ರಿಯಾದ್: ಮಕ್ಕಾ ಮತ್ತು ವಿವಿಧ ಪುಣ್ಯ ಕೇಂದ್ರಗಳು ಸ್ಮಾರ್ಟ್ ಸಿಟಿಗಳಾಗಿ ಪರಿವರ್ತನೆಗೊಳ್ಳುತ್ತಿದೆ. ಈ ಬಗ್ಗೆ ತಾಂತ್ರಿಕ ಅಧ್ಯಯನಗಳು ಪ್ರಾರಂಭಗೊಂಡಿವೆ. ಯೋಜನೆಯ ಪ್ರಾಥಮಿಕ ಹಂತವು ಶೀಘ್ರದಲ್ಲೇ ಪ್ರಾರಂಭಗೊಳ್ಳಲಿದೆ ಎಂದು ಮಕ್ಕಾದ ಗವರ್ನರ್ ಖಲೀದ್ ಅಲ್ ಫೈಝಲ್ ಹೇಳಿದ್ದಾರೆ. ಕಳೆದ ವರ್ಷ ಪ್ರಸ್ತುತ ಯೋಜನೆಯ ಅಭಿವೃದ್ಧಿಗಾಗಿ ಆಡಳಿತಾಧಿಕಾರಿ ಮುಹಮ್ಮದ್ ಬಿನ್ ಸಲ್ಮಾನ್ ರಾಜಕುಮಾರರ ಅಧ್ಯಕ್ಷತೆಯಲ್ಲಿ ರಾಯಲ್ ಕಮೀಷನ್ ಸ್ಥಾಪಿಲಾಗಿತ್ತು.
ಮಕ್ಕಾ ಗವರ್ನರೇಟ್ ಮತ್ತು ವಿವಿಧ ಅಥಾರಿಟಿಗಳು, ಸಚಿವಾಲಯಗಳು ಸೇರಿ ಪುಣ್ಯ ಕೇಂದ್ರಗಳ ಬಗ್ಗೆ ಅಧ್ಯಯನ ನಡೆಸಿದ್ದವು. ಆರಂಭಿಕ ಹಂತ ಪ್ರಾರಂಭಗೊಂಡಿದ್ದು, ಕೆಲವು ವರ್ಷಗಳ ಒಳಗಾಗಿ ಯೋಜನೆ ಪೂರ್ಣಗೊಳ್ಳಲಿದೆ ಎಂದು ಹಜ್ ಕಮಿಟಿ ಅಧ್ಯಕ್ಷ, ಮಕ್ಕಾದ ಗವರ್ನರ್ ಖಾಲಿದ್ ಅಲ್ ಫೈಝಲ್ ಹೇಳಿದ್ದಾರೆ.
ಅಭಿವೃದ್ಧಿಯ ಮೊದಲ ಮಾದರಿಯನ್ನು ಹಜ್ ಪೂರ್ಣಗೊಂಡ ಕೂಡಲೇ ಜಾರಿಗೆ ತರಲಾಗುವುದು ಎಂದು ಪ್ರಿನ್ಸ್ ಖಾಲಿದ್ ಅಲ್ ಫೈಝಲ್ ರಾಜಕುಮಾರ ಹೇಳಿದರು.ಯಾತ್ರಿಕರ ನಿವಾಸಗಳು ಮತ್ತು ಡೇರೆಗಳನ್ನು ಒಳಗೊಂಡಿರುವ ಈ ಯೋಜನೆ ಮುಂದಿನ ವರ್ಷದ ಹಜ್ ವೇಳೆ ಉಪಯೋಗಕ್ಕೆ ಬರಲಿದೆ. ಹಜ್ ಮತ್ತು ಉಮ್ರಾ ಯಾತ್ರೆಗೆ ಅತ್ಯಂತ ಗೌರವ ನೀಡಲಾಗುತ್ತಿದ್ದು, ಯಾತ್ರಿಕರ ಸೇವೆಗಳನ್ನು ಸುಗಮಗೊಳಿಸುವುದಕ್ಕೆ ಅತ್ಯಂತ ಮಹತ್ವವನ್ನು ನೀಡಲಾಗುತ್ತಿದೆ.















ಇನ್ನಷ್ಟು ಸುದ್ದಿಗಳು
ಸೌದಿಯ ವೈಮಾನಿಕ ದಾಳಿ ಇರಾಕಿ ಜನತೆ ಅಥವಾ ಸರ್ಕಾರದ ವಿರುದ್ಧವಲ್ಲ- ಸೌದಿ ಅರೇಬಿಯಾ
ಇಸ್ರೇಲಿ ಉತ್ಪನ್ನಗಳ ಆಮದು ನಿಷೇಧ: ಐರ್ಲೆಂಡ್ ಕ್ರಮವನ್ನು ಸ್ವಾಗತಿಸಿದ ಕತಾರ್
ಪ್ರಾದೇಶಿಕ ಮಟ್ಟದಲ್ಲಿ ಅನಿಶ್ಚಿತತೆ: ಮೂರು ಗಲ್ಫ್ ದೇಶಗಳಿಗೆ ವಿಮಾನ ಸೇವೆ ಸ್ಥಗಿತ
ಅನಿವಾಸಿ ಭಾರತೀಯರ ಪಾಸ್ಪೋರ್ಟ್ ಶುಲ್ಕ ಹೆಚ್ಚಳ: ಮೂರು ವಾರಗಳಲ್ಲಿ ನಿರ್ಧಾರ ತಿಳಿಸುವಂತೆ ಕೇಂದ್ರಕ್ಕೆ ಕೋರ್ಟ್ ನಿರ್ದೇಶನ
ಹೋರ್ಮುಜ್ ಮೂಲಕ ಸುರಕ್ಷಿತ ಸಾರಿಗೆ- ಪ್ರಮುಖ ಚರ್ಚೆಗಾಗಿ ಇರಾನ್ಗೆ ತಲುಪಿದ ಒಮಾನ್ ನಿಯೋಗ
ಉಮ್ರಾ ಯಾತ್ರಿಕರಿಗೆ ಸಿಹಿ ಸುದ್ದಿ: ಒಂದು ವರ್ಷ ಕಾಲಾವಧಿಯ ‘ಮಲ್ಟಿ ಎಂಟ್ರಿ’ ಉಮ್ರಾ ವೀಸಾ ಬಿಡುಗಡೆ
ಭಾರತದ ವಿಮಾನ ಪ್ರಯಾಣಿಕರಿಗೆ ಸಿಹಿ ಸುದ್ದಿ: ಟಿಕೆಟ್ ದರಕ್ಕೆ ಮಾಸಿಕ ಕಂತಿನ ಸೌಲಭ್ಯ
ನಿಖರವಲ್ಲದ ಸುದ್ದಿ ಹಂಚಿಕೊಂಡರೆ ಅಪಾಯ- ನಕಲಿ ಸುದ್ದಿಗಳ ವಿರುದ್ಧ ಸೌದಿಯಲ್ಲಿ ಎಚ್ಚರಿಕೆ
ಸೌದಿ: ‘ಏಕೀಕೃತ ರಾಷ್ಟ್ರೀಯ ವೀಸಾ ಪ್ಲಾಟ್ಫಾರ್ಮ್’ ಅನುಷ್ಠಾನಕ್ಕೆ- ವೀಸಾ ಪ್ರಕ್ರಿಯೆಗಳು ಇನ್ನಷ್ಟು ಸುಲಭ
ಅಂತಾರಾಷ್ಟ್ರೀಯ ಸರ್ವೀಸ್ಗಳಲ್ಲಿ ದರ ಕಡಿತ – ಏರ್ ಇಂಡಿಯಾ ಎಕ್ಸ್ಪ್ರೆಸ್ ಘೋಷಣೆ