ಜೆಡಿಎಸ್ ಸೇರುವುದು ಖಚಿತ.?
ಮದ್ರಸಾಗಳಲ್ಲಿ, ಜನಗಳ ಮಧ್ಯೆ ಸೌಹಾರ್ದ, ಸಹಬಾಳ್ವೆ, ಭ್ರಾತೃತ್ವ ಸಂಬಂಧಗಳನ್ನು ಬೆಳೆಸಲು ಕಲಿಸಲಾಗುತ್ತಿದೆ- ರಾಜ್ಯ ಸರ್ಕಾರ
ರೌಳತುಲ್ ಉಲೂಂ ಓಲ್ಡ್ ಸ್ಟೂಡೆಂಟ್ಸ್ ಉಕ್ಕುಡ ಆಯೋಜಿಸಿದ ಸ್ನೇಹ ಸಂಗಮ
ರಾಜ್ಯದಲ್ಲಿ ನೈಟ್ ಕರ್ಪ್ಯೂ- ರಾತ್ರಿ 10 ರಿಂದ ಯಾವುದೇ ವಾಹನಗಳ ಓಡಾಟಕ್ಕೆ ಅವಕಾಶವಿಲ್ಲ
ಜನವರಿಯಲ್ಲಿ ಸಿಎಂ ಬೊಮ್ಮಾಯಿ ಬದಲಾವಣೆ ಖಚಿತ- ಸಿಎಂ ಇಬ್ರಾಹಿಂ
ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಸಭೆಯಲ್ಲಿ ಕೈಗೊಂಡ ನಿರ್ಣಯಗಳು
ಮತಾಂತರ ನಿಷೇಧ ಮಸೂದೆ- ಹೈಕೋರ್ಟ್ ಮೆಟ್ಟಿಲೇರಲು ಮುಂದಾದ ಕ್ರೈಸ್ತರು