janadhvani

Kannada Online News Paper

ಸ್ವಶರೀರವನ್ನು ನಿಯಂತ್ರಿಸುವವನೇ ನಿಜವಾದ ಸಾಮರ್ಥ್ಯನು : ಜಬ್ಬಾರ್ ಸಖಾಫಿ ಪಾತೂರು

ಪೇರಮೊಗರು :ಮರಣದ ಭಯದೊಂದಿಗೆ ಜೀವಿಸಿರಿ ಅದು ತಪ್ಪುಗಳನ್ನು ಮಾಡದಂತೆ ತಡೆಯುತ್ತದೆ ಹಾಗೂ ತನ್ನ ಶರೀರದ ಬಯಕೆಗಳಿಗೆ ನಿಯಂತ್ರಣ ಹೇರಿ ಕೆಟ್ಟದ್ದನ್ನು ವರ್ಜಿಸಲು ಸಾಧ್ಯವಾಗುವುದಾದರೆ ಅವನೇ ನಿಜವಾದ ಸಾಮರ್ಥ್ಯನು ಎಂದು ಉಸ್ತಾದ್ ಜಬ್ಬಾರ್ ಸಖಾಫಿ ಪಾತೂರು ಹೇಳಿದರು.

ಅವರು ತಾಜುಲ್ ಉಲಮಾ ಇಹ್ಯಾ ಉಲೂಮುದ್ದೀನ್ ಮದ್ರಸ ಸತ್ತಿಕಲ್ ಇದರ ವತಿಯಿಂದ ನಡೆದ ಅಗಲಿದ ಮಹಾತ್ಮರ ಅನುಸ್ಮರಣಾ ಕಾರ್ಯಕ್ರಮದಲ್ಲಿ ಮುಖ್ಯ ಪ್ರಭಾಷಣ ನಡೆಸಿದರು.ಅಸ್ಸಯ್ಯಿದ್ ಸಾದಾತ್ ತಂಙಳ್ ಕರುವೇಲು ಅಧ್ಯಕ್ಷತೆ ವಹಿಸಿದ್ದರು.ಅಳಕೆಮಜಲು ಖತೀಬ್ ಶರೀಫ್ ಸಖಾಫಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.ಪ್ರಾಸ್ತಾವಿಕ ಭಾಷಣ ಹಾಗೂ ದುಆ ನೇತೃತ್ವವನ್ನು ಅಸ್ಸಯ್ಯಿದ್ ಶಿಹಾಬುದ್ದೀನ್ ಅಲ್ ಹೈದ್ರೋಸಿ ಸಖಾಫಿ ತಂಙಳ್ ಕಿಲ್ಲೂರು ನಡೆಸಿಕೊಟ್ಟರು.

ವೇದಿಕೆಯಲ್ಲಿ ಅಸ್ಸಯ್ಯಿದ್ ಸಾಬಿತ್ ತಂಙಳ್ ಪಾಟ್ರಕೋಡಿ, ಹಾರಿಸ್ ಮದನಿ ಪಾಟ್ರಕೋಡಿ, ಎಸ್ಸೆಸ್ಸೆಫ್ ಮಾಣಿ ಸೆಕ್ಟರ್ ಅಧ್ಯಕ್ಷ ಸ್ವಾದಿಖ್ ಮುಈನೀ ಗಡಿಯಾರ್, ಅಬ್ದುಲ್ ಹಮೀದ್ , ಇಸ್ಮಾಯಿಲ್ ಮುನೀರ್, ಅಬ್ದುಲ್ ಮಜೀದ್, ನೌಶಾದ್ ಡ್ರೈವರ್ ಸತ್ತಿಕಲ್, ಇಬ್ರಾಹಿಂ ಹಾಜಿ ಪೇರಮೊಗರು, ಅಬ್ದುಲ್‌ ರಶೀದ್ ಪೆರ್ನೆ, ಅನ್ಸಾರ್, ಅಝೀಝ್ ಸ್ಟೀಲ್, ರಹಿಮಾನ್ ಬೈಲ್ ಮುಂತಾದ ಹಲವಾರು ಉಲಮಾ ಉಮರಾ ನೇತಾರರು ಭಾಗವಹಿಸಿದ್ದರು, ಆಸಿಫ್ ಸಅದಿ ಸ್ವಾಗತಿಸಿದರು,ಜಲೀಲ್ ಸಖಾಫಿ ಕಾರ್ಯಕ್ರಮ ನಿರೂಪಿಸಿದರು.

error: Content is protected !! Not allowed copy content from janadhvani.com