ಮಕ್ಕಾ: ಮಕ್ಕಾ -ಮದೀನಾ ನಗರಗಳನ್ನು ಸಂಪರ್ಕಿಸುವ ಹರಮೈನ್ ಹೈ ಸ್ಪೀಡ್ ರೈಲ್ವೆಯ ಸೇವೆಗಳು ಇನ್ನು ಮುಂದೆ ಬುಧವಾರ ಕೂಡ ಲಭ್ಯವಾಗಲಿದ್ದು, ಈ ತಿಂಗಳ 13 ರಂದು ಬುಧವಾರದ ರೈಲು ಸೇವೆ ಪ್ರಾರಂಭವಾಗಲಿದೆ.
ಅಧಿಕಾರಿಗಳು ಹರಮೈನ್ ಹೈಸ್ಪೀಡ್ ರೈಲ್ವೆಯ ಯಾತ್ರಿಕರಲ್ಲಿ ಅಭಿಪ್ರಾಯ ಸರ್ವೇ ನಡೆಸಿದ್ದು, ಅದರ ಆಧಾರದಲ್ಲಿ ಬುಧವಾರ ಕೂಡ ಸೇವೆ ಪ್ರಾರಂಭಿಸಲು ತೀರ್ಮಾನಿಸಲಾಗಿದೆ. ಸ್ಪೀಡ್ ರೈಲ್ ಕಾರ್ಯಾಚರಣೆ ಮತ್ತು ನಿರ್ವಹಣೆ ಇಲಾಖೆಯ ನಿರ್ದೇಶಕ ಜನರಲ್ ಇಂಜಿನೀಯರ್ ರಯಾನ್ ಅಲ್ ಹರ್ಬಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ಪ್ರಸ್ತುತ ಗುರುವಾರ, ಶುಕ್ರವಾರ, ಶನಿವಾರ ಮತ್ತು ರವಿವಾರಗಳಲ್ಲಿ ಕಾರ್ಯಾಚರಿಸುತ್ತಿರುವ ಹರಮೈನ್ ಹೈ ಸ್ಪೀಡ್ ರೈಲು ಇನ್ನು ಮುಂದೆ ಬುಧವಾರ ಕೂಡ ಲಭ್ಯವಾಗಲಿದೆ. 453 ಕಿಮೀ ವ್ಯಾಪ್ತಿಯನ್ನು ಹೊಂದಿರುವ ಹರಮೈನ್ ಹೈ ಸ್ಪೀಡ್ ರೈಲ್ವೆ, ಮಕ್ಕಾ, ಜಿದ್ದಾ, ರಾಬಿಗ್ ಮತ್ತು ಮದೀನಾ ನಗರಗಳನ್ನು ಸಂಪರ್ಕಿಸುತ್ತದೆ.
ಬುಧವಾರ, ಮದೀನಾದಿಂದ ಮಕ್ಕಾಕ್ಕೆ ಮತ್ತು ಮಕ್ಕಾದಿಂದ ಮದೀನಾಗೆ ಎಂಟು ಸರ್ವೀಸ್‌ಗಳು ಲಭ್ಯವಿದೆ.
ಬುಧವಾರ ಕೂಡ ಪ್ರಾರಂಭವಾಗುವ ಸೇವೆಗಳೊಂದಿಗೆ, ಹರಮೈನ್ ಹೈ ಸ್ಪೀಡ್ ರೈಲ್ವೆಯ ಸಾಪ್ತಾಹಿಕ ಸೇವೆಗಳು 40ಕ್ಕೆ ಏರಲಿದೆ.ಮುಂದಿನ ರಮಝಾನ್‌ನಿಂದ ವಾರದ ಏಳು ದಿನಗಳು ಕೂಡ ರೈಲು ಓಡಾಡಲಿದೆ ಎಂದು ರಯಾನ್ ಅಲ್ ಹರ್ಬಿ ಹೇಳಿದ್ದಾರೆ.















ಇನ್ನಷ್ಟು ಸುದ್ದಿಗಳು
ಜಿಸಿಸಿ: ಮಾದಕ ಜಾಲದ ವಿರುದ್ಧ ಮತ್ತಷ್ಟು ಕಠಿಣ ನಿಯಮ- ಮರಣದಂಡನೆ ಶಿಕ್ಷೆ
ಮಕ್ಕಾದಲ್ಲಿ ಹಜ್ ನಿಯಮ ಉಲ್ಲಂಘನೆ: ನೂರಾರು ವಿದೇಶಿಯರ ಬಂಧನ
ಯುಎಇ: ವೈಯಕ್ತಿಕ ವಾಟ್ಸಾಪ್ ಚಾಟ್ ಮತ್ತು ಫಾರ್ವರ್ಡ್ಗಳಿಗೂ ಸೈಬರ್ ಕಾನೂನು ಅನ್ವಯ
ಸೌದಿ: ಪಾರ್ಕ್ನಲ್ಲಿ ಆಟವಾಡುತ್ತಿದ್ದಾಗ ವಿದ್ಯುತ್ ಶಾಕ್- ಆರು ವರ್ಷದ ಬಾಲಕ ಮೃತ್ಯು
ಪ್ರಯಾಣಿಕರ ಸಂಕಷ್ಟಕ್ಕೆ ತೆರೆ: ಕುವೈತ್ ವಿಮಾನ ನಿಲ್ದಾಣದ ಕಾರ್ಯಾಚರಣೆ ಪುನಾರಂಭ
ಶುಭ ಸುದ್ದಿ : ಭಾರತ ಸೇರಿದಂತೆ ಪ್ರಮುಖ ಮಾರ್ಗಗಳಲ್ಲಿ ಲಗೇಜ್ ಮಿತಿ ಹೆಚ್ಚಳ
ಆರು ವಿಭಾಗ ಜನರಿಗೆ ಮಕ್ಕಾ ಪ್ರವೇಶಕ್ಕೆ ಅನುಮತಿ- ಅಬ್ಶೀರ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ
ಶುಭ ಸುದ್ದಿ: ಕತಾರ್ನಲ್ಲಿ ವಿಮಾನ ಸೇವೆಗಳು ಯಥಾಸ್ಥಿತಿಗೆ
ಹಜ್ ಯಾತ್ರಿಕರಿಗೆ ಲಗೇಜ್ ರಹಿತ ಪ್ರಯಾಣ- ಸೌದಿ ಸಚಿವಾಲಯದ ಹೊಸ ಯೋಜನೆ
ಸೌದಿ: ವೀಸಾ ಅವಧಿ ಮುಕ್ತಾಯ- ಸ್ವದೇಶಕ್ಕೆ ಮರಳಲಾಗದೆ ಸಾವಿರಾರು ಮಂದಿ ಸಂಕಷ್ಟದಲ್ಲಿ