janadhvani

Kannada Online News Paper

ಪಡ್ಡಂದಡ್ಕ ಜಮಾಅತರ ಈ ನಡೆ ಎಲ್ಲಾ ಜಮಾಅತರಿಗೂ ಮಾದರಿ ಆಗಲಿ

ಪಡ್ಡಂದಡ್ಕ ಜುಮ್ಮಾ ಮಸೀದಿ ಜಮಾತಿನ ಸುಮಾರು ೮ ವರ್ಷಗಳಿಂದ ನಡೆಯುತ್ತಿದ್ದ ಕಚ್ಚಾಟ ಹಾಗು ಕೊರ್ಟ್~ ಕಚೇರಿ ಎಂದು ಅಳೆಯುತಿದ್ದ ಸಮಸ್ಯೆ ಗಳಿಗೆ ಯಶಸ್ವಿ ಸಂಧಾನ ಮೂಲಕ ಪರಿಹಾರ.

ಸುಮಾರು ೮ ವರ್ಷಗಳಿಂದ ಪಡ್ಡಂದಡ್ಕ ಜಮಾತಿನ ಎರಡು ತಂಡಗಳ ನಡುವೆ ವಿವಾದವಿದ್ದು , ಈ ಬಗ್ಗೆ ಇಂದು ಮಸೀದಿ ವಠಾರದಲ್ಲಿ‌ ಜಮಾತಿನ ಹಿರಿಯರು ಸೇರಿದಂತೆ ಇತ್ತಂಡಗಳ‌ ಸಭೆ‌ ಮಸೀದಿಯ ಮಾಜಿ ಅದ್ಯಕ್ಷ ರಾದ ಪಿ ಎ ಇಬ್ರಾಹಿಂ ಅದ್ಯಕ್ಷ ತೆಯಲ್ಲಿ ಸಭೆ ಸೇರಿ ರಾಜಿ ಸಂಧಾನದ ಮೂಲಕ ಸಮಸ್ಯೆಯನ್ನು ಪರಿಹರಿಸಲಾಯಿತು.ಈ ವಿಶಯದ ಬಗ್ಗೆ ಇತ್ತಂಡಗಳು ಹೈ ಕೋರ್ಟ್ ನ ವರೆಗೂ ಮೊರೆಹೊಗಿದ್ದು ಜಮಾತಿನವರೇ ಸೇರಿ ಪರಿಹಾರ ಕಂಡದ್ದು ಪಡ್ಡಂದಡ್ಕ ದ ಇತಿಹಾಸ ದಲ್ಲಿಯೆ ಪ್ರಥಮ‌ಎಂದು ಹೇಳಾಗುತ್ತದೆ.

ಈ ಮಹತ್ತರವಾದ ರಾಜಿ ಸಂಧಾನದಲ್ಲಿ ಮಸೀದಿಯ ಮಾಜಿ ಅದ್ಯಕ್ಷ ರುಗಳಾದ ಜನಾಬ್ ಬಿ ಮಹಮ್ಮದ್, ಖಾಲಿದ್ ಪೂಲಬೆ, ಅಹ್ಮದ್ ಹುಸೈನ್, ಎನ್ ಜಿ ಹಮೀದ್, ಉಪಸ್ಥಿತರಿದ್ದರು

ಆಡಳಿತ ಮಂಡಳಿಯ ಪರವಾಗಿ ಅದ್ಯಕ್ಷ ರಾದ ಜನಾಬ್ ಮೊಹಮ್ಮದ್ ಹಾಜಿ, ಮೊಹಮ್ಮದ್ ಶಾಪಿ, ಬಶೀರ್ ಗಾಂಧಿ ನಗರ , ಯೆಸ್. ಕೆ .ರಜ಼ಾಕ್ , ಪಿ ಎಚ್ ಹಮೀದ್, ಕರೀಮ್ ಕಟ್ಟೆ , ಕರೀಮ್, ನಜ಼ೀರ್ ಪೆರಿಂಜೆ, ಅಲ್ಲಿಜಾನ್, ಮಯ್ಯೆದ್ದಿ ಕಿರೊಡಿ, ನಾಸಿರ್, ಶಬ್ಬೀರ್ ಮತ್ತು ಮಹಮ್ಮದ್.

ಇನ್ನೊಂದು ತಂಡದ ಪರವಾಗಿ, ಶಬೀರ್, ಹೈದರ್ ಕಿರೊಡಿ , ಮಹಮ್ಮದ್ ಕುರ್ಲೊಟ್ಟು, ಅಜ಼ೀಜ಼್, ಸರಪು ತಂಗಲ್, ನಜ಼ೀರ್ ಕಿರೊಡಿ, ಮಹಮೂದ್ ಪಿ ಎಸ್, ಆರಿಫ಼್,ಜಮಾಲ್ ಕಟ್ಟೆ , ಸುರಾಕತ್ ಉಪಸ್ಥಿತರಿದ್ದರು.

ಜಮಾತಿನ ಪರವಾಗಿ, ಮಹಮ್ಮದ್ ಎಚ್, ಅಬ್ದುಲ್ ರಹಿಮಾನ್ ಪೆರಿಂಜೆ, ಪುತ್ತುಮೊನು ಗಾಂಧಿನಗರ, ಇಸ್ಮಾಯಿಲ್ ಕೆ ಪೆರಿಂಜೆ, ಸಮದ್, ಮುಸ್ತಫಾ ಬೀಂದುಗುಡ್ಡೆ , ಕೆ ಅಬ್ದುಲ್ ರಹಿಮಾನ್ ಕಟ್ಟೆ
ಅಬೂಬಕ್ಕರ್ ಕಟ್ಟೆ,ಕರೀಮ್ ಕಟ್ಟೆ, ಮಹಮ್ಮದ್ ಹಾಜಿ ಕಟ್ಟೆ, ಎಸ್ ಕೆ ಆದಮ್, ಯಕೂಬ್ ಪೆರಿಂಜೆ, ಅಬ್ದುಲ್ಲಾ ಕುರ್ಲೊಟ್ಟು ಸೇರಿದಂತೆ ಹಲವರ ಉಪಸ್ತಿತಿ.

ಈ ಸಂಧಾನ ಕ್ಕಾಗಿ ಶ್ರಮಿಸಿದ ಪ್ರಮುಖರಲ್ಲಿ ಇಸ್ಮಾಯಿಲ್ ಕೆ ,ಪೆರಿಂಜೆ , ಮಸೀದಿ ಅದ್ಯಕ್ಷ ಮೊಹಮ್ಮದ್ ಹಾಜಿ, ಖಾಲಿದ್ ಪೂಲಬೆ, ಪಂಚಾಯತ್ ಸದಸ್ಯ ಮೊಹಮ್ಮದ್ ಶಾಫ಼ಿ ಶಬ್ಬೀರ್ ಪಡ್ಡಂದಡ್ಕ ಮತ್ತು ಕಿರೊಡಿ ಹೈದರ್.

ಇಸ್ಮಾಯಿಲ್ ಕೆ ಪೆರಿಂಜೆ ಪ್ರಸ್ತಾವಿಕವಾಗಿ ಮಾತಾಡಿ ಸ್ವಾಗತ‌ ಮಾಡಿದರು. ಮೊಹಮ್ಮದ್ ಎಚ್ ಕಾರ್ಯಕ್ರಮ ನಿರ್ವಹಣೆ ಮಾ ಡಿದರು.,.

error: Content is protected !! Not allowed copy content from janadhvani.com