ಸೌದಿ ಅರೇಬಿಯಾದಲ್ಲಿ ಕೆ.ಸಿ.ರೋಡ್ ನಿವಾಸಿ ನಿಧನ ಕೆಸಿಎಫ್ ಕಾರ್ಯಕರ್ತರಿಂದ ಅಂತ್ಯಕ್ರಿಯೆ

ದಮ್ಮಾಮ್: ಅಲ್ ಹಸ್ಸಾ,ಮುಬರ್ರಝ್‌ ಎಂಬಲ್ಲಿ ಕಳೆದ ಇಪ್ಪತ್ತು ವರ್ಷಗಳಿಂದ ಖಾಸಗಿ ಕಂಪನಿಯೊಂದರಲ್ಲಿ ಮೇಲ್ವಿಚಾರಕರಾಗಿ ದುಡಿಯುತ್ತಿದ್ದ ಮೂಲತಃ ಕೆ‌.ಸಿ.ರೋಡ್ ಸಮೀಪದ ಪಂಜಲ ನಿವಾಸಿ ಇಲ್ಯಾಸ್ ಎಂಬವರು ಆಕಸ್ಮಿಕವಾಗಿ ನಿಧನರಾಗಿದ್ದರು.

ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆಸಿಎಫ್) ಅಲ್ ಹಸ್ಸಾ ಸೆಕ್ಟರ್ ಮತ್ತು ದಮ್ಮಾಂ ಕೆಸಿಎಫ್ ಝೋನಲ್ ಇದರ ಕಾರ್ಯಕರ್ತರು ಮೃತರ ಎಲ್ಲಾ ಕಡತಗಳನ್ನು ಅತ್ಯಂತ ವೇಗಗತಿಯಲ್ಲಿ ಕೊನೆಗೊಳಿಸಿ ಸೌದಿ ಅರೇಬಿಯಾದಲ್ಲಿ ದಫನ ಮಾಡಲು ಬೇಕಾದ ಎಲ್ಲಾ ದಾಖಲೆಗಳನ್ನು ಭಾರತೀಯ ದೂತವಾಸದಿಂದ ಪಡೆದು, ಮೃತ ದೇಹವನ್ನು ದಫನ ಮಾಡುವುದರಲ್ಲಿ ಕೆಸಿಎಫ್ ನಾಯಕರಾದ ಇಸ್ಹಾಖ್ ಪಜೀರ್, ಭಾಷಾ ಗಂಗಾವಳಿ, ಹಾರೀಸ್ ಕಾಜೂರು ಯಶಸ್ವಿಯಾದರು.

ಬುಧವಾರ ಅಸರ್ ನಮಾಝ್ ಬಳಿಕ ಮಯ್ಯಿತ್ ನಮಾಝ್ ನಿರ್ವಹಿಸಿ ಹಫೂಫ್ ಮಸ್ಜಿದ್ ಅಲ್ ಖೂತ್ ಸಮೀಪದ ದಫನ ಭೂಮಿಯಲ್ಲಿ ದಫನ ಮಾಡಲಾಯಿತು.

ಮೃತರ ಅಂತ್ಯಕ್ರಿಯೆಯಲ್ಲಿ ದಮ್ಮಾಮ್ ಝೊನ್ ಅಧ್ಯಕ್ಷರಾದ ಅಬ್ದುಲ್ ರಶೀದ್ ಸಖಾಫಿ ಮಿತ್ತೂರು ,ಅಲ್ ಹಸ್ಸ ಸೆಕ್ಟರ್ ಅಧ್ಯಕ್ಷ ಅಬೀಬ್ ಮರ್ದಾಳ, ಅಶ್ರು ಬಜ್ಪೆ, ,ಅಹ್ಮದ್ ಸಆದಿ, ಮೊಹಮ್ಮದ್ ಶಾಫಿ ಕುದೀರ್ ,ಇಬ್ರಾಹಿಂ ಸಆದಿ,ಹೈದರ್ ಬಜ್ಪೆ, ನಝೀರ್ ಅಹ್ಯಾತ್ ಮತ್ತು ಹಲವಾರು ಕೆಸಿಎಫ್ ಕಾರ್ಯಕರ್ತರು ಮತ್ತು ಸಾರ್ವಜನಿಕರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *

error: Content is protected !!