ಜಿದ್ದಾ: ಜಿದ್ದಾದ ಸುನ್ನೀ ಉಮರಾ ನಾಯಕರು, ಹಲವಾರು ಸುನ್ನೀ ಸಂಘಟನೆಗಳ ನೇತಾರರು, ಉದಾರ ದಾನಿಗಳು, ಸುನ್ನೀ ಸಾದಾತ್-ಉಲಮಾಗಳ ಅಭಿಮಾನಿ, ದಾರುಲ್ ಅಶ್ಅರಿಯ್ಯ ಸುರಿಬೈಲ್ ಇದರ ಜಿದ್ದಾ ಸಮಿತಿಯ ಘನವೆತ್ತ ಅಧ್ಯಕ್ಷರಾಗಿದ್ದ ಅಬ್ದುಲ್ ರಝಾಕ್ ಹಾಜಿ ಪಾಣೆಮಂಗಳೂರು ರವರು ತನ್ನ ಸುಧೀರ್ಘವಾದ 34 ವರ್ಷಗಳ ಪ್ರವಾಸೀ ಜೀವನಕ್ಕೆ ವಿದಾಯ ಹೇಳಿ ತಮ್ಮ ಕುಟುಂಬ ಸಮೇತ ತಾಯ್ನಾಡಿಗೆ ಹೋಗುವುದರಿಂದ ದಾರುಲ್ ಅಶ್ಅರಿಯ್ಯ ಜಿದ್ದಾ ಸಮಿತಿ ವತಿಯಿಂದ ಬೀಳ್ಕೊಟ್ಟು ಸನ್ಮಾನಿಸಲಾಯಿತು.ಜಿದ್ದಾದ ಹಯ್ಯ್ ಸಲಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ದಾರುಲ್ ಅಶ್ಅರಿಯ್ಯದ ಮ್ಯಾನೇಜರ್ ಮುಹಮ್ಮದ್ ಅಲಿ ಸಖಾಫಿ ಸುರಿಬೈಲ್, ಕೆಸಿಎಫ್ ರಾಷ್ಟ್ರೀಯ ಸಮಿತಿ ಸದಸ್ಯರಾದ ಹಾಫಿಳ್ ಜಿ.ಎಂ.ಸುಲೈಮಾನ್ ಹನೀಫೀ, ಜಿದ್ದಾ ಕಮಿಟಿ ಕಾರ್ಯದರ್ಶಿ ಹನೀಫ್ ಸಖಾಫಿ ಸಾಲೆತ್ತೂರ್, ಕೆಸಿಎಫ್ ನೇತಾರರಾದ ಉಮ್ಮರ್ ಸಖಾಫಿ ಪರಪ್ಪು, ಅಝೀಝ್ ಝಹ್ರಿ ಬಾಳೆಪುಣಿ, ಸುಲೈಮಾನ್ ಬಂಡಾಡಿ, ಹಾಗೂ ದಾರುಲ್ ಇರ್ಷಾದ್ ಜಿದ್ದಾ ಸಮಿತಿ, ತಾಜುಲ್ ಉಲಮಾ ಇಸ್ಲಾಮಿಕ್ ಕಾಂಪ್ಲೆಕ್ಸ್ ತಲಕ್ಕಿ , ಸಹಿತ ಹಲವಾರು ಕಾರ್ಯಕರ್ತರು ಉಪಸ್ಥಿತರಿದ್ದರು.
Kannada Online News Paper