janadhvani

Kannada Online News Paper

ಖತಾರ್: ಎಕ್ಸಿಟ್ ಪರ್ಮಿಟ್ ಅನ್ನು ರದ್ದುಗೊಳಿಸುವ ಬಗ್ಗೆ ಜಾಗೃತಿ ಅಭಿಯಾನ

ದೋಹಾ:- ಕತಾರ್ ಚೇಂಬರ್ ಆಫ್ ಕಾಮರ್ಸ್‌ನ ಸಹಕಾರದೊಂದಿಗೆ ಕಾರ್ಮಿಕ ಕಾನೂನಿನ ಮೇಲೆ ಜಾರಿಗೆ ತಂದ ತಿದ್ದುಪಡಿಗಳ ಬಗ್ಗೆ ಕಂಪನಿಗಳಿಗೆ ಜಾಗೃತಿ ಮೂಡಿಸಲಿದೆ.

ಈ ಉದ್ದೇಶಕ್ಕಾಗಿ, ಗೃಹ ಸಚಿವಾಲಯ, ಕಾರ್ಮಿಕ ಮತ್ತು ಸಮಾಜ ಕಲ್ಯಾಣ ಇಲಾಖೆಯ ಪ್ರತಿನಿಧಿಗಳನ್ನು ಒಳಗೊಂಡ ಜಂಟಿ ಸಮಿತಿ ರಚಿಸಲಾಗಿದೆ.
ಈ ಸಮಿತಿಗಳು ಎಕ್ಸಿಟ್ ಪರ್ಮಿಟ್ ಅನ್ನು ರದ್ದುಗೊಳಿಸುವ ಬಗ್ಗೆ ಜಾಗೃತಿ ಮೂಡಿಸಲಿದೆ.

ಹೊಸ ಕಾನೂನಿನ ಮೂಲಕ ಕೆಲಸಗಾರರಿಗೆ ಎಲ್ಲಾ ಹಕ್ಕುಗಳನ್ನು ಖಾತರಿ ಪಡಿಸಿದ  ದೇಶವಾಗಿ ಖತಾರ್ ಪರಿಣಮಿಸಿದೆ ಎಂದು ಅಭಿವೃದ್ಧಿ, ಕಾರ್ಮಿಕ ಮತ್ತು ಸಾಮಾಜಿಕ ವ್ಯವಹಾರಗಳ ಸಚಿವ ಡಾ. ಈಸಾ ಬಿನ್ ಸಾದ್ ಅಲ್ ಜಫಾಲಿ ಅಲ್ ನುಐಮಿ ಹೇಳಿದರು.ಇದು ದೇಶಕ್ಕೆ ವೇಗವರ್ಧಕವಾಗಿ ಕಾರ್ಯನಿರ್ವಹಿಸಲಿದೆ. ಕೆಲಸಗಾರರನ್ನು ಕಳುಹಿಸುವ ರಾಷ್ಟ್ರಗಳು, ಕಾರ್ಮಿಕರನ್ನು ಪ್ರೋತ್ಸಾಹಿಸುವ ಮತ್ತು ರಕ್ಷಿಸುವ ದೇಶವೆಂದು ಖತ್ತರನ್ನು ಪರಿಗಣಿಸಲಿದೆ.ಇದು ಉದ್ಯೋಗದ ಗುಣ ಮಟ್ಟಕ್ಕೆ ಪರಿಣಾಮ ಬೀರಲಿದೆ ಮತ್ತು ಉತ್ಪಾದಕರಿಗೆ ಲಾಭದಾಯಕವಾಗುವಂತೆ ಮಾಡಲಿದೆ.

ನೌಕರರು ಮತ್ತು ಉದ್ಯೋಗಿಗಳಿಗೆ ಲಾಭದಾಯಕವಾಗುವ ಕಾರ್ಯವನ್ನು ಕಾರ್ಯಗತಗೊಳಿಸಲು ಸಚಿವಾಲಯ ಪ್ರಯತ್ನಿಸುತ್ತಿದೆ. ಉದ್ಯೋಗದಾತನಿಗೆ ಉದ್ಯೋಗಿಗಳ ವಿರುದ್ಧ ಮತ್ತು ಉದ್ಯೋಗಿಗೆ ಉದ್ಯೊಗದಾತನ ವಿರುದ್ದ ದೂರು ನೀಡಲು ಸಾಧ್ಯವಾಗಬಹುದು.
ಕತಾರ್ ಚೇಂಬರ್ಸ್‌ನ ಸಹಕಾರದೊಂದಿಗೆ ಕಾನೂನಿನ ಅನುಷ್ಠಾನವನ್ನು ಜಾರಿಗೊಳಿಸಲಾಗುವ ಬಗ್ಗೆ ಜಾಗೃತಿ ಮೂಡಿಸಲಾಗುವುದು ಎಂದು ಸಚಿವರು ಹೇಳಿದರು.

ಕಾರ್ಮಿಕರಿಗೆ ಗ್ರೀವನ್ಸ್ ಸಮಿತಿಯನ್ನು ಸಂಪರ್ಕಿಸಬಹುದು

ತಾತ್ಕಾಲಿಕವಾಗಿ ಅಥವಾ ಶಾಶ್ವತವಾಗಿ ದೇಶವನ್ನು ತೊರೆಯಲು ಮಾಲೀಕನಿಂದ ಇನ್ನು ಮುಂದೆ ನಿರ್ಗಮನ ಪರವಾನಿಗೆ ಅಗತ್ಯವಿಲ್ಲ ಎನ್ನುವ ಮಹತ್ತರವಾದ  ಕಾನೂನು ತಿದ್ದುಪಡಿಗೆ  ಅಮೀರ್ ಶೈಖ್ ತಮೀಮ್ ಬಿನ್ ಹಮದ್ ಅಲ್ ಥಾನಿ ಇತ್ತೀಚೆಗೆ ಅನುಮೋದಿಸಿದರು, ಗೆಜೆಟ್ ಅನುಮೋದಿಸಿದರೆ ಕಾನೂನು ಜಾರಿಗೆ ಬರಲಿದೆ.

ದೇಶ ತೊರೆಯುವ ಮೊದಲು ಅನುಮತಿ ನೀಡಬೇಕಾದ ಕಾರ್ಮಿಕರ ಹೆಸರುಗಳನ್ನು ಉದ್ಯೋಗದಾತ ಸಚಿವಾಲಯಕ್ಕೆ ಸಲ್ಲಿಸಬಹುದು. ಆದಾಗ್ಯೂ, ಇಂತಹ ಕಾರ್ಮಿಕರ ಸಂಖ್ಯೆ ಒಟ್ಟು ಕಾರ್ಮಿಕರ ಶೇ. 5 ರಷ್ಟನ್ನು ಮೀರಬಾರದು.ಉದ್ಯೋಗದಾತ ಯಾವುದೇ ಕಾರಣಕ್ಕಾಗಿ ದೇಶವನ್ನು ಬಿಡಲು ಅನುಮತಿಸದಿದ್ದರೆ, ಕೆಲಸಗಾರನು ಗ್ರೀವನ್ಸ್ ಸಮಿತಿಯನ್ನು ಸಂಪರ್ಕಿಸಬಹುದು.

ಸಮಿತಿಯು ಮೂರು ದಿನಗಳೊಳಗೆ ಕಾರ್ಮಿಕರ ದೂರನ್ನು ನಿರ್ಧರಿಸುತ್ತದೆ. ಗೃಹ ಸಚಿವಾಲಯದೊಂದಿಗೆ ಸಮಾಲೋಚನೆ ಮೂಲಕ ಈ ಕಾರ್ಯವಿಧಾನಗಳು ಮಾಡಲಾಗುವುದು.ಇದಕ್ಕೆ ಸಂಬಂಧಿಸಿದಂತೆ ಎನ್ಒಸಿ ಅಗತ್ಯವಿರುವ ನೌಕರರರ ಪಟ್ಟಿಯನ್ನು ಕೆಲಸದಾತ ಸಚಿವಾಲಯಕ್ಕೆ ಸಲ್ಲಿಸಬಹುದು ಎಂದು ಸಚಿವರು ಹೇಳಿದ್ದಾರೆ.

ಪಾಸ್ಪೋರ್ಟ್ಸ್ ಜನರಲ್ ಡೈರೆಕ್ಟರ್ ಬ್ರಿಗೇಡಿಯರ್ ಮುಹಮ್ಮದ್ ಅಹ್ಮದ್ ಅಲ್-ಅತೀಖ್ ಅವರು, ಕಾನೂನನ್ನು ಪರಿಣಾಮಕಾರಿಯಾಗಿ ಕಾರ್ಯಗತಗೊಳಿಸಲು ಹೆಚ್ಚಿನ ಅರಿವು ಅಗತ್ಯ ಎಂದು ಹೇಳಿದರು. ಕಾರ್ಯವಿಧಾನವನ್ನು ಸರಳಗೊಳಿಸುವ ಸಲುವಾಗಿ ಸಚಿವಾಲಯದ ಜಂಟಿ ಸಮಿತಿ ರಚಿಸಲಾಗಿದೆ.ಮುಂಚಿತ ಅನುಮತಿಯನ್ನು ಪಡೆಯುವ ಕಾರ್ಮಿಕರ ವಿವರಗಳನ್ನು ಗೃಹ ಸಚಿವಾಲಯದ ವ್ಯವಸ್ಥೆಯಲ್ಲಿ ದಾಖಲಿಸಬೇಕು ಎಂದವರು ಹೇಳಿದರು.
 

error: Content is protected !! Not allowed copy content from janadhvani.com