janadhvani

Kannada Online News Paper

ಕೆ.ಸಿ.ಎಫ್ ಅಲ್ ಅಹ್ಸಾ ಸೆಕ್ಟರ್ ಅಬ್ದುರ್ರಹ್ಮಾನ್ ಕೈರಂಗಳ ಅನುಸ್ಮರಣಾ ಸಂಗಮ

ಸೌದಿ ಅರೇಬಿಯಾ, ಕೆ.ಸಿ.ಎಫ್ ದಮ್ಮಾಂ ಝೋನಿಗೊಳಪಟ್ಟ ಅಲ್ ಅಹ್ಸಾ ಸೆಕ್ಟರ್ ವತಿಯಿಂದ 21/09/18 ರಂದು ಜುಮಾ ನಮಾಝ್ ಬಳಿಕ ಸೆಕ್ಟರ್ ಅದ್ಯಕ್ಷ ಹಬೀಬ್ ಉಸ್ತಾದರ ಸಭಾದ್ಯಕ್ಷತೆಯಲ್ಲಿ ಮಾಸಿಕ ಸ್ವಲಾತ್ ಮಜ್ಲೀಸ್ ಮತ್ತು ಅನಿವಾಸಿ ಸುನ್ನೀ ಕನ್ನಡಿಗರಲ್ಲಿ ಸುನ್ನೀ ಸಂಘ ಶಕ್ತಿಯ ಉದಯಕ್ಕಾಗಿ ಆಹೋರಾತ್ರಿ ಪ್ರಯತ್ನಿಸಿ ಯಶ ಕಂಡು ಕೆ.ಸಿ.ಎಫ್ ಅಲ್ ಅಹ್ಸಾ ಸೆಕ್ಟರಿನ ಮುಂಚೂಣಿ ನಾಯಕರಾಗಿದ್ದ ಮರ್ಹೂಂ ಅಬ್ದುರ್ರಹ್ಮಾನ್ ಕೈರಂಗಳರವರ ಪ್ರಥಮ ವರ್ಷದ ಅನುಸ್ಮರಣಾ ಸಂಗಮ ಸಅದಿಯ ಹಾಲ್ ಹಫೂಫಿನಲ್ಲಿ ನಡೆಯಿತು..
ಸ್ವಲಾತ್ ಮಜ್ಲಿಸ್ ಗೆ ಝಕರಿಯ ಸಅದಿ ನೈತೃತ್ವ ನೀಡಿದರು..


ನಂತರ ನಡೆದ ಅಬ್ದುರ್ರಹ್ಮಾನ್ ಕೈರಂಗರವರ ಅನುಸ್ಮರಣಾ ಸಂಗಮದಲ್ಲಿ ಮಾತನಾಡಿದ ಅಸ್ಸುಫ್ಫ ಟ್ಯೂಟರ್ ಇಬ್ರಾಹಿಂ ಸಅದಿ ಕಾಲವು ನಮಗರಿವಿಲ್ಲದಂತೆ ಅತೀ ವೇಗದಲ್ಲಿ ಚಲಿಸುತ್ತಿದೆ,, ಅದರ ಜೊತೆ ಜೊತೆಯಲ್ಲಿ ನಮ್ಮ ಆಯುಷ್ಯ ಕೂಡ ಹೆಜ್ಜೆ ಹಾಕುತ್ತಿದೆ.. ದುನ್ಯಾದಲ್ಲಿ ಜೀವಿಸುವಾಗ ನಿಷ್ಕಲ್ಮಷವಾಗಿ ಜೀವಿಸಿ ಇತರರಿಗೆ ಮಾದರಿಯಾಗಬೇಕು ,, ಸೌದಿ ಮರುಭೂಮಿಯಲ್ಲಿ ದುಡಿಯುತ್ತಿರುವ ಅನಿವಾಸಿ ಕನ್ನಡಿಗರಲ್ಲಿ ಸುನ್ನೀ ಸಂಘ ಶಕ್ತಿಯನ್ನು ಕಟ್ಟಿ ಬೆಳೆಸಿ, ಕಾರ್ಯಕರ್ತರಲ್ಲಿ ಸ್ಪೂರ್ತಿಯ ಚಿಲುಮೆಯನ್ನು ಚಿಮ್ಮಿಸಿ ನಮ್ಮನ್ನಗಲಿದ ಅಬ್ದುರ್ರಹ್ಮಾನ್ ಕೈರಂಗಳ ನಮಗೆಲ್ಲರಿಗೂ ಮಾದರಿ, ನಮ್ಮ ಜೀವನ ಮತ್ತು ಮರಣ ಸಜ್ಜನರ ಸತ್ಪಥದಲ್ಲಾಗಿರಲಿ ಅದು ಇಹ ಪರ ವಿಜಯಕ್ಕೆ ರಹದಾರಿ ಎಂದು ಅನುಸ್ಮರಣಾ ಸಂದೇಶ ಭಾಷಣ ಮಾಡಿದರು…..
ಈ ಸಂದರ್ಭದಲ್ಲಿ ಕೆ.ಸಿ.ಎಫ್ ಕಾರ್ಯಕರ್ತರು ಮತ್ತು ಕುಟುಂಬಿಕರು, ಮರ್ಹೂಂ ಅಬ್ದುರ್ರಹ್ಮಾನ್ ಕೈರಂಗಳರವರ ಹೆಸರಿನಲ್ಲಿ ಓದಿದ ಇಖ್ಲಾಸ್ ಸೂರತ್ ಮತ್ತು ತಹ್ಲೀಲ್ ಸಮರ್ಪಣೆ ಮಾಡಲಾಯಿತು, ಸಾಮೂಹಿಕ ದುವಾ ಕಾರ್ಯಕ್ರಮಕ್ಕೆ ಝಕರಿಯ ಸಅದಿ ಕೊಡಗು ನೇತೃತ್ವ ನೀಡಿದರು, ಸೆಕ್ಟರ್ ಕಾರ್ಯದರ್ಶಿ ಕೆ.ಎಂ ಇರ್ಶಾದ್ ಪಕ್ಷಿಕೆರೆ ಸ್ವಾಗತಿಸಿ, ಧನ್ಯವಾದಗೈದರು….‌

error: Content is protected !! Not allowed copy content from janadhvani.com