janadhvani

Kannada Online News Paper

33 ವಸ್ತುಗಳ ಮೇಲಿನ ಜಿಎಸ್‏ಟಿ ದರ ಇಳಿಕೆ

ನವದೆಹಲಿ:  ದೆಹಲಿಯ ವಿಗ್ಯಾನ್ ಭವನದಲ್ಲಿ ಶನಿವಾರ ನಡೆದ ಜಿಎಸ್‏ಟಿ ಕೌನ್ಸಿಲ್ ಸಭೆಯಲ್ಲಿ ಜನಸಾಮಾನ್ಯರಿಗೆ ಹೊರೆಯಾಗಿ ಪರಿಣಮಿಸಿರುವ
ಜಿಎಸ್‏ಟಿ ದರವನ್ನು ಸ್ವಲ್ಪ ಮಟ್ಟಿಗೆ ಇಳಿಸಲಾಗಿದೆ.ಹಣಕಾಸು ಸಚಿವ ಅರುಣ್ ಜೇಟ್ಲಿಯ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಪುದುಚೇರಿ ಮುಖ್ಯಮಂತ್ರಿ ವಿ.ನಾರಾಯಣಸ್ವಾಮಿ ಮಾತನಾಡುತ್ತಾ, ಪ್ರತಿದಿನ ಜನಸಾಮಾನ್ಯರು ಬಳಸುವ 33 ವಸ್ತುಗಳ ಮೇಲಿನ ಜಿಎಸ್‏ಟಿ ದರವನ್ನು ಶೇ. 18 ರಿಂದ ಶೇ. 12ಕ್ಕೆ ಇಳಿಸಲಾಗಿದೆ ಎಂದು ತಿಳಿಸಿದರು.
ಸಭೆಯಲ್ಲಿ ಎಲ್ಲಾ ರಾಜ್ಯಗಳ ಹಣಕಾಸು ಸಚಿವರು ಹಾಜರಿದ್ದರು.

ಐಶಾರಾಮಿ ವಸ್ತುಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಉತ್ಪನ್ನಗಳ ಮೇಲಿನ ಜಿಎಸ್‏ಟಿ ದರವನ್ನು  18% ಅಥವಾ ಅದಕ್ಕಿಂತ ಕಡಿಮೆ ಮಾಡಬೇಕೆಂದು ಕಾಂಗ್ರೆಸ್ ಒತ್ತಾಯಿಸಿದೆ. ಇದಕ್ಕೆ ಸರ್ಕಾರದ ಸಹಮತವೂ ಇದೇ. ಹಾಗಾಗಿ 34 ಉತ್ಪನ್ನಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಉತ್ಪನ್ನಗಳ ಮೇಲಿನ ಜಿಎಸ್‏ಟಿ ದರವನ್ನು 18 ಅಥವಾ ಅದಕ್ಕಿಂತ ಕಡಿಮೆ ದರದಲ್ಲಿ ಇರಿಸಲಾಗಿದೆ ಎಂದು ನಾರಾಯಣಸ್ವಾಮಿ ಹೇಳಿದರು. 

ಈ ತನಕ 39 ವಸ್ತುಗಳ ಮೇಲೆ ಶೇ. 28ರಷ್ಟು ತೆರಿಗೆ ವಿಧಿಸಲಾಗಿತ್ತು,ಈಗ ಅದು 34 ಕ್ಕೆ ಇಳಿದಿದೆ. ಅಂದರೆ ಐದು ಉತ್ಪನ್ನಗಳ ಮೇಲಿನ ಜಿಎಸ್‏ಟಿ ದರವನ್ನು ಶೇ. 28ಕ್ಕಿಂತ ಕಡಿಮೆ ಮಾಡಲಾಗಿದೆ. ಇನ್ನೂ ಹಲವು ವಸ್ತುಗಳ ಮೇಲಿನ ಜಿಎಸ್‌ಟಿ ಯನ್ನು ಶೇ.28 ರಿಂದ ಶೇ.18ಕ್ಕೆ ಇಳಿಸುವ ಸಾಧ್ಯತೆ ಇದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಸಹ 1,200ಕ್ಕೂ ಹೆಚ್ಚಿನ ವಸ್ತುಗಳು ಮತ್ತು ಶೇ.99ರಷ್ಟು ಸೇವೆಗಳ ಮೇಲೆ ಶೇ.18ಕ್ಕಿಂತಲೂ ಕಡಿಮೆ ಜಿಎಸ್‌ಟಿ ಹೇರಲು ಉದ್ದೇಶಿಸಲಾಗಿದೆ ಎಂದು ಹೇಳಿಕೆ ನೀಡಿದ್ದರು.

error: Content is protected !! Not allowed copy content from janadhvani.com