ವಿಟ್ಲ: ಕನ್ಯಾನ ಪೇಟೆಯಿಂದ ಕೆಳಗಿನ ಪೇಟೆಯವರೆಗೆ ಗಾಂಧಿ ಜಯಂತಿ ಪ್ರಯುಕ್ತ ಮಾದಕ ದ್ರವ್ಯ ವಿರುಧ್ದ ಜನ ಜಾಗೃತಿ ಜಾಥಾ ಕಾರ್ಯಕ್ರಮ ನಡೆಯಿತು. ನಂತರ ಭಾಷಣ ಮಾಡಿದ Q ಟೀಂ SSF ವಿಟ್ಲ ಡಿವಿಝನ್ ಕಂಟ್ರೋಲರ್ ಕೆ.ಎಂ ಅಶ್ರಫ್ ಸಖಾಫಿ ಕನ್ಯಾನ ‘ಗಾಂಧೀಜಿಯ ಕನಸಿನ ಭಾರತ ಸಾಕ್ಷಾತ್ಕಾರಗೊಳ್ಳಬೇಕು,ಭವಿಷ್ಯಕ್ಕೆ ಮಾರಕವಾದ ಮಾಧಕ ವಸ್ತುಗಳನ್ನು ನಿಲ್ಲಿಸಿಬೇಕು.ಪ್ರತ್ಯೇಕವಾಗಿ ಶಾಲಾ ಕಾಲೇಜ್ ಪರಿಸರಗಳಲ್ಲಿ ಮಾರಾಟವಾಗಬಾರದು.

ನಮ್ಮರಾಷ್ಟ್ರ ,ರಾಜ್ಯ ನಾಡು ಪರಿಸರ ಮಾದಕ ದೃವ್ಯ ಮುಕ್ತವಾಗಬೇಕಿದೆ,ಅದೆಷ್ಟೋ ಜನರನ್ನು ರೋಗದ ವಿಕೋಪಕ್ಕೆ ತಲ್ಲಿ ಲಾಭಪಡುವ ಲಹರಿ ಪಧಾರ್ಥಗಳ ಹಣದ ಅವಶ್ಯಕತೆ ಯಾವ ರಾಜ್ಯಕ್ಕೂ ಬೇಕಾಗಿಲ್ಲ. SSF ರಾಜ್ಯಾದ್ಯಂತ ಕರೆ ಕೊಟ್ಟಿರುವ ಈ ಹೋರಾಟ ಇನ್ನೂ ಮುಂದುವರಿಯಲಿದೆ ಎಂದು ಕರೆ ನೀಡಿದರು.
ಕಾರ್ಯಕ್ರಮಕ್ಕೆ ಸೆಕ್ಟರ್ ಅಧ್ಯಕ್ಷರಾದ ಎಂ ಐ ಎಂ ಅಶ್ರಫ್ ಸಖಾಫಿ ಪ್ರಾರ್ಥನಾ ಮೂಲಕ ಚಾಲನೆ ನೀಡಿದರು.ನೂರಕ್ಕೂ ಮಿಕ್ಕ ಸದಸ್ಯರೂ ,ಕಾಲೇಜು ಕ್ಯಾಂಪಸ್ ವಿಧ್ಯಾರ್ಥಿಗಳು ಜಾಥೆಗೆ ಮೆರುಗು ನೀಡಿದರು.
ಕನ್ಯಾನ ಸೆಕ್ಟರ್ ಇಶಾರ ಕನ್ವೀನರ್ ಕಾದರ್ ಸ ಅದಿ , ಸೆಕ್ಟರ್ ಪ್ರಧಾನ ಕಾರ್ಯದರ್ಶಿ ರಝಾಖ್ ಬೈರಿಕಟ್ಟೆ, SMA ಈಷ್ಟ್ ವಿಭಾಗ ಜಿಲ್ಲಾ ಸದಸ್ಯ ಡಿ ಕೆ ಇಬ್ರಾಹಿಂ ಶಾ, SYS ಕನ್ಯಾನ ಬ್ರಾಂಚ್ ಅಧ್ಯಕ್ಷ ಇಸ್ಮಾಯೀಲ್ ಪೊಯ್ಯಕಂಡ, SMA ಕನ್ಯಾನ ರೀಜಿನಲ್ ಸಮಿತಿ ಅಧ್ಯಕ್ಷ ಮೂಸಬ್ಬ ಕಳಾಯಿ , ಕೋಶಾಧಿಕಾರಿ ಹುಸೈನಾರ್ ಹಾಜಿ ಪೊಯ್ಯಕಂಡ, ಕಾರ್ಯದರ್ಶಿ ಸಿದ್ದೀಖ್ ಪೊಯ್ಯಕಂಡ, ಕೆ ಸಿ ಎಫ್ ಸದಸ್ಯರಾದ ಅಬ್ದುಲ್ ಮಾಲಿಕ್ ಅಮಾನಿ, ತೌಸೀಫ್ ಕನ್ಯಾನ, ಅಬ್ದುಲ್ ಖಾದರ್ ಮರ್ತನಾಡಿ ಮೊದಲಾದವರು ಉಪಸ್ಥಿತರಿದ್ದರು.















ಇನ್ನಷ್ಟು ಸುದ್ದಿಗಳು
ಕುದ್ರೋಳಿ ಮಖಾಂ ಉರೂಸ್ 2027 ಜನವರಿ 1 ರಿಂದ ಜನವರಿ 9
ಬೆಳ್ತಂಗಡಿ ತಾಲೂಕು ಮೊಹಲ್ಲಾಗಳಿಂದ ತಾಜುಲ್ ಉಲಮಾ ದರ್ಸ್ ಗೆ 10 ಲಕ್ಷ ರೂಪಾಯಿ ಚೆಕ್ ಹಸ್ತಾಂತರ
ತಾಜುಲ್ ಉಲಮಾ ಉರೂಸ್ ಯಶಸ್ಸಿಗೆ ಎಸ್ ವೈ ಎಸ್ ಕರೆ
ಮಂಗಳಪೇಟೆಯ ಈ ಮಕ್ಕಳು ನಮ್ಮ ಮಕ್ಕಳಿಗೆ ಮಾದರಿಯಾಗಲಿ
ಬುರೈದದಲ್ಲಿ ಕೆಸಿಎಫ್ ಅಲ್ ಕಸೀಮ್ ಝೋನ್ ವತಿಯಿಂದ ಲೆಗಸಿ ನೈಟ್-2026 ಫ್ಯಾಮಿಲಿ ಮೀಟ್
ನಮ್ಮ ಭಾರತ ನಮ್ಮ ಹೆಮ್ಮೆ’: ಕೆಸಿಎಫ್ ಸೌದಿ ಅರೇಬಿಯಾದ ರಾಷ್ಟ್ರೀಯ ಮಟ್ಟದ ಆನ್ಲೈನ್ ಸಂವಾದ
ಗೂಡಿನಬಳಿ ಸುನ್ನೀ ಸೆಂಟರ್ ವತಿಯಿಂದ ಸ್ವಾತಂತ್ರ್ಯೋತ್ಸವ
ಕೆ.ಸಿ.ಎಫ್. ಸೌದಿ ರಾಷ್ಟ್ರೀಯ ಸಮಿತಿಯಿಂದ ಆನ್ಲೈನ್ ಸಂವಾದ ಕಾರ್ಯಕ್ರಮಈ
ಆಗಸ್ 12.ಎಸ್ ವೈ ಎಸ್ ದ.ಕ ವೆಸ್ಟ್ ಜಿಲ್ಲೆ:ಹುಬ್ಬುರ್ರಸೂಲ್ ಕಾನ್ಫರೆನ್ಸ್
ನಕಲಿ ತ್ವರೀಖತ್ಗಳ ಬಗ್ಗೆ ಎಚ್ಚರಿಕೆ ಅಗತ್ಯ: ಹಿಮಮಿ ಸಂಗಮ