ಭಟ್ಕಳ: ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ ಸಮಿತಿ ವತಿಯಿಂದ ಭವಿಷ್ಯದ ನಾಯಕರನ್ನು ಸೃಷ್ಟಿಸಲು ಸಕ್ರೀಯ ಕಾರ್ಯಕರ್ತರಿಗಾಗಿ ಟೀಮ್ ಹಸನೈನ್ ಸಕ್ರೀಯ ಕಾರ್ಯಕರ್ತರ ಸಂಗಮವು ಎಸ್ಸೆಸ್ಸೆಫ್ ಉತ್ತರ ಕನ್ನ್ಡಡ ಜಿಲ್ಲಾಧ್ಯಕ್ಷ ಅಸಯ್ಯದ್ ಅಲವಿ ತಂಙಳ್ ಕರ್ಕಿ ಹೊನ್ನಾವರ ರವರ ಅಧ್ಯಕ್ಷತೆಯಲ್ಲಿ ಸೆಪ್ಟಂಬರ್ 30 ಆದಿತ್ಯವಾರ ಬೆಳಿಗ್ಗೆ 10:00 ಗಂಟೆಗೆ ತಾಜುಸ್ಸುನ್ನ ರೈಲ್ವೆ ಸ್ಟೇಶನ್ ರೋಡ್ ಭಟ್ಕಳದಲ್ಲಿ ನಡೆಯಲಿರವುದು.
ಎಸ್.ವೈ.ಎಸ್.ಉತ್ತರ ಕನ್ನಡ ಜಿಲ್ಲೆ ಪ್ರಧಾನ ಕಾರ್ಯದರ್ಶಿ ಡಾ! ಯಹ್ಯಾ ಅಸ್ಕೇರಿ ಭಟ್ಕಳ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.
ಎಸ್ಸೆಸ್ಸೆಫ್ ರಾಜ್ಯ ಕಾರ್ಯದರ್ಶಿ ಮೌಲಾನಾ ಸುಫ್ಯಾನ್ ಸಖಾಫಿ ಕಾವಲ್ಕಟ್ಟೆ ಹಾಗೂ ರಾಜ್ಯ ಕೋಶಾಧಿಕಾರಿ ಶರೀಫ್ ಮಾಸ್ಟರ್ ಬೆಂಗಳೂರು ತರಗತಿಯನ್ನು ನಡೆಸಲಿರುವರು.
ಎಸ್ಸೆಸ್ಸೆಫ್ ಉತ್ತರ ಕನ್ನಡ ಜಿಲ್ಲೆ ಕಾರ್ಯಾಧ್ಯಕ್ಷ ಎ.ಕೆ.ರಝಾ ಅಂಜದಿ ಹೊನ್ನಾವರ ಸ್ವಾಗತಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಫ್ ರಾಜ್ಯ ಸದಸ್ಯರಾದ ಅಶ್ರಫ್ ರಝಾ ಅಂಜದಿ ಪಕ್ಷಿಕೆರೆ,ಇಸ್ಮಾಯಿಲ್ ಮಾಸ್ಟರ್ ಮೊಂಟೆಪದವು,ನವಾಝ್ ಭಟ್ಕಳ್ ಮೊದಲಾದವರು ಭಾಗವಹಿಸಲಿದ್ದಾರೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.