janadhvani

Kannada Online News Paper

ಇದು ರೈತರು,ಹಾಗೂ ಜನಸಾಮಾನ್ಯರಿಗೆ ದೊರಕಿದಂತಹ ಗೆಲುವು:ರಾಹುಲ್ ಗಾಂಧಿ

ನವದೆಹಲಿ: ಮೂರು ರಾಜ್ಯಗಳಲ್ಲಿ ಕಾಂಗ್ರೆಸ್ ನೀಡಿರುವ ಪ್ರದರ್ಶನಕ್ಕೆ ಸಂತಸ ವ್ಯಕ್ತಪಡಿಸಿರುವ ರಾಹುಲ್ ಗಾಂಧಿ ಈ ಗೆಲುವು ಸಣ್ಣ ಉದ್ದಿಮೆದಾರರು,ರೈತರು,ಹಾಗೂ ಜನಸಾಮಾನ್ಯರಿಗೆ ದೊರಕಿದಂತಹ ಗೆಲುವು ಎಂದು ಬಣ್ಣಿಸಿದರು.

ಈ ಗೆಲುವು ಕಠಿಣ ಸಂದರ್ಭದಲ್ಲಿ ನಮ್ಮ ಸಿದ್ದಾಂತದ ಪರವಾಗಿ ಹೋರಾಡಿದ ಕಾಂಗ್ರೆಸ್ ಕಾರ್ಯಕರ್ತರಿಗೆ ದೊರಕಿದಂತಹ ಗೆಲುವು ಅದ್ದರಿಂದ ಅವರಿಗೆ ನಾನು ಧನ್ಯವಾದಗಳನ್ನು ಅರ್ಪಿಸಲು ಬಯಸುತ್ತೇನೆ ಎಂದರು.

ಈಗ ಕಾಂಗ್ರೆಸ್ ಪಕ್ಷದ ಮೇಲೆ ಮಹತ್ತರವಾದ ಜವಾಬ್ದಾರಿ ಇದ್ದು ನಾವು ಜನರನ್ನು ಆಲಿಸಿದ್ದೇವೆ ಅವರಿಗೆ ಒಂದು ದೃಷ್ಟಿಕೋನವನ್ನು ನೀಡಿದ್ದೇವೆ ಎಂದರು.ಯುವಕರಲ್ಲಿ ಪ್ರಧಾನಿ ಮೋದಿ ಉದ್ಯೋಗ ಸೃಷ್ಟಿ ಭರವಸೆಯನ್ನು ಈಡೇರಿಸಲಿಲ್ಲ ಎನ್ನುವ ಭಾವನೆ ಬಂದಿತ್ತು, ಅದೇ ರೀತಿ ರೈತರಲ್ಲಿಯೋ ಸಹ ಆ ಭಾವನೆ ಗಾಡವಾಗಿತ್ತು ಎಂದು ರಾಹುಲ್ ಗಾಂಧಿ ತಿಳಿಸಿದರು.

ಇದೇ ಸಂದರ್ಭದಲ್ಲಿ ಪ್ರತಿಪಕ್ಷಗಳ ಏಕತೆಯನ್ನು ಪ್ರಸ್ತಾಪಿಸಿದ ರಾಹುಲ್ ಬಿಜೆಪಿಯನ್ನು ಸೋಲಿಸಲು ಪ್ರತಿಪಕ್ಷಗಳು ಒಂದಾಗಿ ಕಾರ್ಯನಿರ್ವಹಿಸುತ್ತವೆ ಎಂದರು. ಇನ್ನು ಮುಂದುವರೆದು ಮುಂಬರುವ 2019 ಚುನಾವಣೆಯಲ್ಲಿ  ಬಿಜೆಪಿ ಗೆಲುವು ಸಾಧಿಸುವುದು ಕಷ್ಟಕರ ಎಂದರಲ್ಲದೆ ಯುವಕರಿಗೆ ನೀಡಿದ ಭರವಸೆಗಳನ್ನು ಈಡೇರಿಸುವಲ್ಲಿ ಪ್ರಧಾನಿ ವಿಫಲರಾಗಿದ್ದಾರೆ ಎಂದು ತಿಳಿಸಿದರು. 

error: Content is protected !! Not allowed copy content from janadhvani.com