ಮಕ್ಕಾ ಮತ್ತು ವಿವಿಧ ಪುಣ್ಯ ಕೇಂದ್ರಗಳು ಸ್ಮಾರ್ಟ್ ಸಿಟಿಗಳಾಗಿ ಪರಿವರ್ತನೆ

ರಿಯಾದ್: ಮಕ್ಕಾ ಮತ್ತು ವಿವಿಧ ಪುಣ್ಯ ಕೇಂದ್ರಗಳು ಸ್ಮಾರ್ಟ್ ಸಿಟಿಗಳಾಗಿ ಪರಿವರ್ತನೆಗೊಳ್ಳುತ್ತಿದೆ. ಈ ಬಗ್ಗೆ ತಾಂತ್ರಿಕ ಅಧ್ಯಯನಗಳು ಪ್ರಾರಂಭಗೊಂಡಿವೆ. ಯೋಜನೆಯ ಪ್ರಾಥಮಿಕ ಹಂತವು ಶೀಘ್ರದಲ್ಲೇ ಪ್ರಾರಂಭಗೊಳ್ಳಲಿದೆ ಎಂದು ಮಕ್ಕಾದ ಗವರ್ನರ್ ಖಲೀದ್ ಅಲ್ ಫೈಝಲ್ ಹೇಳಿದ್ದಾರೆ. ಕಳೆದ ವರ್ಷ ಪ್ರಸ್ತುತ ಯೋಜನೆಯ ಅಭಿವೃದ್ಧಿಗಾಗಿ ಆಡಳಿತಾಧಿಕಾರಿ ಮುಹಮ್ಮದ್ ಬಿನ್ ಸಲ್ಮಾನ್ ರಾಜಕುಮಾರರ ಅಧ್ಯಕ್ಷತೆಯಲ್ಲಿ ರಾಯಲ್ ಕಮೀಷನ್ ಸ್ಥಾಪಿಲಾಗಿತ್ತು.

ಮಕ್ಕಾ ಗವರ್ನರೇಟ್ ಮತ್ತು ವಿವಿಧ ಅಥಾರಿಟಿಗಳು, ಸಚಿವಾಲಯಗಳು ಸೇರಿ ಪುಣ್ಯ ಕೇಂದ್ರಗಳ ಬಗ್ಗೆ ಅಧ್ಯಯನ ನಡೆಸಿದ್ದವು. ಆರಂಭಿಕ ಹಂತ ಪ್ರಾರಂಭಗೊಂಡಿದ್ದು, ಕೆಲವು ವರ್ಷಗಳ ಒಳಗಾಗಿ ಯೋಜನೆ ಪೂರ್ಣಗೊಳ್ಳಲಿದೆ ಎಂದು ಹಜ್ ಕಮಿಟಿ ಅಧ್ಯಕ್ಷ, ಮಕ್ಕಾದ ಗವರ್ನರ್ ಖಾಲಿದ್ ಅಲ್ ಫೈಝಲ್ ಹೇಳಿದ್ದಾರೆ.

ಅಭಿವೃದ್ಧಿಯ ಮೊದಲ ಮಾದರಿಯನ್ನು ಹಜ್ ಪೂರ್ಣಗೊಂಡ ಕೂಡಲೇ ಜಾರಿಗೆ ತರಲಾಗುವುದು ಎಂದು ಪ್ರಿನ್ಸ್ ಖಾಲಿದ್ ಅಲ್ ಫೈಝಲ್ ರಾಜಕುಮಾರ ಹೇಳಿದರು.ಯಾತ್ರಿಕರ ನಿವಾಸಗಳು ಮತ್ತು ಡೇರೆಗಳನ್ನು ಒಳಗೊಂಡಿರುವ ಈ ಯೋಜನೆ ಮುಂದಿನ ವರ್ಷದ ಹಜ್‌ ವೇಳೆ ಉಪಯೋಗಕ್ಕೆ ಬರಲಿದೆ. ಹಜ್ ಮತ್ತು ಉಮ್ರಾ ಯಾತ್ರೆಗೆ ಅತ್ಯಂತ ಗೌರವ ನೀಡಲಾಗುತ್ತಿದ್ದು, ಯಾತ್ರಿಕರ ಸೇವೆಗಳನ್ನು ಸುಗಮಗೊಳಿಸುವುದಕ್ಕೆ ಅತ್ಯಂತ ಮಹತ್ವವನ್ನು ನೀಡಲಾಗುತ್ತಿದೆ.

Leave a Reply

Your email address will not be published. Required fields are marked *

error: Content is protected !!