janadhvani

Kannada Online News Paper

ಹೊಸದಿಲ್ಲಿ: ಹೊಸದಿಲ್ಲಿ: 2019ರ ಲೋಕಸಭಾ ಚುನಾವಣೆಯ ಸೆಮಿಫೈನಲ್‌ ಎಂದೇ ಪರಿಗಣಿತವಾದ ಪಂಚ ರಾಜ್ಯ ಚುನಾವಣೆಯಲ್ಲಿ ಕಾಂಗ್ರೆಸ್‌ ಫೀನಿಕ್ಸ್‌ನಂತೆ ಎದ್ದು ನಿಂತು ಬಿಜೆಪಿಗೆ ಎಚ್ಚರಿಕೆ ನೀಡಿದೆ. ದೇಶದ ಹೃದಯ ಎಂದೇ ಪರಿಗಣಿತವಾದ ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್‌ಗಢದಲ್ಲಿ ಬಿಜೆಪಿ ಸರಕಾರ ಪತನಗೊಂಡು ಕಾಂಗ್ರೆಸ್‌ ವಿಜೃಂಭಿಸಿದೆ. ತೆಲಂಗಾಣದಲ್ಲಿ ಕೆ. ಚಂದ್ರಶೇಖರ ರಾವ್‌ ಅವರ ಟಿಆರ್‌ಎಸ್‌ ಭರ್ಜರಿ ಬಹುಮತದೊಂದಿಗೆ ಮರಳಿ ಚುಕ್ಕಾಣಿ ಹಿಡಿದಿದೆ. ಮಿಜೋರಾಂನಲ್ಲಿ ಎಂಎನ್‌ಎಫ್‌ ಗೆಲುವು ಸಾಧಿಸಿದ್ದು, ಕಾಂಗ್ರೆಸ್‌ ಪಾಲಿಗೆ ಈಶಾನ್ಯದ ಕೊನೆಯ ಬಾಗಿಲು ಮುಚ್ಚಿದಂತಾಗಿದೆ. 

ನರೇಂದ್ರ ಮೋದಿ-ಅಮಿತ್‌ ಶಾ ಸಾರಥ್ಯದಲ್ಲಿ ನಾಲ್ಕು ವರ್ಷಗಳಲ್ಲಿ ವಿಜೃಂಭಿಸಿದ ಜೈತ್ರಯಾತ್ರೆಗೆ ಈ ಫಲಿತಾಂಶ ತಡೆ ಒಡ್ಡಿದೆ. ಜತೆಗೆ ಎನ್‌ಡಿಎಯನ್ನು ಮಣಿಸಲು ರೂಪುಗೊಳ್ಳುತ್ತಿರುವ ಕಾಂಗ್ರೆಸ್‌ ನೇತೃತ್ವದ ಮಹಾಘಟಬಂಧನ್‌ಗೆ ಮಹಾ ಬಲ ತುಂಬಿದೆ. 

error: Content is protected !! Not allowed copy content from janadhvani.com