janadhvani

Kannada Online News Paper

ಯಶಸ್ವಿಯಾಗಿ ನಡೆದ “ಅಲ್ ಮಫಾಝ್ ಮೂಡಬಿದ್ರೆ ಮುಲಾಖಾತ್ 2019 – ರಿಯಾದ್” ಕಾರ್ಯಕ್ರಮ

ಅಲ್ ಮಫಾಝ್ ಮೂಡಬಿದ್ರೆ ಮುಲಾಖಾತ್ 2019 ಕಾರ್ಯಕ್ರಮ ರಿಯಾದ್ ಸಮಿತಿ ಅಧ್ಯಕ್ಷ ಅಬ್ದುಲ್ ಹಮೀದ್ ಹೊಸಂಗಡಿಯವರ ಅಧ್ಯಕ್ಷತೆಯಲ್ಲಿ ನಡೆಯಿತು. ಹಬೀಬ್ ಟಿ.ಎಚ್ ರವರು ಆಗಮಿಸಿದ ಗಣ್ಯರನ್ನು ಸ್ವಾಗತಿಸಿದರು. ಮುಸ್ತಫಾ ಸಅದಿ ಉಸ್ತಾದ್ ಕಾರ್ಯಕ್ರಮ ಉದ್ಘಾಟಿಸಿ ಅಲ್ ಮಫಾಝ್ ಟ್ರಸ್ಟ್ ನ ಕಾರ್ಯಕ್ರಮ ಅಭಿನಂದನಾರ್ಹ ಎಂದರು. ನಂತರ ಸಂಸ್ಥೆಯ ಸಾರಥಿ ಪಿ. ಪಿ. ಅಹ್ಮದ್ ಸಖಾಫಿಯವರು ಸಂಸ್ಥೆಯ ಕಾರ್ಯಚಟುವಟಿಕೆ, ಸಮಾಜ ಸೇವೆ ಹಾಗೂ ಮೂಡಬಿದ್ರೆ ಪರಿಸರಕ್ಕೆ ಇರುವ ಅವಶ್ಯಕತೆಯನ್ನು ವಿವರವಾಗಿ ತಿಳಿಸಿದರು.

ರಿಯಾದ್ ಸಮಿತಿ ಹಾಗೂ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲು ಮುಂಚೂಣಿ ನಾಯಕರಾಗಿ ಕಾರ್ಯ ನಿರ್ವಹಿಸಿದ್ದ ಹಂಝ ಮೈಂದಾಳ ಕಾರ್ಯಕ್ರಮ ನಿರೂಪಿಸಿದರು. ಮುಖ್ಯ ಅತಿಥಿಗಳಾಗಿ ಅಬ್ದುಲ್ ಅಝೀಝ್ ಬಜ್ಪೆ, ಮಲ್ಜ ಶರೀಫ್ ಮದನಿ, ಮರ್ಕಝುಲ್ ಹುದಾ ಶರೀಫ್ ಅಮಾನಿ, ನ್ಯೂ ಸನಯ್ಯ ಅಬ್ದುಲ್ ರಹ್ಮಾನ್ ಮದನಿ, ಇಲ್ಯಾಸ್ ಲತೀಫಿ, ತಾಜುಸ್ಸುನ್ನ ಅನಸ್ ಸಅದಿ ಭಾಗವಹಿಸಿದರು. ಮಫಾಝ್ ಸರ್ವ ಸದಸ್ಯರು ಕಾರ್ಯಕ್ರಮದ ಯಶಸ್ಸಿನಲ್ಲಿ ಸಕ್ರೀಯವಾಗಿ ಪಾಲ್ಗೊಂಡಿದ್ದರು. ಉಸ್ತಾದರ ದುವಾ ಹಾಗೂ ರಿಯಾದ್ ಸಮಿತಿ ಅಧ್ಯಕ್ಷ ಅಬ್ದುಲ್ ಹಮೀದ್ ಹೊಸಂಗಡಿಯವರ ಧನ್ಯವಾದಗಳೊಂದಿಗೆ ಕಾರ್ಯಕ್ರಮ ಮೂರು ಸ್ವಲಾತಿನೊಂದಿಗೆ ಮುಕ್ತಾಯವಾಯಿತು.

error: Content is protected !! Not allowed copy content from janadhvani.com