ಜುಬೈಲ್: ಕೆ.ಸಿ.ಎಫ್. ದಮಾಂ ವ್ಯಾಪ್ತಿಯ ಶೋಲಾ ಸೆಕ್ಟರ್ ಅಧೀನದ ಶಿಫಾ ಹಾಗು ಕುಡು ಯುನಿಟ್ ನ ಝೀಲ್ 19 ಕ್ಯಾಂಪ್ ಅತ್ಯಂತ ವಿಜಯಕರವಾಗಿ 18 ಅಕ್ಟೋಬರ್ 2019 ಶುಕ್ರವಾರ ರಾತ್ರಿ 6 ರಿಂದ 8 ಗಂಟೆ ತನಕ ಬಹಳ ವಿಜೃಂಭಣೆಯಿಂದ ನಡೆಯಿತು. ರಾತ್ರಿ 6 ಗಂಟೆಗೆ ಮನ್ಸೂರ್ ಸಹದಿ ಯವರ ಕಿರಾಹತ್ ಹಾಗು ದುಆ ಮೂಲಕ ಆತ್ಮೀಯ ಚಾಲನೆ ಕೊಟ್ಟರು.
ಸಭೆಯನ್ನು ಅನಸ್ ಸಹದಿ ಉಸ್ತಾದ್ ರವರು ಉದ್ಘಾಟನೆ ಮಾಡಿದರು. ಸೆಕ್ಟರ್ ಝೀಲ್ ಉಸ್ತುವಾರಿ ಶರೀಫ್ ಗಾಣೆಮಾರ್ ಸಭೆಯ ಅಧ್ಯಕ್ಷತೆ ವಹಿಸಿದರು.
ಕಾರ್ಯಕರ್ತನ ದಿನಚರಿ ಹಾಗು ಸಂಘಟನೆ ಏಕೆ, ಸುನ್ನೀ ಸಂಘಟನೆಗಳ ಅನಿವಾರ್ಯತೆ ಬಗ್ಗೆ ಸಿಟಿ ಸೆಕ್ಟರ್ ಶಿಕ್ಷಾಣಾ ಇಲಾಖೆಯ ಅಧ್ಯಕ್ಷರಾದ ಅಶ್ರಫ್ ಸಹದಿ ಉಸ್ತಾದರು ಸವಿಸ್ತಾರವಾಗಿ ತರಗತಿ ಮಂಡಿಸಿದರು.ಮುಖ್ಯ ಅತಿಥಿ ಗಳಾಗಿ ಝೋನ್ ಸಂಘಟನೆಯ ಅಧ್ಯಕ್ಷ ರಾದ ನಿಸಾರ್ ಗೂಡಿನಬಲಿ ಉಪಸ್ಥಿತರಿದ್ದರು. ಕುಡು ಯುನಿಟ್ ಪ್ರಧಾನ ಕಾರ್ಯದರ್ಶಿ ಇನ್ಜಾಂ ಬಜಪೆ ಸ್ವಾಗತಿಸಿ ಕೊನೆಯಲ್ಲಿ ಹೈದರ್ ಗಾಣೆಮಾರ್ ರವರು ಧನ್ಯವಾದ ಸಮರ್ಪಿಸಿದರು.ಕುಡು ಯುನಿಟ್ ಪ್ರದಾನ ಕಾರ್ಯದರ್ಶಿ ಇನ್ಜಾಂ ಬಜಪೆ ಕಾರ್ಯಕ್ರಮ ನಿರೂಪಿಸಿದರು.















ಇನ್ನಷ್ಟು ಸುದ್ದಿಗಳು
ಮುಸ್ಲಿಂ ನಾಯಕರ ಕಡೆಗಣನೆ: ಕಾಂಗ್ರೆಸ್ ಪಕ್ಷ ಧೂಳಿಪಟ ದೂರವಿಲ್ಲ- ರಜ್ವಿ
ವಾಮಂಜೂರು: ಸಾಂತ್ವನ ಹಾಗೂ ಹಣ್ಣು ಹಂಪಲು ವಿತರಣೆ
ಮಂಗಳೂರು ಮೂಲದ ಶಾಜಹಾನ್ ರಸ್ತೆ ಅಪಘಾತದಲ್ಲಿ ಮರಣ
ಕಿನ್ಯ:ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಸಾಹಿತ್ಯ ಹಬ್ಬಕ್ಕೆ ವಿದ್ಯುಕ್ತ ಚಾಲನೆ – ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಅಲ್ ಮದೀನಾದಲ್ಲಿ ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಮೇ 7ರಂದು ದಾರುಲ್ ಅಮಾನ್ ಎಲ್ಲೂರಿನಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಹಾಗೂ ಸನದು ದಾನ ಸಮಾರಂಭ
ಎಪ್ರಿಲ್ 29 ಕ್ಕೆ ಸಾಮೂಹಿಕ ಉಚಿತ ಸುನ್ನತ್ (ಮುಂಜಿ) ಕಾರ್ಯಕ್ರಮ
ಎಸ್ ವೈ ಎಸ್ ವಾರ್ಷಿಕ ಕೌನ್ಸಿಲ್ ಅಭಿಯಾನ ಆರಂಭ
ಬಾಬಾ ಬುಡನ್ ದರ್ಗಾದಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಸಂದಲ್ ಮತ್ತು ಉರುಸ್ ಆಚರಣೆಗೆ ಜಿಲ್ಲಾಡಳಿತ ಅವಕಾಶ ನಿರಾಕರಣೆ