ದುಬೈ: ದಕ್ಷಿಣ ಕನ್ನಡ ಜಿಲ್ಲಾ ಸಂಯುಕ್ತ ಖಾಝಿ ಅಸ್ಸಯ್ಯಿದ್ ಫಝಲ್ ಕೋಯಮ್ಮ ತಂಙಳ್ ಹಾಗೂ ಪ್ರಭಾಷಣ ಲೋಕದ ಮಿನುಗುವ ನಕ್ಷತ್ರ ನೌಫಲ್ ಸಖಾಫಿ ಕಳಸರವರನ್ನು ದುಬೈ ಅಂತರ್ರಾಷ್ಟ್ರೀಯ ವಿಮಾನ ನಿಲ್ದಾನದಲ್ಲಿ ಕೆಸಿಎಫ್ ದುಬೈ ನಾರ್ತ್ ಝೋನ್ ಕಾರ್ಯಕರ್ತರು ಸ್ವಾಗತಿಸಿ ಬರಮಾಡಿಕೊಂಡರು.
ದುಬೈ ಅಲ್ ಖಿಸೈಸ್ ಸ್ಟೇಡಿಯಂ ಮೆಟ್ರೋ ಸ್ಟೇಷನ್ ಸಮೀಪದ ಕ್ರೆಸೆಂಟ್ ಸ್ಕೂಲ್ ಸಭಾಂಗಣದಲ್ಲಿ ದಿನಾಂಕ 16/11/18 ಶುಕ್ರವಾರ ಸಂಜೆ 6 ಗಂಟೆಗೆ ಕರ್ನಾಟಕ ಕಲ್ಚರಲ್ ಫೌಂಡೇಶನ್ ಕೆಸಿಎಫ್ ದುಬೈ ನಾರ್ತ್ ಝೋನ್ ಆಯೋಜಿಸುವ ಬ್ರಹತ್ ಮೀಲಾದ್ ಸಮಾವೇಶದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದಾರೆ.
ಈ ಸಂದರ್ಭದಲ್ಲಿ ಕೆಸಿಎಫ್ ನಾರ್ತ್ ಝೋನ್ ಕಾರ್ಯದರ್ಶಿ ಹಂಝ ಎಮ್ಮೆಮಾಡು, ಮೀಲಾದ್ ಸ್ವಾಗತ ಸಮಿತಿ ಚೇರ್ಮಾನ್ ಅಬೂಬಕ್ಕರ್ ಹಾಜಿ ಕೊಟ್ಟಮುಡಿ,ಕನ್ವೀನರ್ ಖಲಂದರ್ ಕಬಕ,ಅಬ್ದುಲ್ ಖಾದರ್ ಸಾಲೆತ್ತೂರ್,ಸಮದ್ ಬೀರಾಳಿ ಉಚ್ಚಿಲ ಮಜೀದ್ ಹಾಜಿ ಅಮೀರ್ ಹಸನ್ ಹಾಗೂ ಇನ್ನಿತರ ಹಲವಾರು ಕಾರ್ಯಕರ್ತರು ಉಪಸ್ಥಿತರಿದ್ದರು.