ಅಬುಧಾಬಿ: ಮುಸ್ಲಿಂ ಮಹಿಳೆಯರಿಗೆ ಪಾಸ್‌ಪೋರ್ಟ್ ಫೋಟೋದಲ್ಲಿ ಹಿಜಾಬ್ ಧರಿಸುವುದು ಸಮ್ಮತವಾಗಿದ್ದರೂ, ಕಿವಿ ಕಾಣುವಂತೆ ಹಿಜಾಬನ್ನು ಧರಿಸಬೇಕೆನ್ನುವ ವಿವಾದಾತ್ಮಕ ಕಾನೂನನ್ನು ಮತ್ತೊಮ್ಮೆ ಪಾಸ್‌ಪೋರ್ಟ್ ಸೇವಾ ಕೇಂದ್ರ (ಬಿ.ಎಲ್.ಎಸ್)ವು ತಂದಿದೆ. ಒಂದು ವರ್ಷದ ಹಿಂದೆ ಪಾಸ್‌ಪೋರ್ಟ್ ಫೋಟೋದಲ್ಲಿ ಕಿವಿ ಕಾಣುವಂತೆ ಹಿಜಾಬ್ ಧರಿಸಬೇಕೆನ್ನುವ ಕಾನೂನನ್ನು ವಿದೇಶಾಂಗ ಸಚಿವಾಲಯ ಜಾರಿಗೆ ತಂದಿತ್ತು. ಆದರೆ ಮುಖ ಮತ್ತು ಮುಂಗೈ ಬಿಟ್ಟು ಉಳಿದ ಅಂಗಾಂಗಗಳ ಪ್ರದರ್ಶನವನ್ನು ಇಸ್ಲಾಮಿಕ್ ಶರೀಅತ್ ಅನುಮತಿಸುವುದಿಲ್ಲ. ಸಾಂಕೇತಿಕ ಕಾರಣ ಮತ್ತು ವಿವಿಧ ವಲಯಗಳಿಂದ ಕೇಳಿಬಂದ ಪ್ರತಿಭಟನೆಯಿಂದಾಗಿ ಆ ಕಾನೂನನ್ನು ಮೊಟಕುಗೊಳಿಸಲಾಗಿತ್ತು.
ಜಾರಿಗೆ ತರದೆ ಉಳಿದಿದ್ದ ಕಾನೂನನ್ನು ಅಬುಧಾಬಿ ಇಂಡಿಯನ್ ದೂತಾವಾಸದ ಅಧೀನದಲ್ಲಿ ಪಾಸ್‌ಪೋರ್ಟ್ ಸೇವೆ ಒದಗಿಸುವ ಬಿಎಸ್‌ಎಲ್ ಮತ್ತೊಮ್ಮೆ ಕಡ್ಡಾಯಗೊಳಿಸಿದೆ. ಕಳೆದ ಒಂದು ತಿಂಗಳ ಮುಂಚೆ ಈ ಕಾನೂನನ್ನು ಜಾರಿಗೆ ತಂದಿರಲಿಲ್ಲ. ಪಾಸ್‌ಪೋರ್ಟ್ ನವೀಕರಣ ಮಾಡಲು ಇತ್ತೀಚೆಗೆ ಕೇಂದ್ರಕ್ಕೆ ತೆರಳಿದ ಮಹಿಳೆಯರಲ್ಲಿ ಕಿವಿಕಾಣುಂತೆ ಹಿಜಾಬ್ ಧರಿಸುವಂತೆ ಕಡ್ಡಾಯವಾಗಿ ತಿಳಿಸಲಾಗಿತ್ತು. ಅದು ಶರೀಅತ್‌ಗೆ ವಿರುದ್ದವಾಗಿದೆ ಎನ್ನುವುದನ್ನು ಅಲ್ಲಿನ ಅಧಿಕಾರಿಗಳಿಗೆ ಸಮಜಾಯಿಷಿ ನೀಡಿದರೂ ಅದು ಸಚಿವಾಲಯದ ಸುತ್ತೊಲೆಯಾಗಿದ್ದು ಪಾಲಿಸುವುದು ಕಡ್ಡಾಯ ಎಂದು ಅಧಿಕಾರಿಗಳು ತಿಳಿಸಿರುವುದಾಗಿ ದೂರಿನಲ್ಲಿ ವಿವರಿಸಲಾಗಿದೆ.
ದುಬೈ ದೂತಾವಾಸದ ಅಧೀನದಲ್ಲಿ ಕಾರ್ಯಾಚರಿಸುವ ದುಬೈ ಮತ್ತು ಪರಿಸರದಲ್ಲಿ ಕಾರ್ಯಾಚರಿಸುವ ಬಿಎಸ್‌ಎಲ್ ಸೇವಾ ಕೇಂದ್ರಗಳಲ್ಲೂ ಇತರ ದೇಶಗಳಲ್ಲೂ, ಭಾರತದಲ್ಲೂ ಕಿವಿ ಕಾಣಿಸಬೇಕೆಂಬ ಕಾನೂನನ್ನು ಕಡ್ಡಾಯಗೊಳಿಸಲಾಗಿಲ್ಲ ಎನ್ನಲಾಗಿದೆ. ಆದರೆ ಸಿಖ್ ಧರ್ಮದವರಾದ ಪುರುಷರು ಪಾಸ್‌ಪೋರ್ಟ್ ಫೋಟೋದಲ್ಲಿ ಮುಂಡಾಸು ಧರಿಸುವುದರೊಂದಿಗೆ ಕಿವಿ ಕಾಣಿಸುವುದು ಕೂಡ ಅವರಿಗೆ ಆವಶ್ಯವಿಲ್ಲ.
ಶರೀಅತ್ ಕಾನೂನನ್ನು ಅಣಕಗೊಳಿಸುವುದು ಮತ್ತು ಎಲ್ಲೂ ಜಾರಿಗೆ ತರಲಾರದ ಕಾನೂನನ್ನು ಕಡ್ಡಾಯಗೊಳಿಸಲು ಹವಣಿಸುತ್ತಿರುವ ಎಂಬಸಿಯನ್ನು ಹಿಮ್ಮೆಟ್ಟಿಸಲು ಮುಂದಾಗಬೇಕೆಂದು ವಿದೇಶಾಂಗ ಸಚಿವಾಲಯಕ್ಕೆ ಒತ್ತಡ ಹೇರಲು ಅಬುಧಾಬಿಯ ವಿವಿಧ ಸಂಘಟನೆಗಳು ತಯಾರಿ ನಡೆಸಿವೆ.
ವಿವಾದಾತ್ಮಕ ನಿಲುವಿನಿಂದ ಹಿಂದೆ ಸರಿಯುವಂತೆ ಐಸಿಎಫ್ ಅಬುಧಾಬಿ ಸೆಂಟ್ರಲ್ ಕಮಿಟಿಯ ಪ್ರಧಾನ ಕಾರ್ಯದರ್ಶಿ ಹಮೀದ್ ಪರಪ್ಪ ಸಂಬಂಧಿಸಿದ ಇಂಡಿಯನ್ ಕಾರ್ಯಾಲಯವನ್ನು ಕೋರಿದ್ದಾರೆ.















ಇನ್ನಷ್ಟು ಸುದ್ದಿಗಳು
ಸೌದಿಯಲ್ಲಿ ತೀವ್ರ ತಾಪಮಾನ: ವಾಹನಗಳಲ್ಲಿ ಬೆಂಕಿ ಹೊತ್ತಿಕೊಳ್ಳುವ ವಸ್ತುಗಳನ್ನು ಇಡದಂತೆ ಸಿವಿಲ್ ಡಿಫೆನ್ಸ್ ಎಚ್ಚರಿಕೆ
ಪವಿತ್ರ ಕಅಬಾಗೆ ತೊಡಿಸುವ ಕಿಸ್ವಾದ ಹಿಂದಿರುವ ಅದ್ಭುತ ರಹಸ್ಯಗಳ ಬಗ್ಗೆ ನಿಮಗೆ ಗೊತ್ತೇ?
ಅನಿವಾಸಿಗಳಿಗೆ ನೆಮ್ಮದಿ: ಕುವೈತ್ ವಿಮಾನ ನಿಲ್ದಾಣದಲ್ಲಿ ವಿದೇಶಿ ವಿಮಾನಗಳ ಸಂಚಾರಕ್ಕೆ ಅನುಮತಿ
ಅಮೆರಿಕ-ಇರಾನ್ ಕದನ ವಿರಾಮ ಒಪ್ಪಂದ – ಸೌದಿ ಅರೇಬಿಯಾ ಸ್ವಾಗತ
ಸೌದಿಯಲ್ಲಿ ತಪಾಸಣೆ ತೀವ್ರ: ಒಂದೇ ವಾರದಲ್ಲಿ 10,700 ನಿಯಮ ಉಲ್ಲಂಘಕರ ಬಂಧನ- 8,000 ಮಂದಿ ಗಡೀಪಾರು
ದುಬೈ ಏರ್ಪೋರ್ಟ್ನಲ್ಲಿ ಅನಾಥ ಬ್ಯಾಗ್: ಓಪನ್ ಮಾಡಿದ ಅಧಿಕಾರಿಗಳಿಗೆ ಶಾಕ್- ಒಳಗೇನಿತ್ತು ಗೊತ್ತೇ?
ದುಬೈ ಮಿನಿಬಸ್ ಅಪಘಾತ: ಆರು ಮಂದಿ ಭಾರತೀಯರು ಸಹಿತ ಎಂಟು ಮಂದಿ ಮೃತ್ಯು
ಸೌದಿ ಅರೇಬಿಯಾದಲ್ಲಿ ತೀವ್ರಗೊಂಡ ಬಿಸಿಲಿನ ಬೇಗೆ- ಹವಾಮಾನ ಇಲಾಖೆಯಿಂದ ಹೈ ಅಲರ್ಟ್!
ಅಪಾರ್ಟ್ಮೆಂಟ್ ಕೇಂದ್ರೀಕರಿಸಿ ಅನೈತಿಕ ಚಟುವಟಿಕೆ- ನಜ್ರಾನ್ನಲ್ಲಿ 12 ವಿದೇಶಿಗರ ಬಂಧನ
ಕುವೈತ್ ವಿಮಾನ ನಿಲ್ದಾಣದ ಮೇಲೆ ದಾಳಿ: ಗಾಯಗೊಂಡವರಲ್ಲಿ 13 ಮಂದಿ ಭಾರತೀಯರು