janadhvani

Kannada Online News Paper

ನನ್ನ ಸರಕಾರದಲ್ಲಿ ಧರ್ಮಕ್ಕೆ ಸ್ಥಾನವಿಲ್ಲ, 2022ರಲ್ಲಿ ಎಲ್ಲವನ್ನೂ ಮಾಡಿ ಮುಗಿಸುವೆ- ಮೋದಿ

ಹೊಸದಿಲ್ಲಿ,ಎ.5:‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್’ ನನ್ನ ಘೋಷಣೆಯಾಗಿದೆ. ನನ್ನ ಸರಕಾರದಲ್ಲಿ ಧರ್ಮಕ್ಕೆ ಸ್ಥಾನವಿಲ್ಲ’ ಎಂದು ಅವರು ಮುಸ್ಲಿಮರಿಗೆ ಬಿಜೆಪಿ ಸರಕಾರದಲ್ಲಿ ವಿಶ್ವಾಸ ಇಲ್ಲವೇ ಎನ್ನುವ ಪ್ರಶ್ನೆಗೆ ಮೇಲಿನಂತೆ ಉತ್ತರಿಸಿದರೆಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

ದೇಶದ ಮುಸ್ಲಿಮರಿಗಾಗಿ ಏನು ಮಾಡಿದ್ದೀರಿ ಎಂಬ ಪ್ರಶ್ನೆಗೆ ” ಗುಜರಾತ್ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಇದೇ ಪ್ರಶ್ನೆ ಕೇಳಲಾಗಿತ್ತು, ಮುಸ್ಲಿಮರಿಗೆ ಮಾತ್ರವಲ್ಲ ಹಿಂದೂಗಳಿಗೂ ಏನೂ ಮಾಡಿಲ್ಲ ರಾಜ್ಯದ ಜನತೆಗಾಗಿ ಮಾಡಿದ್ದೇನೆ. 2022ಕ್ಕೆ ಎಲ್ಲಾ ಬರವಸೆಗಳನ್ನೂ ಮಾಡಿ ಮುಗಿಸುವೆ” ಎಂದು ಎಬಿಪಿ ನ್ಯೂಸ್ ನಡೆಸಿದ ಸಂದರ್ಶನದಲ್ಲಿ ಮೋದಿ ಹೇಳಿದರು.

ರಾಮ ಮಂದಿರ ನಿರ್ಮಾಣ ತನ್ನೊಬ್ಬನ ಬೇಡಿಕೆಯಲ್ಲ. ದೇಶದ ಜನರು ಅದನ್ನು ಬಯಸುತ್ತಿದ್ದಾರೆ. ರಾಮಂದಿರ ನಿರ್ಮಾಣಕ್ಕೆ ಸುಪ್ರೀಂಕೋರ್ಟಿನ ತೀರ್ಪಿಗೆ ಕಾಯುಬೇಕಾಗುತ್ತದೆ. ಕೆಲವರು ಮತಗಳಿಕೆಗಾಗಿ ಮುಸ್ಲಿಮರ ನಡುವೆ ಅಸುರಕ್ಷಿತಾವಸ್ಥೆ ಬೆಳೆಸಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.

ಕಾಂಗ್ರೆಸ್‍ನ ಚುನಾವಣಾ ಪ್ರಣಾಳಿಕೆ ಕಪಟತನವಾಗಿದೆ ಎಂದು ಮೋದಿ ಇದೇ ಸಂದರ್ಭದಲ್ಲಿ ಹೇಳಿದರು.