janadhvani

Kannada Online News Paper

ಕೆ ಸಿ ಎಫ್ ಯುಎಇ ರಾಷ್ಟ್ರೀಯ ಸಮಿತಿ ಅಧ್ಯಕ್ಷರಾಗಿ ಅಬ್ದುಲ್ ಜಲೀಲ್ ನಿಝಾಮಿ ಆಯ್ಕೆ

ಗಲ್ಫ್ ಕನ್ನಡಿಗರ ಅತೀದೊಡ್ಡ ಸಾಮಾಜಿಕ ವೇದಿಕೆಯಾದ ಕರ್ನಾಟಕ ಕಲ್ಚರಲ್ ಫೌಂಡೇಷನ್ ಕೆಸಿಎಫ್ ಯು ಎ ಇ ರಾಷ್ಟ್ರೀಯ ಸಮಿತಿ ವಾರ್ಷಿಕ ಮಹಾಸಭೆಯು ದಿನಾಂಕ‌ 05 07-2019 ನೇ ಶುಕ್ರವಾರ ಜುಮಾ ನಮಾಜಿನ ಬಳಿಕ ದುಬೈ ಪರ್ಲ್ ಕ್ರೀಕ್ ಹೋಟೆಲ್ ಸಭಾಂಗಣದಲ್ಲಿ ರಾಷ್ಟ್ರೀಯ ಅಧ್ಯಕ್ಷರಾದ ಅಬ್ದುಲ್ ಹಮೀದ್ ಸಅದಿ ಈಶ್ವರಮಂಗಳ ರವರ ಅಧ್ಯಕ್ಷತೆಯಲ್ಲಿ ಜರಗಿತು.

ಹಿರಿಯ ವಿದ್ವಾಂಸರಾದ ಸಯ್ಯಿದ್ ತ್ವಾಹ ಭಾಪಖಿ ತಂಙಳ್ ದು:ಅ ನೆರವೇರಿಸಿ ಸಭೆಯನ್ನು ಉದ್ಘಾಟಿಸಿದರು, ಪ್ರಧಾನ ಕಾರ್ಯದರ್ಶಿ ಇಕ್ಬಾಲ್ ಕಾಜೂರು ವಾರ್ಷಿಕ ವರದಿ ವಾಚಿಸಿ, ಡಿವಿಷನ್ ವರದಿ ಗಳನ್ನು ಆಯಾ ವಿಭಾಗದ ಕಾರ್ಯದರ್ಶಿಗಳು ವಾಚಿಸಿದರು. ಕೋಶಾಧಿಕಾರಿ ಜಲೀಲ್ ನಿಝಾಮಿ ಎಮ್ಮೆಮಾಡು ವಾರ್ಷಿಕ ಲೆಕ್ಕಪತ್ರ ಮಂಡಿಸಿದರು. ಕೆ ಸಿ ಎ ಫ್ ಅಂತರಾಷ್ಟ್ರಿಯ ಪ್ರಧಾನ ಕಾರ್ಯದರ್ಶಿ ಪಿಎಂಎಚ್.ಈಶ್ವರಮಂಗಳ ಹಾಗೂ ಚುನಾವಣಾಧಿಕಾರಿಯಾಗಿ ಆಗಮಿಸಿದ ಅಂತಾರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಇಕ್ಬಾಲ್ ಬೊಳ್ಮಾರ್ ಒಮಾನ್ ರವರ ನೇತೃತ್ವದಲ್ಲಿ ಹಾಲೀ ಸಮಿತಿಯನ್ನು ಬರ್ಕಸ್ತು ಗೊಳಿಸಿ ಈ ಕೆಳಗಿನ ನೂತನ ಸಮಿತಿಯನ್ನು ರಚಿಸಲಾಯಿತು.

ಅಧ್ಯಕ್ಷರು: ಅಬ್ದುಲ್ ಜಲೀಲ್ ನಿಝಾಮಿ
ಪ್ರ.ಕಾರ್ಯದರ್ಶಿ: ಮೂಸ ಹಾಜಿ ಬಸರ
ಕೋಶಾಧಿಕಾರಿ: ಇಬ್ರಾಹಿಮ್ ಬ್ರೈಟ್ ಮಾರ್ಬಲ್

ಸಂಘಟನಾ ವಿಭಾಗ:
ಅಧ್ಯಕ್ಷರು: ಇಕ್ಬಾಲ್ ಕಾಜೂರ್
ಕಾರ್ಯದರ್ಶಿ: ಕಲಂದರ್ ಕಬಕ

ಶಿಕ್ಷಣ ವಿಭಾಗ
ಅಧ್ಯಕ್ಷರು: ಇಬ್ರಾಹಿಮ್ ಸಖಾಫಿ ಕೆದುಂಬಾಡಿ
ಕಾರ್ಯದರ್ಶಿ: ಶಾಹುಲ್ ಹಮೀದ್ ಸಖಾಫಿ ಮಾದಾಪುರ

ವೆಲ್ಫೇರ್ ವಿಭಾಗ
ಅಧ್ಯಕ್ಷರು: ಝೈನುದ್ದೀನ್ ಹಾಜಿ ಬೆಳ್ಳಾರೆ
ಕಾರ್ಯದರ್ಶಿ: ಅಬ್ದುಲ್ ರಹೀಮ್ ಕೋಡಿ

ಆಡಳಿತ ವಿಭಾಗ
ಅಧ್ಯಕ್ಷರು: ಶಾಫೀ ಸಖಾಫಿ ಕೊಂಡಂಗೇರಿ
ಕಾರ್ಯದರ್ಶಿ: ರಫೀಕ್ ಕಲ್ಲಡ್ಕ

ಇಹ್ಸಾನ್ ವಿಭಾಗ
ಅಧ್ಯಕ್ಷರು: ಅಬ್ದುಲ್ಲಾ ಮುಸ್ಲಿಯಾರ್ ಕುಡ್ತಮುಗೇರು
ಕಾರ್ಯದರ್ಶಿ: ಅಬ್ದುಲ್ ಖಾದರ್ ಸಅದಿ ಸುಳ್ಯ

ಪಬ್ಲಿಕೇಷನ್ ವಿಭಾಗ
ಅಧ್ಯಕ್ಷರು: ಅಬ್ದುಲ್ ಕರೀಮ್ ಮುಸ್ಲಿಯಾರ್ ಉರುವಾಲು ಪದವು
ಕಾರ್ಯದರ್ಶಿ: ಅಬ್ದುಲ್ ಹಕೀಮ್ ತುರ್ಕಳಿಕೆ.

ಕೆ ಸಿ ಎಫ್ ಅಂತಾರಾಷ್ಟ್ರೀಯ ನಾಯಕರ ನೇತ್ರತ್ವದಲ್ಲಿ ಹಳೆಯ ಸಮಿತಿಯಿಂದ ನೂತನ ಸಮಿತಿಗೆ ದಾಖಲೆ ಹಾಗೂ ಲೆಕ್ಕ ಪತ್ರಗಳನ್ನು ಹಸ್ತಾಂತರಿಸಲಾಯಿತು. ಝೈನುದ್ದೀನ್ ಹಾಜಿ ಬೆಳ್ಳಾರೆ ಸ್ವಾಗತಿಸಿ. ನೂತನ ಕಾರ್ಯದರ್ಶಿ ಹಾಜಿ ಮೂಸಾ ಬಸರ ಧನ್ಯವಾದಗಳನ್ನು ಅರ್ಪಿಸಿದರು.

ಇದನ್ನೂ ಓದಿರಿ...