KCF ಸದಸ್ಯರ ಸೇರ್ಪಡೆಯಲ್ಲಿ ಮತ್ತೋಮ್ಮೆ ಮಿಂಚಿದ ಅಜ್ಮಾನ್ ಝೋನ್

KCF ಯು ಎ.ಇ :- ಅಂತರಾಷ್ಟ್ರೀಯ ವಾರ್ಷಿಕ ಮಹಾಸಭೆ ಹಾಗೂ ಮೀಲಾದ್ ಕ್ಯಾಂಪೈನ್ ಉದ್ಘಾಟನಾ ಸಮಾರಂಭ 11.10.2018 ಶುಕ್ರವಾರ ಜುಮುಹ ನಮಾಝ್ನ ನಂತರ ICF ಆಡಿಟೋರಿಯಂ ಅಬೂಹೈಲ್ ದುಬೈಯಲ್ಲಿ ಬಹಳ ವಿಜ್ರಂಬನೆಯಿಂದ ನಡೆಯಿತು.
UAE ಕೆ.ಸಿ.ಎಪ್ ನ ಎಲ್ಲಾ ಝೋನ್ ಗಳ 2016-17 ನೇ ಸಾಲಿನ ಸದಸ್ಯರ ಸೇರ್ಪಡೆ ವರದಿಗಳನ್ನು ಪ್ರಕಟಿಸಲಾಯಿತು. ಇದರಲ್ಲಿ ಅತೀ ಹೆಚ್ಚು ಹೋಸ ಕರ್ನಾಟಕದ ಸದಸ್ಯರನ್ನು ಕೆ.ಸಿ.ಎಪ್ ಸಂಘಟನೆಗೆ ಪರಿಚಯಿಸಿದ ಪುರಸ್ಕಾರವನ್ನು ಮತ್ತೊಮ್ಮೆ “ಅಜ್ಮಾನ್ ಝೋನ್” ತಮ್ಮ ಮುಡಿಗೇರಿಕೋಂಡಿದೆ.


ಶರಪುಲ್ ಉಲಮಾ ಅಬ್ಬಾಸ್ ಉಸ್ತಾದರ ದಿವ್ಯ ಹಸ್ತದಿಂದ ಪುರಸ್ಕಾರವನ್ನು ಅಜ್ಮಾನ್ ಝೋನ್ ನ ನೇತಾರರು ಸ್ವೀಕರಿಸಿದರು.ಈ ಸಮಾರಂಭದಲ್ಲಿ ಮೀಲಾದ್ ಕ್ಯಾಂಪೈನ್ ಉದ್ಘಾಟನೆಯು ನಡೆಯಿತು.
ಸಮಾರಂಭದಲ್ಲಿ ತಾಹಿರ್ ತಂಗಳ್ (ಗೌರವ ಅದ್ಯಕ್ಷರು KCF ಅಜ್ಮಾನ್ ಝೋನ್) ಹಮೀದ್ ಸಹದಿ ಉಸ್ತಾದ್ (KCF ನ್ಯಾಷನಲ್ ಅದ್ಯಕ್ಷರು)ಯಸ್.ಪಿ.ಹಂಝ ಸಖಾಪಿ ಉಸ್ತಾದ್ (INC ಅದ್ಯಕ್ಷರು) ಹಮೀದ್ ಈಶ್ವರ ಮಂಗಳ (INC ಕಾರ್ಯದರ್ಶಿ) ಶೇಖ್ ಬಾವ ಮಂಗಳೂರು (INC ಕೋಶಾಧಿಕಾರಿ) ಹಾಗೂ ದೇವರ್ಸೋಲ ಉಸ್ತಾದ್ ಮತ್ತು ICF ಹಾಗೂ KCF ನ ಎಲ್ಲಾ ನಾಯಕರು ಹಾಜರಿದ್ದರು.

ವರದಿ
ಮನ್ಸೂರ್ ಬೆಳ್ಳಾರೆ
ಸಂಘಟನಾ ಕಾರ್ಯದರ್ಶಿ, KCF ಸನಯ್ಯಾ ಸೆಕ್ಟರ್, ಅಜ್ಮಾನ್ ಝೋನ್

Leave a Reply

Your email address will not be published. Required fields are marked *

error: Content is protected !!