janadhvani

Kannada Online News Paper

ಮಾಣಿ :ಪ್ರವಾದಿ ಮುಹಮ್ಮದ್ ಪೈಗಂಬರ್ (ಸ.ಅ)ರವರನ್ನು ನಿಂದನೆ ಮಾಡಿ ಸಮಾಜದಲ್ಲಿ ಕೋಮು ಸಂಘರ್ಷಕ್ಕೆ ಕಾರಣವಾಗುವ ರೀತಿಯಲ್ಲಿ ವರ್ತಿಸಿ ಅಗೌರವ ತೋರಿದ್ದಲ್ಲದೇ ಮುಸ್ಲಿಮರ ಧಾರ್ಮಿಕ ಭಾವನೆಯನ್ನು ಕೆರಳಿಸಿದ ಸುವರ್ಣ ನ್ಯೂಸ್ ಚಾನಲ್ ನಿರೂಪಕ ಅಜಿತ್ ಹನುಮಕ್ಕನವರು ಹಾಗೂ ಸುವರ್ಣ ನ್ಯೂಸ್ ಚಾನಲ್ ವಿರುಧ್ಧ ಎಸ್ಸೆಸ್ಸೆಫ್ ಮಾಣಿ ಸೆಕ್ಟರ್ ಸಮಿತಿಯು ವಿಟ್ಲ ಠಾಣೆಯಲ್ಲಿ ದೂರು ದಾಖಲಿಸಿತು,

ಈ ಸಂದರ್ಭದಲ್ಲಿ ಎಸ್ಸೆಸ್ಸೆಫ್ ಮಾಣಿ ಸೆಕ್ಟರ್ ಅಧ್ಯಕ್ಷರಾದ ಸ್ವಾದಿಖ್ ಮುಈನಿ ಗಡಿಯಾರ್,ಉಪಾಧ್ಯಕ್ಷರಾದ ಹಾಫಿಳ್ ತೌಸೀಫ್ ಕೆಮ್ಮಾನ್, ಹಾಗೂ ಖಲಂದರ್ ಬುಡೋಳಿ, ಸೆಕ್ಟರ್ ಪ್ರಧಾನ ಕಾರ್ಯದರ್ಶಿ ಕೆ.ಪಿ ಖಲಂದರ್ ಪಾಟ್ರಕೋಡಿ ,ಸೆಕ್ಟರ್ ಕೋಶಾಧಿಕಾರಿ ಸಿದ್ಧೀಖ್ ಪೆರ್ನೆ, ಸೆಕ್ಟರ್ ಸದಸ್ಯ ಜಾಬಿರ್ ಮಿತ್ತೂರು,ಹಾಗೂ ಸಂಶುದ್ದೀನ್ ಉಸ್ತಾದ್ ಗಡಿಯಾರ್,ಜತೆಗಿದ್ದರು.

error: Content is protected !! Not allowed copy content from janadhvani.com