ನವದೆಹಲಿ, ಆ.28- ಅಗ್ಗದ ದರದಲ್ಲಿ ವಿಮಾನಯಾನ ಸೇವೆ ಕಲ್ಪಿಸುತ್ತಿರುವ ಇಂಡಿಗೋ ಮತ್ತು ಗೋ ಏರ್ ವಿಮಾನಯಾನ ಸಂಸ್ಥೆಗಳ ಏರ್ ಬಸ್ ನಿಯೋ ವಿಮಾನಗಳಲ್ಲಿನ ಎಂಜಿನ್ಗಳಲ್ಲಿನ ದೋಷ ಪುನರಾವರ್ತನೆಯಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.
ಈ ನಿಟ್ಟಿನಲ್ಲಿ ವಿಮಾನಯಾನ ನಿಯಂತ್ರಣ ಸಂಸ್ಥೆಯ ಡಿಜಿಸಿಎ (ಡೆರೆಕ್ಟರೇಟ್ ಜನರಲ್ ಆಫ್ ಸಿವಿಲ್ ಎವಿಯೇಷನ್) ಈ ಎರಡು ಸಂಸ್ಥೆಗಳ ಮುಖ್ಯಸ್ಥರ ತುರ್ತು ಸಭೆ ಕರೆದು ಎಂಜಿನ್ಗಳ ಕ್ಷಿಪ್ರ ಬದಲಾವಣೆ ಮತ್ತು ನಾಗರಿಕರ ಸುರಕ್ಷತೆಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದೆ.
ಇಂಡಿಗೋ, ಗೋ ಏರ್ ವಿಮಾನ ಸಂಸ್ಥೆಗಳು ಏ-320 ವಿಮಾನಗಳ ಸೇವೆಗಳನ್ನು ಪ್ರಯಾಣಿಕರಿಗೆ ಅಗ್ಗದರದಲ್ಲಿ ಒದಗಿಸುತ್ತಿದೆ. ಆದರೆ ಈ ಏರ್ಲೈನ್ಸ್ಗಳ ವಿಮಾನಗಳಲ್ಲಿ ಪ್ರಾಟ್ ಅಂಡ್ ವಿಟ್ನಿ(ಪಿ ಅಂಡ್ಡಬ್ಲೂ) ಎಂಜಿನ್ಗಳನ್ನು ಬಳಲಾಸುತ್ತಿದೆ. ಇವು ಅತ್ಯಂತ ಹಳೆಯ ಎಂಜಿನ್ಗಳಾಗಿದ್ದು, ಆಗಾಗ ಲೋಪದೋಷಗಳು ಮತ್ತು ನ್ಯೂನ್ಯತೆಗಳು ಮರಕಳಿಸುತ್ತಿವೆ.
ಇದನ್ನು ಗಂಭೀರವಾಗಿ ಪರಿಗಣಿಸಿರುವ ಡಿಜಿಸಿಎ ಎರಡು ಸಂಸ್ಥೆಗಳ ಮುಖ್ಯಸ್ಥರ ತುರ್ತು ಸಭೆ ನಡೆಸಿ ಅಗತ್ಯ ಕ್ರಮಗಳಿಗೆ ಸೂಚಿಸಿದೆ. ವಿಶ್ವದಲ್ಲಿ ಒಟ್ಟು 400 ವಿಮಾನಗಳಲ್ಲಿ ಪಿ ಅಂಡ್ ಡಬ್ಲೂ ಎಂಜಿನ್ಗಳನ್ನು ಬಳಸಲಾಗುತ್ತಿದೆ. ಇವುಗಳಲ್ಲಿ 120 ಇಂಡಿಗೋ ಮತ್ತು ಗೋ ಏರ್ ವಿಮಾನಗಳಿವೆ.






