janadhvani

Kannada Online News Paper

ಸೌದಿ: ಎಕ್ಸಿಟ್ ವಿಸಾದಲ್ಲಿ ತೆರಳಿದ ವಲಸಿಗರು ಹೊಸ ವಿಸಾದಲ್ಲಿ ಮರಳಬಹುದು

ಜಿದ್ದಾ: ದೇಶದಿಂದ ಎಕ್ಸಿಟ್ ವಿಸಾದಲ್ಲಿ ಹೊರಹೋಗುವ ವಲಸಿಗರಿಗೆ ಮೂರು ವರ್ಷಗಳ ಕಾಲ ನಿಷೇಧವಿರುವ ಬಗ್ಗೆ ಪ್ರಚಾರ ಸುಳ್ಳು ಎಂದು ಸೌದಿ ಪಾಸ್‌ಪೋರ್ಟ್ ಜನರಲ್ ಡೈರೆಕ್ಟರೇಟ್ (ಜವಾಝಾತ್) ತಿಳಿಸಿದೆ.

ಅಂತಿಮ ನಿರ್ಗಮನ ವೀಸಾದಲ್ಲಿ ಸೌದಿಯಿಂದ ಹೊರಡುವ ಯಾರಾದರೂ ಅವರ ವಿರುದ್ಧ ಯಾವುದೇ ಪ್ರಕರಣ ಅಥವಾ ದೂರು ಇಲ್ಲದಿದ್ದರೆ ಹೊಸ ವೀಸಾದಲ್ಲಿ ಮರಳುವ ಹಕ್ಕಿದೆ ಎಂದು ಪಾಸ್ ಪೋರ್ಟ್ ಜನರಲ್ ನಿರ್ದೇಶನಾಲಯ ಹೇಳಿಕೆಯಲ್ಲಿ ತಿಳಿಸಿದೆ.

ವಿದೇಶಿಯರ ರೆಸಿಡೆನ್ಸಿ ಪರವಾನಗಿ (ಇಖಾಮಾ) ನವೀಕರಣ ವಿಳಂಬಗೊಳಿಸಿದರೆ ದಂಡ ವಿಧಿಸಲಾಗುವುದು ಎಂದು ಜಾವಾಝಾತ್ ತಿಳಿಸಿದೆ.
ಇಖಾಮಾವನ್ನು ನವೀಕರಿಸಲು ವಿಳಂಬ ಮಾಡುವವರಿಗೆ ಮೊದಲ ಬಾರಿಗೆ 500 ರಿಯಾಲ್ ದಂಡ ವಿಧಿಸಲಾಗುತ್ತದೆ. 2ನೇ ಬಾರಿಗೆ ದಂಡವು 1,000 ರಿಯಾಲ್ ಆಗಿರುತ್ತದೆ. ಮೂರನೇ ಬಾರಿಗೆ ನವೀಕರಣ ವಿಳಂಬವಾಗಿದ್ದರೆ, ವಿದೇಶೀಯರನ್ನು ಗಡೀಪಾರು ಮಾಡಲಾಗುತ್ತದೆ.

ಕುಟುಂಬದ ಮುಖ್ಯಸ್ಥರು ಸೌದಿಯಲ್ಲಿದ್ದರೆ ಮಾತ್ರ ಅವಲಂಬಿತರ ಇಖಾಮಾವನ್ನು ನವೀಕರಿಸಬಹುದು. ಕುಟುಂಬದ ಮುಖ್ಯಸ್ಥರು ಸೌದಿಯ ಹೊರಗಿದ್ದರೆ, ಕುಟುಂಬ ಸದಸ್ಯರಿಗೆ ವೀಸಾ ನವೀಕರಣಕ್ಕೆ ಯಾವುದೇ ಅವಕಾಶವಿಲ್ಲ ಎಂದು ಜವಾಝಾತ್ ವ್ಯಕ್ತಪಡಿಸಿದೆ.