ಕುವೈಟ್:.ಕೆಸಿಎಫ್ ಕುವೈತ್ ಸಿಟಿ ಸೆಕ್ಟರ್ ಇದರ ಪುನರ್ರಚನೆ ಹಾಗೂ ಮಾಸಿಕ ಸ್ವಲಾತ್ ಮಜ್ಲಿಸ್ ದಿನಾಂಕ 26/04/2019 ರಂದು ಮಗ್ರಿಬ್ ನಮಾಝ್ ನ ನಂತರ ಬಹುಮಾನ್ಯ ಬಾದುಷ ಸಖಾಫಿ ಉಸ್ತಾದರ ನೇತ್ರತ್ವದಲ್ಲಿ ಕುವೈಟ್ ಸಿಟಿಯ ಹೋಟೆಲ್ ಸಂಗಮ್ ನಲ್ಲಿ ನಡೆಸಲಾಯಿತು.

ಅಧ್ಯಕ್ಷತೆಯನ್ನು ಸಿಟಿ ಸೆಕ್ಟರ್ ನ ಅಧ್ಯಕ್ಷರಾದ ಅಬ್ಬಾಸ್ ಬಳಂಜೆ ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ಕೆಸಿಎಫ್ ಕುವೈತ್ ರಾಷ್ಟ್ರೀಯ ಸಮಿತಿಯ ಶೈಕ್ಷಣಿಕ ಚೆಯರ್ಮ್ಯಾನ್ ಬಹುಮಾನ್ಯ ಫಾರೂಕ್ ಸಖಾಫಿ,ಕೆಸಿಎಫ್ ಸೌತ್ ಝೋನ್ ಚೆಯರ್ಮ್ಯಾನ್ ಬಹುಮಾನ್ಯ ಶಾಹುಲ್ ಹಮೀದ್ ಸಅದಿ ಝುಹ್ರಿ,ಬಹುಮಾನ್ಯ ಬಶೀರ್ ಸಖಾಫಿ , ಕೆಸಿಎಫ್ ಕುವೈತ್ NRD ಕನ್ವೀನರ್ ಮುಸ್ತಫಾ ಉಳ್ಳಾಲ ಹಾಗೂ ಕೆಸಿಎಫ್ ಸೌತ್ ಝೋನ್ ಡೈರೆಕ್ಟರ್ ಅಬ್ದುಲ್ ಮಾಲಿಕ್ ಉಪಸ್ಥಿತರಿದ್ದರು.

ಕಾರ್ಯಕ್ರಮದ ಸ್ವಾಗತ ಕೋರಿದ ಸಿಟಿ ಸೆಕ್ಟರ್ ಕಾರ್ಯದರ್ಶಿ ಶೌಕತ್ ಶಿರ್ವ ವರದಿ ವಾಚಿಸಿ ಲೆಕ್ಕ ಪತ್ರ ಮಂಡಿಸಿದರು.
ಸೆಕ್ಟರ್ ಪುನರ್ರಚನೆಯ R.O ಆಗಿ ಬಂದ ಕೆಸಿಎಫ್ ರಾಷ್ಟ್ರೀಯ ಶಿಕ್ಷಣ ವಿಭಾಗದ ಚೆಯರ್ಮ್ಯಾನ್ ಬಹುಮಾನ್ಯ ಫಾರೂಕ್ ಸಖಾಫಿ ಅವರ ನೇತ್ರತ್ವದಲ್ಲಿ ಹೊಸ ಸಮಿತಿಯನ್ನು ರಚಿಸಲಾಯಿತು. ನಿರ್ಗಮನ ಅಧ್ಯಕ್ಷರಾದ ಅಬ್ಬಾಸ್ ಬಳಂಜೆ ಹಾಗೂ ಕಾರ್ಯದರ್ಶಿ ಶೌಕತ್ ಶಿರ್ವ ಅವರನ್ನು ಸೆಕ್ಟರ್ ವತಿಯಿಂದ ಶಾಲು ಹೊದಿಸಿ ಗೌರವಿಸಲಾಯಿತು.

ಅಧ್ಯಕ್ಷರು – ಇಸ್ಮಾಯಿಲ್ ಕೊಡಗು
ಪ್ರಧಾನ ಕಾರ್ಯದರ್ಶಿ – ಹೈದರ್ ಉಚ್ಚಿಲ
ಕೋಶಾಧಿಕಾರಿ – ಜಮಾಲ್ ಮಣಿಪುರ
ಶಿಕ್ಷಣ ಅಧ್ಯಕ್ಷರು – ಬಶೀರ್ ಸಖಾಫಿ
ಶಿಕ್ಷಣ ಕಾರ್ಯದರ್ಶಿ – ಇಲ್ಯಾಸ್ ಮೊಂಟುಗೊಳಿ
ಸಾಂತ್ವನ ಅಧ್ಯಕ್ಷರು – ಅಝೀಝ್ ತಿಂಗಳಾಡಿ
ಸಾಂತ್ವನ ಕಾರ್ಯದರ್ಶಿ – ಸಲಾಂ ಮಣಿಪುರ
ಪ್ರಕಾಶನ ಅಧ್ಯಕ್ಷರು – ರಹೀಂ ಕೃಷ್ಣಾಪುರ
ಪ್ರಕಾಶನ ಕಾರ್ಯದರ್ಶಿ – ಇಬ್ರಾಹಿಮ್ ಕಾಯಾರ್
ಹಾಗೂ ಹದಿನಾಲ್ಕು ಮಂದಿ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಆರಿಸಲಾಯಿತು.















ಇನ್ನಷ್ಟು ಸುದ್ದಿಗಳು
ಝಮೀರ್ ಹಜ್ ಜಮೀನು ಹೇಳಿಕೆಗೆ ಖಂಡನೆ: ಮಂಗಳೂರಿನ ಸ್ಥಿತಿವಂತ ಮುಸ್ಲಿಮರು ಈ ರಾಜ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ: ಮಾಜಿ ಮೇಯರ್ ಕೆ.ಅಶ್ರಫ್
ಸಲೀಂ ಅಹ್ಮದ್ ರಿಯಾದಿನಲ್ಲಿ ನಿಧನ. ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್ ರಿಯಾದ್
ಕುದ್ರೋಳಿ ಮಖಾಂ ಉರೂಸ್ 2027 ಜನವರಿ 1 ರಿಂದ ಜನವರಿ 9
ಬೆಳ್ತಂಗಡಿ ತಾಲೂಕು ಮೊಹಲ್ಲಾಗಳಿಂದ ತಾಜುಲ್ ಉಲಮಾ ದರ್ಸ್ ಗೆ 10 ಲಕ್ಷ ರೂಪಾಯಿ ಚೆಕ್ ಹಸ್ತಾಂತರ
ತಾಜುಲ್ ಉಲಮಾ ಉರೂಸ್ ಯಶಸ್ಸಿಗೆ ಎಸ್ ವೈ ಎಸ್ ಕರೆ
ಮಂಗಳಪೇಟೆಯ ಈ ಮಕ್ಕಳು ನಮ್ಮ ಮಕ್ಕಳಿಗೆ ಮಾದರಿಯಾಗಲಿ
ಬುರೈದದಲ್ಲಿ ಕೆಸಿಎಫ್ ಅಲ್ ಕಸೀಮ್ ಝೋನ್ ವತಿಯಿಂದ ಲೆಗಸಿ ನೈಟ್-2026 ಫ್ಯಾಮಿಲಿ ಮೀಟ್
ನಮ್ಮ ಭಾರತ ನಮ್ಮ ಹೆಮ್ಮೆ’: ಕೆಸಿಎಫ್ ಸೌದಿ ಅರೇಬಿಯಾದ ರಾಷ್ಟ್ರೀಯ ಮಟ್ಟದ ಆನ್ಲೈನ್ ಸಂವಾದ
ಗೂಡಿನಬಳಿ ಸುನ್ನೀ ಸೆಂಟರ್ ವತಿಯಿಂದ ಸ್ವಾತಂತ್ರ್ಯೋತ್ಸವ
ಕೆ.ಸಿ.ಎಫ್. ಸೌದಿ ರಾಷ್ಟ್ರೀಯ ಸಮಿತಿಯಿಂದ ಆನ್ಲೈನ್ ಸಂವಾದ ಕಾರ್ಯಕ್ರಮಈ