ಮಡಿಕೇರಿ : ಕರ್ನಾಟಕದ ಮುಸ್ಲಿಮರ ಧಾರ್ಮಿಕ ಶೈಕ್ಷಣಿಕ ರಾಜಕೀಯ ಸಾಮಾಜಿಕ ಸ್ಥಿತಿಗತಿಗಳ ಪ್ರಸಕ್ತ ವರದಿಯನ್ನು ಮುಂದಿಟ್ಟು ಸಮುದಾಯದ ಸರ್ವತೋಮುಖ ಅಭಿವೃದ್ಧಿಯ ಗುರಿಯನ್ನಿಟ್ಡುಕೊಂಡು ಜನವರಿ 27 ರಂದು ಬೆಂಗಳೂರಿನ ಮಿಲ್ಲರ್ಸ್ ರಸ್ತೆಯ ಹಳೆ ಹಜ್ ಕ್ಯಾಂಪ್ ಮೈದಾನದಲ್ಲಿ ನೂತನವಾಗಿ ರೂಪುಗೊಳ್ಳುವ ಕರ್ನಾಟಕ ಮುಸ್ಲಿಂ ಜಮಾ ಅತ್ ನ ಪೋಸ್ಟರನ್ನು ಕೊಡಗು ಸಹಾಯಕ ಖಾಝಿ ಎಡಪ್ಪಾಲ ಉಮರ್ ಮುಸ್ಲಿಯಾರ್ ಕರ್ನಾಟಕ ನಗರಾಭಿವೃದ್ಧಿ ಸಚಿವ ಯು ಟಿ ಖಾದರ್ ರವರಿಗೆ ನೀಡುವ ಮೂಲಕ ಮಡಿಕೇರಿ ಕುಶಾಲನಗರದ ಪ್ರವಾಸಿ ಮಂದಿರದಲ್ಲಿ ಬಿಡುಗಡೆಗೊಳಿಸಿದರು.
ಮುಸ್ಲಿಂ ಜಮಾ ಅತ್ ರಾಜ್ಯ ಕೋ ಅರ್ಡಿನೇಟರ್ ಮಾಜಿ ರಾಜ್ಯ ವಕ್ಫ್ ಸದಸ್ಯ ಮೌಲಾನಾ ಶಾಫಿ ಸ ಅದಿ ಬೆಂಗಳೂರು, ಎಸ್ಸೆಸ್ಸೆಫ್ ರಾಜ್ಯ ಅದ್ಯಕ್ಷ ಇಸ್ಮಾಯಿಲ್ ಸಖಾಫಿ ಕೊಂಡಂಗೇರಿ,ಕೊಡಗು ಜಿಲ್ಲಾ ವಕ್ಫ್ ಅದ್ಯಕ್ಷ ಹಮೀದ್ ಕಡಬಗೆರೆ,ಎಸ್ ವೈ ಎಸ್ ಬೆಂಗಳೂರು ಜಿಲ್ಲಾ ಅದ್ಯಕ್ಷ ಬಶೀರ್ ಸ ಅದಿ, ಉಪಾಧ್ಯಕ್ಷ ಇಸ್ಮಾಯಿಲ್ ಸ ಅದಿ ಕಿನ್ಯ,ಎಸ್ಸೆಸ್ಸೆಫ್ ರಾಜ್ಯ ಸಮಿತಿ ಸದಸ್ಯ ಅಬ್ದುರ್ರಹ್ಮಾನ್ ಮೊಗರ್ಪಣೆ, ಮುಸ್ಲಿಂ ಜಮಾ ಅತ್ ಬೆಂಗಳೂರು ಜಿಲ್ಲಾ ಕೋ ಅರ್ಡಿನೇಟರ್ ಹಬೀಬ್ ನಾಳ,
ಕೊಡಗು ಜಿಲ್ಲಾ ಎಸ್ ವೈ ಎಸ್ ಅದ್ಯಕ್ಷ ಹಫೀಲ್ ಸ ಅದಿ ,ಕಾಂಗ್ರೆಸ್ ಅಲ್ಪಸಂಖ್ಯಾತ ಮುಖಂಡ ಯಾಕೂಬ್ ಬಜಪಳ್ಳಿ, ಎಸ್ ವೈ ಎಸ್ ಜಿಲ್ಲಾನಾಯಕ ಯೂಸುಪ್ ಹಾಜಿ ಕೊಂಡಂಗೇರಿ, ಮೈಸೂರು ಜಿಲ್ಲಾ ಮುಸ್ಲಿಂ ಜಮಾ ಅತ್ ಕೋ ಆರ್ಡಿ ನೇಟರ್ ಇಬ್ರಾಹಿಂ ನ ಈಮಿ ಮುಂತಾದವರು ಉಪಸ್ಥಿತಿ ಯಿದ್ದರು.