ಜಿದ್ದಾ: ದೇಶದಿಂದ ಎಕ್ಸಿಟ್ ವಿಸಾದಲ್ಲಿ ಹೊರಹೋಗುವ ವಲಸಿಗರಿಗೆ ಮೂರು ವರ್ಷಗಳ ಕಾಲ ನಿಷೇಧವಿರುವ ಬಗ್ಗೆ ಪ್ರಚಾರ ಸುಳ್ಳು ಎಂದು ಸೌದಿ ಪಾಸ್ಪೋರ್ಟ್ ಜನರಲ್ ಡೈರೆಕ್ಟರೇಟ್ (ಜವಾಝಾತ್) ತಿಳಿಸಿದೆ.
ಅಂತಿಮ ನಿರ್ಗಮನ ವೀಸಾದಲ್ಲಿ ಸೌದಿಯಿಂದ ಹೊರಡುವ ಯಾರಾದರೂ ಅವರ ವಿರುದ್ಧ ಯಾವುದೇ ಪ್ರಕರಣ ಅಥವಾ ದೂರು ಇಲ್ಲದಿದ್ದರೆ ಹೊಸ ವೀಸಾದಲ್ಲಿ ಮರಳುವ ಹಕ್ಕಿದೆ ಎಂದು ಪಾಸ್ ಪೋರ್ಟ್ ಜನರಲ್ ನಿರ್ದೇಶನಾಲಯ ಹೇಳಿಕೆಯಲ್ಲಿ ತಿಳಿಸಿದೆ.
ವಿದೇಶಿಯರ ರೆಸಿಡೆನ್ಸಿ ಪರವಾನಗಿ (ಇಖಾಮಾ) ನವೀಕರಣ ವಿಳಂಬಗೊಳಿಸಿದರೆ ದಂಡ ವಿಧಿಸಲಾಗುವುದು ಎಂದು ಜಾವಾಝಾತ್ ತಿಳಿಸಿದೆ.
ಇಖಾಮಾವನ್ನು ನವೀಕರಿಸಲು ವಿಳಂಬ ಮಾಡುವವರಿಗೆ ಮೊದಲ ಬಾರಿಗೆ 500 ರಿಯಾಲ್ ದಂಡ ವಿಧಿಸಲಾಗುತ್ತದೆ. 2ನೇ ಬಾರಿಗೆ ದಂಡವು 1,000 ರಿಯಾಲ್ ಆಗಿರುತ್ತದೆ. ಮೂರನೇ ಬಾರಿಗೆ ನವೀಕರಣ ವಿಳಂಬವಾಗಿದ್ದರೆ, ವಿದೇಶೀಯರನ್ನು ಗಡೀಪಾರು ಮಾಡಲಾಗುತ್ತದೆ.
ಕುಟುಂಬದ ಮುಖ್ಯಸ್ಥರು ಸೌದಿಯಲ್ಲಿದ್ದರೆ ಮಾತ್ರ ಅವಲಂಬಿತರ ಇಖಾಮಾವನ್ನು ನವೀಕರಿಸಬಹುದು. ಕುಟುಂಬದ ಮುಖ್ಯಸ್ಥರು ಸೌದಿಯ ಹೊರಗಿದ್ದರೆ, ಕುಟುಂಬ ಸದಸ್ಯರಿಗೆ ವೀಸಾ ನವೀಕರಣಕ್ಕೆ ಯಾವುದೇ ಅವಕಾಶವಿಲ್ಲ ಎಂದು ಜವಾಝಾತ್ ವ್ಯಕ್ತಪಡಿಸಿದೆ.







ನಾನು ಸೌದಿಯಿಂದ ಎಕ್ಸಿಟ್ ಹೋಗಿ ಪುನ್ಹ ಹೊಸ ವೀಸಾ ದಲ್ಲಿ ಸೌದಿ ಗೆ ಲೇಬರ್ ವೀಸಾ ದಲ್ಲಿ ಬಂದಿರುವೆನು.ನಾನು ಬಂದ ವೀಸಾದ ಸ್ಪೊನ್ಸರ್ ನಿಂದ ಬಂದು ಒಂದು ವಾರ ಆಗುವಷ್ಟ ರಲ್ಲೆ ಸ್ಪೊನ್ಸರ್ ಬದಲಾಯಿಸಿ ಬೇರೆ ಸ್ಪೊನ್ಸರ್ ಗೆ ತನಾಝಿಲ್ ಮಾಡಿದ್ದು…ಇಕಾಮವನ್ನು ಮೊದಲ ಕಪಿಲ್ ಜವಾಝತ್ ಫ಼ೀಸ್ 600 ರಿಯಾಲ್ ಕಟ್ಟಿ ಇಕಾಮ ಮಾಡಿ ಕೊಟ್ಟಿದ್ದಾನೆ ಆದರೆ ಕಾರ್ಡ್ ಇನ್ನೂ ಆಗಿಲ್ಲ ಹೊಸ ಕಪಿಲ್ ಹೇಳುತ್ತಾರೆ ಮೂರು ತಿಂಗಳು ಆಗದೆ ಕಾರ್ಡ್ ಸಿಗುವುದಿಲ್ಲಾ..ಅದು ಈಗಿನ ಹೊಸ ಸೌದಿ ಕಾನೂನು ಅಂತಾ..ಈ ವಾಗ ನಾನು ಬಂದು 2 ತಿಂಗಳು ಆಗ್ತಾ ಬಂತು ದಯವಿಟ್ಟು ನಿಮಗೆ ಮಾಹಿತಿ ಇದ್ದರೆ ಸ್ವಲ್ಪ ತಿಳಿಸಿ…
ನಾನಾ ಖಫಿಲ್ ನಂಗೆ ನಿರ್ಗಮನ ಮದಿದಾನೆ ಅಧು ಅವಧಿ ಮುಗಿದಿದೆ ಒಂದು ವರ್ಷ 8 ತಿಂಗಳು ಮುಗಿದಿದೆ ನಾನು ಸೆಟ್ಟಿಂಗ್ ನಲ್ಲಿ ಉರಿಘೆ ಒಗಿಧೆ ನಂಗೆ ಇಗಾ ಇ ಮಾಲಿನಾ ಆಯ್ಕೆಗಳು ವಾಸಾ ವೀಸಾ ದಾಲಿ ಎಂಡೆತಿರುಗಿ ಬಾರಭುವ್ದಾ
Nan soudi yinda exit bandu 2year ayithu. Jawazath tharyil nalli finger print madi kaluhisiddu. Nanna mele kesu henu eralilla. Jawazath 2year nanthara barabahudu andu helidaru.hogabahuda. mahithi eddare thilisu
ನಾನಾ ಖಾಫಿಲ್ ನಂಗೆ ನಿರ್ಗಮನ ಮದಿದಾನೆ ಅಧು ಒಂದು ವರ್ಷ ಅವಧಿ ಮುಗಿದಿದೆ 8 ತಿಂಗಳು ಮುಗಿಧೆ ನಾನು ಸೆಟ್ಟಿಂಗ್ ನಲ್ಲಿ ಉರಿಘೆ ಒಗಿಧೆ ನಂಗೆ ಇಗಾ ಇ ಮಲಿನಾ ಆಯ್ಕೆಗಳು ನಳಿ ಎಂಡೆತಿರುಗಿ ಬಾರಭುವ್ದಾ