ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ ತೊಕ್ಕೊಟ್ಟು ಸೆಕ್ಟರ್ ಅಧೀನದಲ್ಲಿ ಬರುವ ಸ್ವಲಾತ್ ನಗರ ಶಾಖೆ ಕುತ್ತಾರ್ ಇದರ ವಾರ್ಷಿಕ ಮಹಾಸಭೆಯು ದಿನಾಂಕ 16/10/2018 ರಂದು ಸೆಕ್ಟರ್ ಕಚೇರಿಯಲ್ಲಿ ನಡೆಯಿತು.
ಚುನಾವಣಾಧಿಕಾರಿಯಾಗಿ ತೊಕ್ಕೊಟ್ಟು ಸೆಕ್ಟರ್ ಅಧ್ಯಕ್ಷ ಜಾಫರ್ ಯು.ಎಸ್ ಹಾಗೂ ಉಪಾಧ್ಯಕ್ಷ ಜುನೈದ್ ಮದನಿ ನಗರ ಆಗಮಿಸಿದರು ಹಾಗೂ ಮುಖ್ಯ ಅಥಿತಿಯಾಗಿ ಬಂದ ಎಸ್.ಎಸ್.ಎಫ್ ಜಿಲ್ಲಾ ನಾಯಕರುಗಳಾದ ಉಳ್ಳಾಲ ಡಿವಿಷನ್ ಅಧ್ಯಕ್ಷರು ಮುನೀರ್ ಕಾಮಿಲ್ ಸಖಾಫಿ ಉಸ್ತಾದ್ ಹಾಗೂ ಸಯ್ಯಿದ್ ಖುಬೈಬ್ ತಂಙಳ್ ಆಗಮಿಸಿ ಪ್ರಾಸ್ತಾವಿಕ ಪ್ರವಚನ ನೀಡಿ ಮಹಾಸಭೆಯನ್ನು ನಡೆಸಿ ನೂತನ ಸಮಿತಿಯನ್ನು ರಚಿಸಿಕೊಟ್ಟರು.
ನೂತನ ಪದಾಧಿಕಾರಿಗಳು ಅಧ್ಯಕ್ಷರಾಗಿ ಮುಹಮ್ಮದ್ ಮುಸ್ತಫಾ, ಉಪಾಧ್ಯಕ್ಷರಾಗಿ ಮುಹಮ್ಮದ್ ಆಸಿಫ್ ಕೆ.ಎಸ್. ಮತ್ತು ಹಾಫಿಳ್ ಅರ್ಷದ್ ಸ್ವಲಾತ್ ನಗರ, ಪ್ರಧಾನ ಕಾರ್ಯದರ್ಶಿಯಾಗಿ ಸುಹೈಲ್ ಸ್ವಲಾತ್ ನಗರ, ಜೊತೆ ಕಾರ್ಯದರ್ಶಿಯಾಗಿ ನಾಸಿರ್ ಸ್ವಲಾತ್ ನಗರ ಮತ್ತು ಕೋಶಾಧಿಕಾರಿಯಾಗಿ ಅನ್ಸಾರ್ ಸ್ವಲಾತ್ ನಗರ ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ 10 ಮಂದಿಯನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಸಭೆಯಲ್ಲಿ ಪ್ರಮುಖರಾದ ಬಿ.ಎಸ್. ಇಸ್ಮಾಯಿಲ್ ಹಾಗೂ ಸೆಕ್ಟರ್ ಕಾರ್ಯದರ್ಶಿ ಇಮ್ರಾನ್ ಸ್ವಲಾತ್ ನಗರ ಸೇರಿದಂತೆ ರಹ್ಮತುಲ್ಲಾಹ್ ಸ್ವಲಾತ್ ನಗರ, ಶಾಹಿಲ್ ಖಾನ್, ಕಬೀರ್ ಅಝ್ಮಲ್ ಕುತ್ತಾರ್, ಶೈಖ್ ಅಹ್ಮದ್ ಕೆ.ಎಮ್, ಶಿಹಾಬುದ್ದೀನ್ ಸಾಬು ಸೇರಿದಂತೆ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.