janadhvani

Kannada Online News Paper

ಇಸ್ಲಾಮ್ ಮತ್ತು ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವ ಸಲ್ಲಮ್ ರವರ ಬಗ್ಗೆ ಸುವರ್ಣ ನ್ಯೂಸ್ ನ ಚಾನೆಲ್ ನ ನಿರೂಪಕ ಅಜಿತ್ ಹನುಮಕ್ಕನವರು ನೀಡಿರುವ ಹೇಳಿಕೆ ಯನ್ನು ಕೆ ಸಿ ಎಫ್ ಕತಾರ್ ರಾಷ್ಟ್ರೀಯ ಸಮಿತಿ ಖಂಡನೆ ವ್ಯಕ್ತಪಡಿಸುತ್ತಿದೆ.
ಶ್ರೀರಾಮನ ಬಗ್ಗೆ ಚರ್ಚೆ ನಡೆಸುವಾಗ ರಾಮನನ್ನು ಸಮರ್ಥಿಸಲು ಬೇಕಾದ ಹಿಂದೂ ಧರ್ಮದ ಅದಾರ ಗಳನ್ನು ಮುಂದಿಟ್ಟು ಭಗವಾನ್ ನ ವಾದವನ್ನು ಬಾಲಿಶಮಾಡಬಹುದಿತ್ತು, ಅದನ್ನು ಬಿಟ್ಟು “ಕೈಲಾಗದವ ಮೈ ಪರಚಿ ಕೊಂಡ” ಎಂಬ ನಾಣ್ಣುಡಿಯಂತೆ ಇಸ್ಲಾಮ್ ನ ಮೇಲೆ ಎರಗಿದ ಇವರ ನಿಲುವು ಇವರಿಗಿರುವ ಮಾಧ್ಯಮ ಧರ್ಮದ ಸಾಮಾನ್ಯ ಜ್ಞಾನ ವನ್ನು ಎತ್ತಿ ತೋರಿಸುತ್ತಿದೆ . ಕನಿಷ್ಠ ಹಿಂದೂ ಧರ್ಮದ ಇತಿಹಾಸದವಾದರೂ ತಿಳಿದಿರುತ್ತಿದ್ದರೆ ಇಂತಹ ಹೇಳಿಕೆಯನ್ನು ಇವರು ಖಂಡಿತವಾಗಿಯೂ ನೀಡುತ್ತಿರಲಿಲ್ಲ.

ಅರೆಬರೆ ಧಾರ್ಮಿಕ ಅರಿವು ಹಾಗೂ ಸಾಮಾಜಿಕ ಪ್ರಜ್ಞೆ ಹೊಂದಿರುವ ಇವರನ್ನು ತಕ್ಷಣ ಇಂತಹ ಜವಾಬ್ದಾರಿಯುತ ವೃತ್ತಿಯಿಂದ ವಜಾಗೊಳಿಸಬೇಕಾಗಿ ಕೆ ಸಿ ಎಫ್ ಕತಾರ್ ರಾಷ್ಟ್ರೀಯ ಸಮಿತಿ ಆಗ್ರಹಿಸುತ್ತಿದೆ. ಈ ಬಗ್ಗೆ ಆದಷ್ಟು ಬೇಗ ಸೂಕ್ತ ಕ್ರಮ ಕೈಗೊಳ್ಳುವಂತೆ ಹಾಗೂ ಇಂತಹ ಸನ್ನಿವೇಶಗಳಿಗೆ ಅವಕಾಶ ಕೊಡಬಾರದೆಂಬ ಬೇಡಿಕೆಯೊಂದಿಗೆ ಕರ್ನಾಟಕ ಕಲ್ಚರಲ್ ಫೌಂಡೇಶನ್ ಕತಾರ್ ರಾಷ್ಟ್ರೀಯ ಸಮಿತಿಯು ರಾಜ್ಯದ ಮಾನ್ಯ ಮಂತ್ರಿಗಳಾದ ಶ್ರೀ ಯುತ ಕುಮಾರ ಸ್ವಾಮಿ, ಗ್ರಹ ಸಚಿವರಾದ ಎಂ ಬಿ ಪಾಟೀಲ್ ಹಾಗೂ ಕರ್ನಾಟಕ ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ಮನವಿ ಸಲ್ಲಿಸಲಾಗಿದೆ.

error: Content is protected !! Not allowed copy content from janadhvani.com