ತಾವರಗೆರೆಯಲ್ಲಿ ಯಶಸ್ವಿಯಾಗಿ ನಡೆದ ಉತ್ತರ ಕರ್ನಾಟಕ Q team ZACVIK

ತಾವರೆಗೆರೆ: ಕರ್ನಾಟಕ ರಾಜ್ಯ ಸುನ್ನಿ ಸ್ಟುಡೆಂಟ್ಸ್ ಫೆಡರೇಷನ್ ಸಕ್ರಿಯ ಕಾರ್ಯಕರ್ತರ ತಂಡ Q team ಇದರ ZACVIK ಕಾರ್ಯಕ್ರಮ ಕೊಪ್ಪಳ ಜಿಲ್ಲೆಯ ತಾವರಗೇರಾ ಶಾದೀ ಮಹಲ್ ಸಭಾಂಗಣದಲ್ಲಿ ಎಸೆಸೆಲ್ಸಿ ರಾಜ್ಯ ಡೆಪ್ಯೂಟಿ ಅಧ್ಯಕ್ಷ ಮೌಲಾನಾ ಗುಲಾಮ್ ಹುಸೈನ್ ನೂರಿ ಬೂದುಗುಂಪ ಇವರ ಅಧ್ಯಕ್ಷತೆಯಲ್ಲಿ ಯಶಸ್ವಿಯಾಗಿ ನಡೆಯಿತು.

ಎಸ್ ವೈ ಎಸ್ ಕೊಪ್ಪಳ ಜಿಲ್ಲಾ ಅಧ್ಯಕ್ಷ ಮೌಲಾನ ನಝೀರ್ ಅಹಮ್ಮದ್ ಸಭೆಯನ್ನು ಉದ್ಘಾಟಿಸಿದರು. ಎಸ್ಸೆಸ್ಸೆಫ್ ರಾಜ್ಯ ಉಪಾಧ್ಯಕ್ಷ ಹಾಫಿಝ್ ಸುಫ್ಯಾನ್ ಸಖಾಫಿ ಮಂಗಳೂರು ಕ್ಯು ಟೀಂ ರೂಪುರೇಷೆಗಳು ಹಾಗೂ ಸಂಘಟನೆಯ ಮುಂದಿನ ಗುರಿಯ ಬಗ್ಗೆ ತರಗತಿ ಮಂಡಿಸಿದರು.

ಹಾಫಿಝ್ ಸಲೀಂ ಗಂಗಾವತಿ, ಮೌಲಾನಾ ಖಾಜಾ ರಝಾ ತಾವರಗೇರಾ, ಹಾಫಿಝ್ ವಾಸಿಂ ಹೊಸಪೇಟೆ, ಹಾಫಿಝ್ ಶರೀಫ್ ದಾಸನಾಳ, ಮೌಲಾನಾ ಝಾಹಿದ್ ತಾವರಗೇರಾ, ಹಾಫಿಝ್ ಹುಸೈನ್ ದೇವದುರ್ಗ, ಫಾರೂಖ್ ಹಿಮಮಿ, ಅಬೂಬಕ್ಕರ್ ಮರ್ಝೂಖಿ ಬಳ್ಳಾರಿ, ಮೌಲಾನಾ ಸದ್ದಾಂ ಗುಂಡೂರು, ಇಸ್ಹಾಖ್ ಸಖಾಫಿ ಕುಡತಿನಿ, ನೂರ್ ಮುಹಮ್ಮದ್ ತೋರನಗಲ್ಲು, ಹಾಫಿಝ್ ಯೂಸುಫ್ ತಾವರಗೇರಾ, ಸಿನಾನ್ ಸಖಾಫಿ ಕೃಷ್ಣಾಪುರ ಹಾಗೂ ಸಲೀಂ ಕೊಪ್ಪಳ ಉಪಸ್ಥಿತರಿದ್ದರು.
ಬಳ್ಳಾರಿ, ಕೊಪ್ಪಳ, ರಾಯಚೂರು, ಬಾಗಲಕೋಟೆ ಹಾಗೂ ಯಾದಗಿರಿ ಜಿಲ್ಲೆಯ ಕ್ಯು ಟೀಂ ಲೀಡರ್ಸ್ ಗಳು ಹಾಜರಾಗಿದ್ದರು.
ಉತ್ತರ ಕರ್ನಾಟಕ ಕ್ಯು ಟೀಂ ಝೋನಲ್ ಅಡ್ಮಿನ್ ಮೌಲಾನಾ ಹಾಫಿಝ್ ಸಲೀಂ ಗಂಗಾವತಿ ಸ್ವಾಗತಿಸಿ ವಂದಿಸಿದರು.

Leave a Reply

Your email address will not be published. Required fields are marked *

error: Content is protected !!