janadhvani

Kannada Online News Paper

ದುಬೈ ವಿಮಾನ ನಿಲ್ದಾಣದಿಂದ ರಾತ್ರಿ ಪಾಳಿಯ ಬಸ್ ಸಂಚಾರ ಆರಂಭ

ದುಬೈ: ರಸ್ತೆ ಮತ್ತು ಸಾರಿಗೆ ಇಲಾಖೆ (ಆರ್‌ಟಿಎ) ಯು ದುಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಎರಡನೇ ಟರ್ಮಿನಲ್‌ಗೆ ಸೆ.1ರಿಂದ ರಾತ್ರಿ ಪಾಳಿಯ ಬಸ್ ಸಂಚಾರ ಪ್ರಾರಂಭಿಸಲಿದೆ. ಮಾತ್ರವಲ್ಲದೆ ಉಳಿದ 11 ರೂಟ್‌ಗಳ ಸಮಯವನ್ನು ಪನರ್ ಕ್ರಮೀಕರಿಸಿ ಸಂಚಾರ ಸುಗಮಗೊಳಿಸಲಿದೆ. ಎನ್30 ರೂಟನ್ನು ಹೊಸತಾಗಿ ಪ್ರಾರಂಭಿಸಲಾಗುತ್ತಿದೆ ಎಂದು ಆರ್‌ಟಿಎ ಸಾರ್ವಜನಿಕ ಸಾರಿಕೆ ಏಜನ್ಸಿ ಹೇಳಿದೆ.

ಈ ರೂಟ್ ಇಂಟರ್ನ್ಯಾಷನಲ್ ಸಿಟಿಯ ದುಬೈ ಮಾರ್ಟ್ 2 ರಿಂದ ಹೊರಟು ರಾಶಿದಿಯ್ಯಾ ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದ ಎರಡನೇ ಟರ್ಮಿನಲ್ ವರೆಗೆ ಸಂಚರಿಸಲಿದೆ. ರಾತ್ರಿ 10ರಿಂದ ಬೆಳಗ್ಗೆ ಐದರ ವರೆಗೆ ಸಂಚರಿಸಲಿದ್ದು, 11ಎ, 24, 34, 50, 56, 95, 95ಎ, ಎಫ್53, ಎಕ್ಸ್25, ಎನ್55 ಎಂಬ ರೂಟ್‌ಗಳ ಸಂಚಾರವನ್ನೂ ಉನ್ನತಗೊಳಿಸಲಾಗಿದೆ.

error: Content is protected !! Not allowed copy content from janadhvani.com