janadhvani

Kannada Online News Paper

ರಾಹುಲ್ ಗಾಂಧಿ ಪ್ರಯಾಣಿಸುತ್ತಿದ್ದ ವಿಮಾನದಲ್ಲಿ ತಾಂತ್ರಿಕ ದೋಷ

ಹೊಸದಿಲ್ಲಿ:ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರು ಪ್ರಯಾಣಿಸುತ್ತಿದ್ದ ವಿಮಾನದಲ್ಲಿ ತಾಂತ್ರಿಕ ದೋಷ ಕಂಡು ಬಂದ ಹಿನ್ನೆಲೆಯಲ್ಲಿ ವಿಮಾನ ದಿಲ್ಲಿಗೆ ವಾಪಸ್ ಆಗಿದೆ ಎಂದು ತಿಳಿದು ಬಂದಿದೆ.

‘ನಾನು ಪ್ರಯಾಣಿಸುತ್ತಿದ್ದ ವಿಮಾನದಲ್ಲಿ ಎಂಜಿನ್ ದೋಷ ಕಂಡು ಬಂದ ಕಾರಣ ಅನಿವಾರ್ಯವಾಗಿ ದಿಲ್ಲಿಗೆ ವಾಪಸ್ಸಾಗಬೇಕಾಗಿದ್ದು, ಬಿಹಾರದ ಸಮಸ್ತಿಪುರ, ಒರಿಸ್ಸಾದ ಬಾಲಾಸೋರ್ ಮತ್ತು ಮಹಾರಾಷ್ಟ್ರದ ಸಂಗಮ್‌ನರ್‌ನಲ್ಲಿ ನಡೆಯಬೇಕಿದ್ದ ಚುನಾವಣಾ ಪ್ರಚಾರ ಕಾರ್ಯ ತಡವಾಗಲಿದೆ. ಇದಕ್ಕಾಗಿ ಕ್ಷಮೆಯಾಚಿಸುತ್ತೇವೆ ಎಂದು ಸ್ವತಃ ರಾಹುಲ್ ಗಾಂಧಿ ಅವರೇ ಟ್ವೀಟ್ ಮಾಡಿದ್ದಾರೆ.

ವಿಮಾನದಲ್ಲಿದ್ದ ಪೈಲಟ್ ಮತ್ತು ಸಹ ಪೈಲಟ್ ಇರುವ ದೃಶ್ಯವನ್ನು ರಾಹುಲ್ ಪೋಸ್ಟ್ ಮಾಡಿದ್ದಾರೆ.