ಉದ್ಯಾನವನಗಳಲ್ಲಿ ನಮಾಜ್ ಮಾಡುವಂತಿಲ್ಲ

ಲಖನೌ:- ಉದ್ಯಾನವನ ಸೇರಿದಂತೆ ಯಾವುದೇ ಸಾರ್ವಜನಿಕ ಸ್ಥಳಗಳಲ್ಲಿ ನಮಾಜ್ ಮಾಡುವಂತಿಲ್ಲ ಎಂದು ಉತ್ತರ ಪ್ರದೇಶ ಪೊಲೀಸರು ನೊಯ್ಡಾದಲ್ಲಿರುವ ಕಂಪನಿಗಳಿಗೆ ನೋಟಿಸ್ ಜಾರಿ ಮಾಡಿದ್ದಾರೆ.
ನೊಯ್ಡಾದ ಹಲವು ಕಂಪನಿಗಳ ನೌಕರರು ಉದ್ಯಾನವನ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ನಮಾಜ್ ಮಾಡುವ ಕುರಿತಂತೆ ಸಾಕಷ್ಟು ದೂರುಗಳು ಸರ್ಕಾರಕ್ಕೆ ಸಲ್ಲಿಕೆಯಾಗಿದ್ದವು.
ಈ ಹಿನ್ನೆಲೆ ಎಲ್ಲ ಪೊಲೀಸ್ ಠಾಣೆಗಳು ನೊಯ್ಡಾ ಕಂಪನಿಗಳಿಗೆ ನೋಟಿಸ್ ಜಾರಿ ಮಾಡಿ ಉದ್ಯಾನವನ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ನಮಾಜ್ ಸಲ್ಲಿಸದಿರಲು ತಮ್ಮ ನೌಕರರಿಗೆ ಸೂಚನೆ ನೀಡಬೇಕು. ಶುಕ್ರವಾರದ ನಮಾಜ್ ಸೇರಿದಂತೆ ಉಳಿದ ದಿನಗಳಲ್ಲಿ ಮಸೀದಿ ಈದ್ಗಾ ಮೈದಾನಗಳಲ್ಲಿ ನಮಾಜ್ ಸಲ್ಲಿಸುವಂತೆ ಸೂಚಿಸಲಾಗಿದೆ.
ನಮಾಜ್ ಸಲ್ಲಿಸುವವರ ಸಂಖ್ಯೆ ಹೆಚ್ಚಾಗಿರುವ ಹಿನ್ನೆಲೆ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಎಚ್ಚರವಹಿಸುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಇಂತಹ ಕ್ರಮಕ್ಕೆ ಮುಂದಾಗಿದೆ.

ಪಾರ್ಕ್‌ ಸೇರಿದಂತೆ ಯಾವುದೇ ಸಾರ್ವಜನಿಕ ಸ್ಥಳಗಳಲ್ಲಿ ಮುಸ್ಲಿಂ ಉದ್ಯೋಗಿಗಳ ನಮಾಜ್‌ಗೆ ತಡೆ ಹೇರಿ ನೋಯ್ಡಾ ಪೊಲೀಸರು ಕೈಗೊಂಡ ಕ್ರಮ ಈಗ ವ್ಯಾಪಕ ಚರ್ಚೆಗೆ ಎಡೆಮಾಡಿಕೊಟ್ಟಿದೆ.
ಪ್ರಕರಣ ರಾಜಕೀಯ ತಿರುವು ಪಡೆದಿದೆ. 2019ರ ಲೋಕಸಭೆ ಚುನಾವಣೆಗೆ ಮೊದಲು ಆಡಳಿತಾರೂಢ ಬಿಜೆಪಿಗೆ ಒಡೆದು ಆಳುವ ವಾತಾವರಣ ಸೃಷ್ಟಿಸಲು ಸರಕಾರಿ ಅಧಿಕಾರಿಗಳು ಅನುವು ಮಾಡಿಕೊಡುತ್ತಿದ್ದಾರೆ ಎಂದು ಸಮಾಜವಾದಿ ಪಕ್ಷ ದೂರಿದೆ. ನಮಾಜ್‌ ವಿರುದ್ಧದ ಪೊಲೀಸರ ಕ್ರಮವನ್ನು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್‌ ಓವೈಸಿ ಖಂಡಿಸಿದ್ದಾರೆ. 

ಹಿಂದುಗಳು ಹಾಕಿದ್ದ ಪೆಂಡಾಲ್​ಗಳ ತೆರವು :
ನೊಯ್ಡಾ: ಸಾರ್ವಜನಿಕ ಸ್ಥಳ ಹಾಗೂ ಪಾರ್ಕ್​ಗಳಲ್ಲಿ ಮುಸ್ಲಿಮರು ನಮಾಜ್​ ಮಾಡುವಂತಿಲ್ಲ ಎಂದು ಪೊಲೀಸರು ಆದೇಶ ಹೊರಡಿಸಿದ ಎರಡು ದಿನಗಳ ನಂತರ ಹಿಂದು ಧಾರ್ಮಿಕ ಕಾರ್ಯಕ್ರಮಕ್ಕಾಗಿ ಸರ್ಕಾರಿ ಸ್ಥಳದಲ್ಲಿ ಹಾಕಿದ್ದ ಪೆಂಡಾಲ್​ಗಳನ್ನು ಪೊಲೀಸರ ಜತೆಗೂಡಿ ಗ್ರೇಟರ್​ ನೋಯ್ಡಾ ಪ್ರಾಧಿಕಾರ ತೆರವುಗೊಳಿಸಿದೆ. 

ಕಾರ್ಯಕ್ರಮ ಆಯೋಜಕರು ಜಿಲ್ಲಾಡಳಿತದಿಂದ ಯಾವುದೇ ಅನುಮತಿ ಪಡೆಯದೆ ಟೆಂಟ್​ ಹಾಕಿದ್ದರು. ಸುಮಾರು 1000 ಸ್ಕ್ವೇರ್ ಮೀಟರ್​ಗಳಷ್ಟು ಅಳತೆಯ ಭೂಮಿಯನ್ನು ಬಳಸಿಕೊಂಡಿದ್ದರು. ಇದು ಗ್ರೇಟರ್​ ನೋಯ್ಡಾ ಪ್ರಾಧಿಕಾರಕ್ಕೆ ಸೇರಿದ ಭೂಮಿ. ಯಾವುದೇ ಧಾರ್ಮಿಕ ಕಾರ್ಯಕ್ರಮಕ್ಕೆ ಸರ್ಕಾರಿ ಭೂಮಿ ಬಳಸಿಕೊಳ್ಳುವಾಗ ಅನುಮತಿ ಪಡೆಯುವುದು ಅಗತ್ಯ. ಅವರು ನಮ್ಮ ಬಳಿ ಕೇಳದ ಕಾರಣ ಪೆಂಡಾಲ್​ಗಳನ್ನು ತೆಗೆಸಿದ್ದೇವೆ ಎಂದು ಪ್ರಾಧಿಕಾರದ ಅಧಿಕಾರಿ ತಿಳಿಸಿದ್ದಾರೆ. 

ಈ ಸ್ಥಳದಲ್ಲಿ 9 ದಿನಗಳ ಭಾಗವತ ಕಥಾ ಏರ್ಪಡಿಸಿದ್ದರು. ಅದಕ್ಕಾಗಿ ಮೈಕ್​ಗಳನ್ನೂ ಹಾಕಿದ್ದರು. ಅದನ್ನೆಲ್ಲ ಗ್ರೇಟರ್​ ನೋಯ್ಡಾ ಪ್ರಾಧಿಕಾರ ಪೊಲೀಸರಿಗೆ ಸೂಚನೆ ನೀಡಿ ತೆಗೆಸಿದ ಬಳಿಕ ಹಲವು ಜನರು ಪ್ರಾಧಿಕಾರದ ಎದುರು ಪ್ರತಿಭಟನೆ ನಡೆಸಿ, ಘೋಷಣೆ ಕೂಗಿದ್ದಾರೆ. 

Leave a Reply

Your email address will not be published. Required fields are marked *

error: Content is protected !!