janadhvani

Kannada Online News Paper

ಸಾಮುದಾಯಿಕ ಸಮ್ಮಿಲನ: ಆದರ್ಶ ವಿವಾಹ ಪೂರ್ವ ಸಿದ್ದತಾ ಸಮಾವೇಶ

ಮಂಗಳೂರು: ಡಿಸೆಂಬರ್ 3 ರಂದು ಮಂಗಳೂರಿನ ನೆಹರೂ ಮೈದಾನದಲ್ಲಿ ನಡೆಯಲಿರುವ ಕನಕ್ಟ್ 2018 ಸಾಮುದಾಯಿಕ ಸಮ್ಮಿಲನದಲ್ಲಿ ನಡೆಯುವ ಹನ್ನೊಂದು ಜೋಡಿಯ ಆದರ್ಶ ವಿವಾಹ ಕಾರ್ಯಕ್ರಮದ ಪೂರ್ವಭಾವಿ ಸಿದ್ದತಾ ಸಮಾವೇಶ ಮಂಗಳೂರಿನ ಪಡೀಲ್ ನಲ್ಲಿರುವ ಎಸ್ ಇ ಡಿ ಸಿ ಸಭಾಂಗಣದಲ್ಲಿ ಚೇರ್ ಮಾನ್ ಹಾಜಿ ಶೇಖ್ ಬಾವ ಯುಎಇ ಯವರ ಅಧ್ಯಕ್ಷತೆಯಲ್ಲಿ ನಡೆಯಿತು. ಸುನ್ನೀ ಕೋಆರ್ಡಿನೇಶನ್ ಸಮಿತಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ ಪಿ ಅಹ್ಮದ್ ಸಖಾಫಿ ಕಾಶಿಪಟ್ನ ಉದ್ಘಾಟಿಸಿದರು
ಕೆಸಿಎಫ್ ಅಂತಾರಾಷ್ಟ್ರೀಯ ಅಧ್ಯಕ್ಷ ಎಸ್ ಪಿ ಹಂಝ ಸಖಾಫಿ ಬಂಟ್ವಾಳ ಮುಖ್ಯ ಮಾಹಿತಿ ನೀಡಿದರು. ಎಸ್ ವೈ ಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂಎಸ್ಎಂ ಝೈನಿ ಕಾಮಿಲ್
ವಧುವರರಿಗೆ ವಸ್ತ್ರ ಹಾಗೂ ಕಿಟ್ ವಿತರಿಸಿ ಮಾತನಾಡಿದರು.ಎಸ್ಸೆಸ್ಸೆಫ್ ಇಹ್ಸಾನ್ ಸಮಿತಿಯ ಚೇರ್ ಮಾನ್ಎನ್ ಕೆ ಎಂ ಶಾಫಿ ಸಅದಿ ಬೆಂಗಳೂರು, ಎಸ್ಸೆಸ್ಸೆಫ್ ರಾಷ್ಟ್ರೀಯ ಪ್ರ ಕಾರ್ಯದರ್ಶಿ ಕೆ ಎಂ ಅಬೂಬಕ್ಕರ್ ಸಿದ್ದೀಕ್ ಮೋಂಟುಗೋಳಿ,ಮಾತನಾಡಿದರು. ಎಸ್ ಇ ಡಿ ಸಿ ರಾಜ್ಯಾಧ್ಯಕ್ಷ ಕೆಕೆಎಂ ಕಾಮಿಲ್ ಸಖಾಫಿ, ಸಾಮುದಾಯಿಕ ಸಮ್ಮಿಲನದ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಝಾಕ್ ಅಲ್ ಐನ್,
ಎಸ್ ವೈ ಎಸ್ ಕಾರ್ಯದರ್ಶಿ ಸಿದ್ದೀಕ್ ಸಖಾಫಿ ಮೂಳೂರು, ಸಅದೀಸ್ ಕರ್ನಾಟಕ ರಾಜ್ಯಾಧ್ಯಕ್ಷ ಅಶ್ರಫ್ ಸಅದಿ ಮಲ್ಲೂರು, ಡಿ ಕೆ ಉಮರ್ ಸಖಾಫಿ ಕಂಬಳಬೆಟ್ಟು,ಎಸ್ಸೆಸ್ಸೆಫ್ ದ.ಕ ಜಿಲ್ಲಾಧ್ಯಕ್ಷ ಸಿರಾಜುದ್ದೀನ್ ಸಖಾಫಿ ಕನ್ಯಾನ, ಮಹಬೂಬ್ ಸಖಾಫಿ ಕಿನ್ಯ, ಕೆಸಿಎಫ್ ನ ಅಬೂಬಕ್ಕರ್ ಮದನಿ ಅಜ್ಮಾನ್, ಸಲೀಂ ಕನ್ಯಾಡಿ ಸೌದಿ, ಸಮೀರ್ ದುಬೈ, ಅಬ್ದುಲ್ ರಹಿಮಾನ್ ಪ್ರಿಂಟೆಕ್ ಕೃಷ್ಣಾಪುರ, ಮುಸ್ತಫ ನಯೀಮಿ ಹಾವೇರಿ,ಕಾಸಿಂ ಪದ್ಮುಂಜ, ಅಲ್ತಾಫ್ ಕುಂಪಲ, ಮತ್ತಿತರರು ಉಪಸ್ಥಿತರಿದ್ದರು. ಕನಕ್ಟ್ 18 ಇದರ ಈ ಟೀಂ ಕನ್ವೀನರ್ ಹಾಫಿಳ್ ಯಾಕೂಬ್ ಸಅದಿ ನಾವೂರು ಸ್ವಾಗತಿಸಿದರು. ಎಸ್ ವೈ ಎಸ್ ದ.ಕ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಶ್ರಫ್ ಕಿನಾರ ವಂದಿಸಿದರು.

error: Content is protected !! Not allowed copy content from janadhvani.com