ದೋಹಾ: ಕತರ್‌ನಲ್ಲಿ ಕಾಲ್ನಡಿಗೆ ಯಾತ್ರಿಕರಿಗೆ ಇರುವ ನಿಯಮಗಳನ್ನು ಕಠಿಣಗೊಳಿಸುವುದರ ಭಾಗವಾಗಿ ಜಾಗೃತಿ ಕಾರ್ಯಕ್ರಮಗಳನ್ನು ಆರಂಭಿಸಲಾಗಿದೆ. ಆಗಸ್ಟ್ ಒಂದರಿಂದ ಹೊಸ ನಿಯಮಗಳು ಜಾರಿಗೆ ಬರಲಿದೆ.
ಕಾಲ್ನಡಿಗೆ ಯಾತ್ರಿಕರ ಟ್ರಾಫಿಕ್ ಉಲ್ಲಂಘನೆಗಳಿಗೆ ದಂಡವನ್ನು ಕಠಿಣಗೊಳಿಸುವ ಭಾಗವಾಗಿ ಅಲ್ಲಿನ ಟ್ರಾಫಿಕ್ ಕಂಟ್ರೋಲ್ ಖಾತೆಯು ಜಾಗೃತಿ ಕಾರ್ಯಾಗಾರಗಳನ್ನು ಪ್ರಾರಂಭಿಸಿದೆ. ಇದರ ಅಂಗವಾಗಿ ಕಡಲ ಕಿನಾರೆ ಮುಂತಾದೆಡೆಯ ಜನರಿಗೆ ಪ್ರತ್ಯೇಕವಾದ ನಿರ್ದೇಶನ, ಎಚ್ಚರಿಕೆಗಳನ್ನು ನೀಡಿದೆ.
ವಿದೇಶಿ ಕಾರ್ಮಿಕರಿಗೆ ಪ್ರತ್ಯೇಕ ಸುರಕ್ಷಾ ವಸ್ತ್ರಗಳನ್ನು ನೀಡಲಾಗಿದೆ. ಅದೇ ರೀತಿ ಹೈವೇಯ ಇಂಟರ್ಸೆಕ್ಷನ್‌ಗಳನ್ನು ಹೇಗೆ ದಾಟಬಹುದು ಎನ್ನುವ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಅದೇ ರೀತಿ ವಿದೇಶಿ ಕಾರ್ಮಿಕರಿಗೆ ರಸ್ತೆ ದಾಟುವ ವೇಳೆ ಧರಿಸಬೇಕಾದ ಜಾಕೆಟ್ ಗಳನ್ನು ವಿತರಿಸಲಾಗಿದೆ.
ವಾಹನ ಚಲಾಯಿಸುವವರಿಗೆ ದೂರದಿಂದಲೇ ಗೋಚರಿಸುವ ರೀತಿಯಲ್ಲಿ ಈ ಜಾಕೆಟ್‌ಗಳನ್ನು ವಿನ್ಯಾಸ ಗೊಳಿಸಲಾಗಿದ್ದು, ಪ್ರಥಮ ಹಂತವಾಗಿ ಜಾಕೆಟ್‌ಗಳನ್ನು ವಿದೇಶೀ ಕಾರ್ಮಿಕರಿಗೆ ವಿತರಿಸಲಾಗಿದೆ. ದೇಶಕ್ಕೆ ಸಂದರ್ಶನಕ್ಕಾಗಿ ಆಗಮಿಸಿದವರ ಮಧ್ಯೆಯೂ ಜಾಗೃತಿ ಮೂಡಿಸಲಾಗುತ್ತಿದೆ.
ಅಪಘಾತ ರಹಿತ ಬೇಸಿಗೆಕಾಲ ಎನ್ನುವ ಯೋಜನೆಯ ಭಾಗವಾಗಿ ಈ ಜಾಗೃತಿ ಕಾರ್ಯಕ್ರಮ ಎನ್ನಲಾಗಿದ್ದು, ಆಗಸ್ಟ್ ಒಂದರಿಂದ ಇದು ಜಾರಿಯಾಗಲಿದೆ. ಟ್ರಾಫಿಕ್ ನಿಶಾನೆಗಳನ್ನು ಉಲ್ಲಂಘಿಸಿ ರಸ್ತೆ ದಾಟುವುದು ಕಂಡು ಬಂದಲ್ಲಿ ಇನ್ನು ಮುಂದೆ 500 ರಿಯಾಲ್ ದಂಡ ವಿಧಿಸಲಾಗುತ್ತದೆ.
ಸೈನಿಕ ಪರೇಡ್ ಮುಂತಾದ ಸಂದರ್ಭಗಳಲ್ಲಿ ಟ್ರಾಫಿಕ್ ಅಧಿಕಾರಿಗಳ ನಿರ್ದೇಶನಗಳನ್ನು ಉಲ್ಲಂಘಿಸುವವರೂ ಇದೇ ದಂಡವನ್ನು ಪಾವತಿಸಬೇಕಾಗುತ್ತದೆ. ಝೀಬ್ರಾ ಲೈನ್ ಇಲ್ಲದ ಕಡೆ ರಸ್ತೆ ದಾಟಿದರೆ 200 ರಿಯಾಲ್ ದಂಡ ಪಾವತಿಸಬೇಕಾಗುತ್ತದೆ. ರಸ್ತೆಗಳ ಮಧ್ಯೆ ಡಿವೈಡರ್‌ಗಳಲ್ಲಿ ನಡೆದಾಡುವುದು ಕಂಡು ಬಂದರೆ ನೂರು ರಿಯಾಲ್ ದಂಡ ವಿಧಿಸಲಾಗುವುದು.
ಆಗಸ್ಟ್ ಒಂದರಿಂದ ಕಾಲ್ನಡಿಗೆ ಯಾತ್ರಿಕರ ಚಲನವಲನಗಳನ್ನು ಪ್ರತ್ಯೆಕ ಅಧಿಕಾರಿಗಳು ನಿರೀಕ್ಷಿಸಲಿದ್ದು, ಉಲ್ಲಂಘನೆ ಕಂಡುಬಂದರೆ ದಾಖಲಿಸಲಿದ್ದಾರೆ. ದೇಶದಲ್ಲಿ ಉಂಟಾಗುವ ಅಫಘಾತ ಸಾವುಗಳ ಪೈಕಿ ಹೆಚ್ಚಿನವು ಕಾಲ್ನಡಿಗೆ ಯಾತ್ರಿಕರದ್ದಾಗಿದ್ದು, ಆ ಕಾರಣಕ್ಕಾಗಿ ಸಚಿವಾಲಯ ರಸ್ತೆ ನಿಯಮಗಳನ್ನು ಕಠಿಣಗೊಳಿಸಿದೆ. ಮದೀನಾ ಖಲೀಫ, ಅಲ್ ರಯ್ಯಾನ್, ಅಲ್ ಮಾಮೂರಾ, ಓಲ್ಡ್ ಏರ್ಪೋರ್ಟ್ ಮುಂತಾದೆಡೆ ಇಂತಹ ಹೆಚ್ಚಿನ ಅಫಘಾತಗಳು ದಾಖಲಾಗಿದೆ.















ಇನ್ನಷ್ಟು ಸುದ್ದಿಗಳು
ಜಿಸಿಸಿ: ಮಾದಕ ಜಾಲದ ವಿರುದ್ಧ ಮತ್ತಷ್ಟು ಕಠಿಣ ನಿಯಮ- ಮರಣದಂಡನೆ ಶಿಕ್ಷೆ
ಮಕ್ಕಾದಲ್ಲಿ ಹಜ್ ನಿಯಮ ಉಲ್ಲಂಘನೆ: ನೂರಾರು ವಿದೇಶಿಯರ ಬಂಧನ
ಯುಎಇ: ವೈಯಕ್ತಿಕ ವಾಟ್ಸಾಪ್ ಚಾಟ್ ಮತ್ತು ಫಾರ್ವರ್ಡ್ಗಳಿಗೂ ಸೈಬರ್ ಕಾನೂನು ಅನ್ವಯ
ಸೌದಿ: ಪಾರ್ಕ್ನಲ್ಲಿ ಆಟವಾಡುತ್ತಿದ್ದಾಗ ವಿದ್ಯುತ್ ಶಾಕ್- ಆರು ವರ್ಷದ ಬಾಲಕ ಮೃತ್ಯು
ಪ್ರಯಾಣಿಕರ ಸಂಕಷ್ಟಕ್ಕೆ ತೆರೆ: ಕುವೈತ್ ವಿಮಾನ ನಿಲ್ದಾಣದ ಕಾರ್ಯಾಚರಣೆ ಪುನಾರಂಭ
ಶುಭ ಸುದ್ದಿ : ಭಾರತ ಸೇರಿದಂತೆ ಪ್ರಮುಖ ಮಾರ್ಗಗಳಲ್ಲಿ ಲಗೇಜ್ ಮಿತಿ ಹೆಚ್ಚಳ
ಆರು ವಿಭಾಗ ಜನರಿಗೆ ಮಕ್ಕಾ ಪ್ರವೇಶಕ್ಕೆ ಅನುಮತಿ- ಅಬ್ಶೀರ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ
ಶುಭ ಸುದ್ದಿ: ಕತಾರ್ನಲ್ಲಿ ವಿಮಾನ ಸೇವೆಗಳು ಯಥಾಸ್ಥಿತಿಗೆ
ಹಜ್ ಯಾತ್ರಿಕರಿಗೆ ಲಗೇಜ್ ರಹಿತ ಪ್ರಯಾಣ- ಸೌದಿ ಸಚಿವಾಲಯದ ಹೊಸ ಯೋಜನೆ
ಸೌದಿ: ವೀಸಾ ಅವಧಿ ಮುಕ್ತಾಯ- ಸ್ವದೇಶಕ್ಕೆ ಮರಳಲಾಗದೆ ಸಾವಿರಾರು ಮಂದಿ ಸಂಕಷ್ಟದಲ್ಲಿ