ಉಪ್ಪಿನಂಗಡಿ: ಜು21 ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್ ದ.ಕ ಜಿಲ್ಲಾ ಬ್ಲಡ್ ಸೈಬೋ ವತಿಯಿಂದ ಜಿಲ್ಲಾದ್ಯಂತ ನಡೆಸಿ ಬರುತ್ತಿರುವ ರಕ್ತದಾನ ಶಿಬಿರದ 98 ಕ್ಯಾಂಪ್ SSF ಉಪ್ಪಿನಂಗಡಿ ಸೆಕ್ಟರ್ ಹಾಗೂ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಲೇಡಿಗೋಷನ್ ಆಸ್ಪತ್ರೆ ಮಂಗಳೂರು ಇದರ ಸಹಭಾಗಿತ್ವದಲ್ಲಿ ಆದಿತ್ಯವಾರ ಬೆಳಗ್ಗೆ 9:00 ರಿಂದ 2:00 ರವರೆಗೆ ಇಲ್ಲಿನ ಮಾದರಿ ಸರಕಾರಿ ಶಾಲಾ ವಠಾರದಲ್ಲಿ ನಡೆಯಿತು.SSF ಉಪ್ಪಿನಂಗಡಿ ಸೆಕ್ಟರ್ ಅಧ್ಯಕ್ಷ ಹಾರಿಸ್ ಸಖಾಫಿ ಅಧ್ಯಕ್ಷತೆಯಲ್ಲಿ ನಡೆದ ಶಿಬಿರದಲ್ಲಿ SYS ಉಪ್ಪಿನಂಗಡಿ ಸೆಂಟರ್ ಅಧ್ಯಕ್ಷ ಸಯ್ಯಿದ್ ಸಾದಾತ್ ತಂಙಳ್ ದುವಾಶಿರ್ವಚನ ನಡೆಸಿದರು,SJM ಉಪ್ಪಿನಂಗಡಿ ರೇಂಜ್ ಪ್ರಧಾನ ಕಾರ್ಯದರ್ಶಿ ರಝ್ಝಾಕ್ ಲತೀಫಿ ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಎಂ.ಎಂ ಮಹ್ ರೂಫ್ ಆತೂರು ಪ್ರಾಸ್ತಾವಿಕ ಭಾಷಣ ಹಾಗೂ ಜಿಲ್ಲಾ SSF ಕ್ಯಾಂಪಸ್ ಕಾರ್ಯದರ್ಶಿ ಅಲೀ ತುರ್ಕಳಿಕ್ಕೆ ಸಂದೇಶ ಭಾಷಣ ಮಾಡಿದರು.ಶಿಬಿರದಲ್ಲಿ ಜಿಲ್ಲಾ SSF ಅಧ್ಯಕ್ಷ ಸೆರ್ಕಳ ಇಬ್ರಾಹಿಂ ಸಖಾಫಿ,ಉಪ್ಪಿನಂಗಡಿ ಡಿವಿಷನ್ ಎಸ್ಸೆಸ್ಸೆಫ್ಪ್ ಅಧ್ಯಕ್ಷ ಮಸ್ ಊದ್ ಸಅದಿ,ಜಿಲ್ಲಾ ಬ್ಲಡ್ ಸೈಬೋ ಸಂಚಾಲಕ ಕರೀಂ ಕದ್ಕಾರ್,ಆದಂ ಮದನಿ ಆತೂರು,ಇಸ್ಹಾಕ್ ಮದನಿ ಅಳಕೆ,ರಹ್ಮಾನ್ ಪದ್ಮುಂಜ,ಆಸಿಫ್ ನೂಜಿ,ಮುಸ್ತಫಾ ಯುಪಿ,ಹಕೀಂ ಕಳಂಜಿಬೈಲ್ ಸೇರಿದಂತೆ ಹಲವಾರು ಗಣ್ಯರು ಭಾಗವಹಿಸಿದರು.ಸುಮಾರು 50 ಕ್ಕಿಂತಲೂ ಮೇಲ್ಪಟ್ಟ ರಕ್ತ ದಾನ ಸಂಗ್ರಹಣೆಯನ್ನು ಮಾಡಲಾಯಿತು.

ಕಾರ್ಯಕ್ರಮವನ್ನು ಸೆಕ್ಟರ್ ಕಾರ್ಯದರ್ಶಿ ಸಿರಾಜ್ ಕುದ್ಲೂರು ಸ್ವಾಗತಿಸಿ ಸೆಕ್ಟರ್ ಪ್ರ.ಕಾರ್ಯದರ್ಶಿ ಉನೈಸ್ ಅಹ್ಮದ್ ಕುಂತೂರು ವಂದಿಸಿದರು.















ಇನ್ನಷ್ಟು ಸುದ್ದಿಗಳು
ಎಪ್ರಿಲ್ 29 ಕ್ಕೆ ಸಾಮೂಹಿಕ ಉಚಿತ ಸುನ್ನತ್ (ಮುಂಜಿ) ಕಾರ್ಯಕ್ರಮ
ಎಸ್ ವೈ ಎಸ್ ವಾರ್ಷಿಕ ಕೌನ್ಸಿಲ್ ಅಭಿಯಾನ ಆರಂಭ
ಬಾಬಾ ಬುಡನ್ ದರ್ಗಾದಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಸಂದಲ್ ಮತ್ತು ಉರುಸ್ ಆಚರಣೆಗೆ ಜಿಲ್ಲಾಡಳಿತ ಅವಕಾಶ ನಿರಾಕರಣೆ
ಸುನ್ನಿ ಸೆಂಟರ್ ಗೂಡಿನಬಳಿ ವತಿಯಿಂದ ರಮಳಾನ್ ಕಿಟ್ ವಿತರಣೆ
ಪೆಬ್ರವರಿ 15 ಮಂಗಳೂರಲ್ಲಿ ಇಹ್ಸಾನೋತ್ಸವ-26 ಘೋಷಣಾ ಸಮಾವೇಶ
ಉಳ್ತೂರು ; ದರ್ಸ್ ವಾರ್ಷಿಕ ಮತ್ತು ಬೀಳ್ಕೊಡಿಗೆ
ಸುಳ್ಯ – ಎಲಿಮಲೆಯಲ್ಲಿ ಇಕ್ರಾಮುಸ್ಸುನ್ನ ಬಿರುದುದಾನ ಮಹಾ ಸಮ್ಮೇಳನಕ್ಕೆ ಪ್ರೌಢ ಸಮಾಪ್ತಿ
ಉಳ್ತೂರು : ದರ್ಸ್ ವಾರ್ಷಿಕ ಮತ್ತು ಅನುಸ್ಮರಣೆ
ಸುಳ್ಯ ಎಲಿಮಲೆಯಲ್ಲಿ ಇಕ್ರಾಮುಸ್ಸುನ್ನ ಸನದುದಾನ ಮಹಾ ಸಮ್ಮೇಳನ ಹಾಗೂ ನುಸ್ರತ್ 42ನೇ ವಾರ್ಷಿಕ ಸಮಾರಂಭ
SSF ಬೆಂಗಳೂರು ಜಿಲ್ಲಾ ವಾರ್ಷಿಕ ಮಹಾಸಭೆ ಸಮಾಪ್ತಿ