janadhvani

Kannada Online News Paper

SSF ಕನ್ಯಾನ ಸೆಕ್ಟರ್: ಮಾದಕ ದ್ರವ್ಯ ವಿರುಧ್ದ ಜನ ಜಾಗೃತಿ ಜಾಥಾ

ವಿಟ್ಲ: ಕನ್ಯಾನ‌ ಪೇಟೆಯಿಂದ ಕೆಳಗಿನ ಪೇಟೆಯವರೆಗೆ ಗಾಂಧಿ ಜಯಂತಿ ಪ್ರಯುಕ್ತ ಮಾದಕ ದ್ರವ್ಯ ವಿರುಧ್ದ ಜನ ಜಾಗೃತಿ ಜಾಥಾ ಕಾರ್ಯಕ್ರಮ ನಡೆಯಿತು. ನಂತರ ಭಾಷಣ ಮಾಡಿದ Q ಟೀಂ SSF ವಿಟ್ಲ ಡಿವಿಝನ್ ಕಂಟ್ರೋಲರ್ ಕೆ.ಎಂ ಅಶ್ರಫ್ ಸಖಾಫಿ ಕನ್ಯಾನ ‘ಗಾಂಧೀಜಿಯ ಕನಸಿನ ಭಾರತ ಸಾಕ್ಷಾತ್ಕಾರಗೊಳ್ಳಬೇಕು,ಭವಿಷ್ಯಕ್ಕೆ ಮಾರಕವಾದ ಮಾಧಕ ವಸ್ತುಗಳನ್ನು ನಿಲ್ಲಿಸಿಬೇಕು.ಪ್ರತ್ಯೇಕವಾಗಿ ಶಾಲಾ ಕಾಲೇಜ್ ಪರಿಸರಗಳಲ್ಲಿ ಮಾರಾಟವಾಗಬಾರದು.

ನಮ್ಮರಾಷ್ಟ್ರ ,ರಾಜ್ಯ ನಾಡು ಪರಿಸರ ಮಾದಕ ದೃವ್ಯ ಮುಕ್ತವಾಗಬೇಕಿದೆ,ಅದೆಷ್ಟೋ ಜನರನ್ನು ರೋಗದ ವಿಕೋಪಕ್ಕೆ ತಲ್ಲಿ ಲಾಭಪಡುವ ಲಹರಿ ಪಧಾರ್ಥಗಳ ಹಣದ ಅವಶ್ಯಕತೆ ಯಾವ ರಾಜ್ಯಕ್ಕೂ ಬೇಕಾಗಿಲ್ಲ. SSF ರಾಜ್ಯಾದ್ಯಂತ ಕರೆ ಕೊಟ್ಟಿರುವ ಈ ಹೋರಾಟ ಇನ್ನೂ ಮುಂದುವರಿಯಲಿದೆ ಎಂದು ಕರೆ ನೀಡಿದರು.

ಕಾರ್ಯಕ್ರಮಕ್ಕೆ ಸೆಕ್ಟರ್ ಅಧ್ಯಕ್ಷರಾದ ಎಂ ಐ ಎಂ ಅಶ್ರಫ್ ಸಖಾಫಿ ಪ್ರಾರ್ಥನಾ ಮೂಲಕ ಚಾಲನೆ ನೀಡಿದರು.ನೂರಕ್ಕೂ ಮಿಕ್ಕ ಸದಸ್ಯರೂ ,ಕಾಲೇಜು ಕ್ಯಾಂಪಸ್ ವಿಧ್ಯಾರ್ಥಿಗಳು ಜಾಥೆಗೆ ಮೆರುಗು ನೀಡಿದರು.

ಕನ್ಯಾನ ಸೆಕ್ಟರ್ ಇಶಾರ ಕನ್ವೀನರ್ ಕಾದರ್ ಸ ಅದಿ , ಸೆಕ್ಟರ್ ಪ್ರಧಾನ ಕಾರ್ಯದರ್ಶಿ ರಝಾಖ್ ಬೈರಿಕಟ್ಟೆ, SMA ಈಷ್ಟ್ ವಿಭಾಗ ಜಿಲ್ಲಾ ಸದಸ್ಯ ಡಿ ಕೆ ಇಬ್ರಾಹಿಂ ಶಾ, SYS ಕನ್ಯಾನ ಬ್ರಾಂಚ್ ಅಧ್ಯಕ್ಷ ಇಸ್ಮಾಯೀಲ್ ಪೊಯ್ಯಕಂಡ, SMA ಕನ್ಯಾನ ರೀಜಿನಲ್ ಸಮಿತಿ ಅಧ್ಯಕ್ಷ ಮೂಸಬ್ಬ ಕಳಾಯಿ , ಕೋಶಾಧಿಕಾರಿ ಹುಸೈನಾರ್ ಹಾಜಿ ಪೊಯ್ಯಕಂಡ, ಕಾರ್ಯದರ್ಶಿ ಸಿದ್ದೀಖ್ ಪೊಯ್ಯಕಂಡ, ಕೆ ಸಿ ಎಫ್ ಸದಸ್ಯರಾದ ಅಬ್ದುಲ್ ಮಾಲಿಕ್ ಅಮಾನಿ, ತೌಸೀಫ್ ಕನ್ಯಾನ, ಅಬ್ದುಲ್ ಖಾದರ್ ಮರ್ತನಾಡಿ ಮೊದಲಾದವರು ಉಪಸ್ಥಿತರಿದ್ದರು.

error: Content is protected !! Not allowed copy content from janadhvani.com