ದಮ್ಮಾಮ್:ಅಲ್ ಮದೀನ ಮಂಜನಾಡಿ ಇದರ ಜುಬೈಲ್ ಸಮಿತಿಯ ವಾರ್ಷಿಕ ಮಹಾಸಭೆಯು ಜು.19 ರಂದು ಕೆಸಿಎಫ್ ಸಭಾಂಗಣದಲ್ಲಿ ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು ಜುಬೈಲ್ ಕಮಿಟಿಯ ಅಧ್ಯಕ್ಷರಾದ ಮೂಸಾ ಹಾಜಿಯವರು ವಹಿಸಿಕೊಂಡಿದ್ದರು. ಕೆ ಎಂ ಕೆ ಅಬೂಬಕ್ಕರ್ ಮದನಿ ಹೊಸಂಗಡಿರವರ ದುಃವಾದೊಂದಿಗೆ ಪ್ರಾರಂಭಗೊಂಡ ಸಭೆಯಲ್ಲಿ ಇಬ್ರಾಹಿಂ ಪಡಿಕಲ್ ಸ್ವಾಗತಿಸಿದರು.ಹೈದರ್ ನಈಮಿ ಕಿರಾಅತ್ ಪಠಿಸಿದರು.ಉದ್ಘಾಟನೆಯನ್ನು ಅಬ್ದುಲ್ ಅಝೀಝ್ ಸಅಃದಿಯವರು ನೆರವೇರಿಸಿದರು. ಕಾರ್ಯಕ್ರಮವನ್ನು ಅನ್ವರ್ ಪಡುಬಿದಿರೆ ನಿರೂಪಣೆ ಮಾಡಿದರು. ಸಭೆಯಲ್ಲಿ ವಿಶೇಶ ವಾಗಿ ಅಲ್ ಮದೀನಾ ಶಿಲ್ಪಿ ಶರಫುಲ್ ಉಲಮಾ ಶೈಖುನಾ ಅಬ್ಬಾಸ್ ಉಸ್ತಾದರ ಅರೋಗ್ಯ ಹಾಗೂ ದೀರ್ಘ ಆಯುಶ್ಯಕ್ಕಾಗಿ ಪ್ರತೇಕ ದುವಾ ಮಾಡಲಾಯಿತು.
ವರದಿಯನ್ನು ಅಬ್ದುಲ್ ರಶೀದ್ ರವರು ವಾಚಿಸಿ, ಲೆಕ್ಕಪತ್ರವನ್ನು ಹೈಝಂ ಪೆರ್ನೆ ಮಂಡಿಸಿದರು.ಅಲ್ ಮದೀನ ಸೌದಿ ರಾಷ್ಟ್ರೀಯ ಅಧ್ಯಕ್ಷರಾದ ಎನ್ಎಸ್ ಅಬ್ದುಲ್ಲ ರವರು ಮುಖ್ಯಪ್ರಭಾಷಣ ಮಾಡಿದರು.
ಚುನಾವಣೆ ಅಧಿಕಾರಿಯಾಗಿ ಬಂದಂತಹ ಅಲ್ ಮದೀನ ಸೌದಿ ರಾಷ್ಟ್ರೀಯ ಸಮಿತಿ ಪ್ರ ಕಾರ್ಯದರ್ಶಿ ಎಂ ಜಿ ಇಕ್ಬಾಲ್ ಮಲ್ಲೂರು ರವರು ನೂತನ ಸಮಿತಿ ಯನ್ನು ರಚಿಸಿದರು.
ಗೌರವಾಧ್ಯಕ್ಷರಾಗಿ ಮೂಸಾ ಹಾಜಿ ಪೂಡಲ್,
ಅದ್ಯಕ್ಷರಾಗಿ ಅಬ್ದುಲ್ ರಶೀದ್ ವಳವೂರು,
ಉಪಾಧ್ಯಕ್ಷರಾಗಿ ಕೆ ಎಂ ಕೆ ಅಬೂಬಕ್ಕರ್ ಮದನಿ ಹೊಸಂಗಡಿ ಹಾಗೂ ಅಬ್ದುಲ್ ಅಝೀಝ್ ಸಅದಿ ಕುಡ್ತಮುಗೇರು.
ಪ್ರಧಾನ ಕಾರ್ಯದರ್ಶಿಯಾಗಿ ಉಸ್ಮಾನ್ ಮಲಾರ್,ಜೂತೆಕಾರ್ಯದರ್ಶಿಯಾಗಿ ಖಲೀಲ್ ಜೊಕಟ್ಟೆ ಹಾಗೂ ಸಮದ್ ಬಾರ್ಕೊ.
ಸಂಘಟನೆ ಕಾರ್ಯದರ್ಶಿಯಾಗಿ ಇಬ್ರಾಹಿಂ ಪಡಿಕ್ಕಲ್, ಕೋಶಾಧಿಕಾರಿಯಾಗಿ ಮುಹಮ್ಮದ್ ಹೈಝಂ ಪೆರ್ಣೆಯವರನ್ನು ಹಾಗೂ 25 ಮಂದಿ ಕಾರ್ಯಕಾರಿ ಸಮಿತಿ ಸದಸ್ಯರನ್ನಾಗಿ ಆರಿಸಲಾಯಿತು. ಕೊನೆಯಲ್ಲಿ ಪ್ರಧಾನ ಕಾರ್ಯದರ್ಶಿ ಉಸ್ಮಾನ್ ಮಲಾರ್ ಧನ್ಯವಾದ ಸಲ್ಲಿಸಿದರು.















ಇನ್ನಷ್ಟು ಸುದ್ದಿಗಳು
ಮುಸ್ಲಿಂ ನಾಯಕರ ಕಡೆಗಣನೆ: ಕಾಂಗ್ರೆಸ್ ಪಕ್ಷ ಧೂಳಿಪಟ ದೂರವಿಲ್ಲ- ರಜ್ವಿ
ವಾಮಂಜೂರು: ಸಾಂತ್ವನ ಹಾಗೂ ಹಣ್ಣು ಹಂಪಲು ವಿತರಣೆ
ಮಂಗಳೂರು ಮೂಲದ ಶಾಜಹಾನ್ ರಸ್ತೆ ಅಪಘಾತದಲ್ಲಿ ಮರಣ
ಕಿನ್ಯ:ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಸಾಹಿತ್ಯ ಹಬ್ಬಕ್ಕೆ ವಿದ್ಯುಕ್ತ ಚಾಲನೆ – ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಅಲ್ ಮದೀನಾದಲ್ಲಿ ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಮೇ 7ರಂದು ದಾರುಲ್ ಅಮಾನ್ ಎಲ್ಲೂರಿನಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಹಾಗೂ ಸನದು ದಾನ ಸಮಾರಂಭ
ಎಪ್ರಿಲ್ 29 ಕ್ಕೆ ಸಾಮೂಹಿಕ ಉಚಿತ ಸುನ್ನತ್ (ಮುಂಜಿ) ಕಾರ್ಯಕ್ರಮ
ಎಸ್ ವೈ ಎಸ್ ವಾರ್ಷಿಕ ಕೌನ್ಸಿಲ್ ಅಭಿಯಾನ ಆರಂಭ
ಬಾಬಾ ಬುಡನ್ ದರ್ಗಾದಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಸಂದಲ್ ಮತ್ತು ಉರುಸ್ ಆಚರಣೆಗೆ ಜಿಲ್ಲಾಡಳಿತ ಅವಕಾಶ ನಿರಾಕರಣೆ