janadhvani

Kannada Online News Paper

ಮಾದಕ ದ್ರವ್ಯ ದುಷ್ಕ್ರತ್ಯಗಳಿಗೆ ಪ್ರೇರಕ: ಇರ್ಶಾದ್ ಪಕ್ಷಿಕೆರೆ

ಕರ್ನಾಟಕ ರಾಜ್ಯ ಸುನ್ನೀ ಸ್ಟುಡೆಂಟ್ ಫೆಡರೇಶನ್ (SSF) ರಾಜ್ಯ ಸಮೀತಿಯ ನಿರ್ದೇಶನದಂತೆ ಒಕ್ಟೋಬರ್ 2 ರಂದು ರಾಜ್ಯಾದ್ಯಂತ ಇರುವ ಸೆಕ್ಟರ್ ಕೇಂದ್ರಗಳಲ್ಲಿ ಗಾಂಧಿ ಜಯಂತಿಯ ಪ್ರಯುಕ್ತ “ಗಾಂಧೀಜಿಯ ಕನಸು ನನಸಾಗಲಿ ಮಾದಕ ದ್ರವ್ಯದ ವಿರುದ್ಧ ಪೋಸ್ಟರ್ ಪ್ರದರ್ಶನ, ಜನಜಾಗೃತಿ ಸಭೆಗಳು SSF ಕ್ಯೂ ಟೀಂ ವತಿಯಿಂದ ನಡೆಯಿತು.

ಆ ಪ್ರಯುಕ್ತ SSF ಸುರತ್ಕಲ್ ಡಿವಿಶನಿಗೊಳಪಟ್ಟ ಮುಲ್ಕಿ ಸೆಕ್ಟರ್ ಕ್ಯೂ ಟೀಂ ವತಿಯಿಂದ 02/10/19 ರಂದು ಬೆಳಿಗ್ಗೆ 10 ಘಂಟೆಗೆ ಕಿನ್ನಿಗೋಳಿ ಜಂಕ್ಷನ್ ನಲ್ಲಿ ಮಾದಕ ದ್ರವ್ಯದ ವಿರುದ್ಧ ಜನಜಾಗೃತಿ ಸಭೆ ನಡೆಸಲಾಯಿತು..

ಮುಲ್ಕಿ ಸೆಕ್ಟರ್ ಪ್ರ.ಕಾರ್ಯದರ್ಶಿ ಅಸ್ವದ್ ಸಾಗ್ ಸ್ವಾಗತ ಭಾಷಣ ಮಾಡಿದರು..

ಸಭೆಯಲ್ಲಿ ಮಾದಕ ದ್ರವ್ಯ ವಿರುದ್ಧ ಸಂದೇಶ ಭಾಷಣ ಮಾಡಿದ KCF ಅಲ್ ಅಹ್ಸಾ ಸೆಕ್ಟರ್ ಮಾಜಿ ಕಾರ್ಯದರ್ಶಿ KM ಇರ್ಶಾದ್ ಪಕ್ಷಿಕೆರೆ ಮಾತನಾಡುತ್ತಾ ಇಂದು ಮಾದಕ ದ್ರವ್ಯಗಳು ಸಮಾಜದಲ್ಲಿ ಸರಿಪಡಿಸಲಾಗದ ರೀತಿಯಲ್ಲಿರುವ ಪಿಡುಗಾಗಿ ಮಾರ್ಪಟ್ಟಿದೆ, ಸರ್ವ ದುಷ್ಕ್ರತ್ಯಗಳಿಗೂ ಮಾದಕ ದ್ರವ್ಯ ಪ್ರೇರಕವಾಗಿದೆ,ಮಾದಕ ದ್ರವ್ಯಕ್ಕೆ ಬಲಿಯಾಗುವ ಕಾರಣಗಳನ್ನು ಗುರುತಿಸಿ ವಿದ್ಯಾರ್ಥಿಗಳನ್ನು ಯುವ ಸಮೂಹವನ್ನು ಅದರಿಂ ದೂರಗೊಳಿಸಿ ಅವರಿಗೆ ಕೌನ್ಸಿಲಿಂಗ್ ನೀಡಿ ಅವರನ್ನು ಒಳ್ಳೆಯವರಾಗಿಸುವ ಪ್ರಯತ್ನಗಳನ್ನು ಪ್ರಜ್ಙಾವಂತರು ಮಾಡಬೇಕೆಂದರು,ರಾಜ್ ಸರಕಾರ, ಕೇಂದ್ರ ಸರಕಾರಗಳು ಇಂತಹ ಪಿಡುಗನ್ನು ಹೋಗಲಾಡಿಸುವತ್ತ ಚಿತ್ತ ಹರಿಸಬೇಕು, ಓಟ್ ಬ್ಯಾಂಕಿಗಾಗಿ ಧರ್ಮಗಳೆಡೆಯಲ್ಲಿ ಬಿರುಕು ಸೃಷ್ಟಿಸಿ ಧರ್ಮಗಳ ನಿಯಮಗಳನ್ನು ಬದಲಿಸಿ ಕಾನೂನುಗಳನ್ನು ಅನುಷ್ಠಾನಕ್ಕೆ ತರಲು ಸರಕಾರಗಳಿಗೆ ಸಧ್ಯವಾಗುವುದಾದರೆ, ಸಮಾಜಕ್ಕೂ,ಸರ್ವರಿಗೂ ಮಾರಕವಾಗುವ ಮಾದಕ ದ್ರವ್ಯದ ವಿರುದ್ಧ ಕಾನೂನನ್ನು ರೂಪಿಸಿ ಅನುಷ್ಠಾನಕ್ಕೆ ತರಲು ಸರಕಾರಗಳಿಗೆ ಯಾಕೆ ಸಾಧ್ಯವಿಲ್ಲ ಎಂದು ಪ್ರಶ್ನಿಸಿದರು.

ಮಾದಕ ದ್ರವ್ಯವನ್ನು ಸಮಾಜದಿಂದ ಒದ್ದೋಡಿಸಿ ಇಲ್ಲವಾಗಸಿ ಸುಂದರ ನಾಡು, ಸಧೃಢ ಭಾರತ, ಸ್ವಾಸ್ಥ್ಯ ಕುಟುಂಬವನ್ನು ರೂಪಿಸಲು SSF ನೊಂದಿಗೆ ಸರ್ವರೂ ಕೈ ಜೋಡಿಸಬೇಕೆಂದರು, 30 ಸಂವತ್ಸರಗಳಲ್ಲಿ ಇಂತಹ ಸಾಮಾಜಿಕ ಪಿಡುಗನ್ನು ಹೋಗಲಾಡಿಸಲು, ಕಷ್ಟದಲ್ಲಿರುವವರಿಗೆ ಸಾಂತ್ವನವನ್ನು ನೀಡುತ್ತಾ ಕರುನಾಡ ಮಣ್ಣಲ್ಲಿ SSF ಕಾರ್ಯಾಚರಿಸುತ್ತಿದೆ, ಮುಂದಿನ ದಿನಗಳಲ್ಲ SSF ನ ಸನ್ನದ್ಧ ಕಾರ್ಯಕರ್ತರ ತಂಡ ಕ್ಯೂ ಟೀಂ ಸತತವಾಗಿ ಕಾರ್ಯಚರಿಸಲಿದೆ ಎಂದರು.

ಸೆಕ್ಟರ್ ಕಾರ್ಯದರ್ಶಿ ಅಸ್ವದ್ ಸಾಗ್ ನಿರೂಪನೆ ಮಾಡಿ ಧನ್ಯವಾದ ಗೈದರು…
ಸಭೆಯಲ್ಲಿ SSF ಸುರತ್ಕಲ್ ಪ್ರಧಾನ ಕಾರ್ಯದರ್ಶಿ ರಿಝ್ವಾನ್ ಕೃಷ್ಣಾಪುರ, ಮುಲ್ಕಿ ಸೆಕ್ಟರ್ ಕೋಶಾಧಿಕಾರಿ ಝಿಯಾನ್ ಪಕ್ಷಿಕೆರೆ, ಮುಬಾರಿಶ್ ಕರ್ನಿರೆ, ಶಾಝ್ ಗುತ್ತಕಾಡ್, ರಾಹಿಲ್ ಪಕ್ಷಿಕೆರೆ ಮುಂತಾದ ನಾಯಕರು, ಕಾರ್ಯಕರ್ತರು ಉಪಸ್ಥಿತರಿದ್ದರು..
ಕಾರ್ಯಕ್ರಮದ ಕೊನೆಯಲ್ಲಿ ಮಾದಕ ದ್ರವ್ಯದ ವಿರುದ್ಧ ಕಾರ್ಯಕರ್ತರು ಪ್ರತಿಜ್ಙೆಯನ್ನು ಕೈಗೊಂಡರು.

ಅದೇ ದಿನದಲ್ಲಿ SSF ಸುರತ್ಕಲ್ ಡಿವಿಶನಿಗೊಳಪಟ್ಟ ಮುಲ್ಕಿ ಸೆಕ್ಟರ್ ಸಹಿತ ಸುರತ್ಕಲ್,ಕೃಷ್ಣಾಪುರ,ಕಾಟಿಪಳ್ಳ,ಮಂಗಳಪೇಟೆ ಸೆಕ್ಟರ್ ಗಳಲ್ಲೂ ಮಾದಕ ದ್ರವ್ಯದ ವಿರುದ್ಧ ಜನ ಜಾಗೃತಿ ಸಭೆಗಳು ನಡೆಯಿತು.