ಜಿದ್ದಾ: ಜಿದ್ದಾದ ಹಯ್ಯ್ ಸಲಾಮದಲ್ಲಿ ದಾರುಲ್ ಅಶ್ಅರಿಯ್ಯ ಸುರಿಬೈಲ್ ಇದರ ಮ್ಯಾನೇಜರ್ ಮುಹಮ್ಮದ್ ಅಲಿ ಸಖಾಫಿಯವರ ನೇತೃತ್ವದಲ್ಲಿ ನಡೆದ ಮಾಸಿಕ ಸ್ವಲಾತ್ ಹಾಗೂ ವಾರ್ಷಿಕ ಸಭೆಯಲ್ಲಿ ದಾರುಲ್ ಅಶ್ಅರಿಯ್ಯ ಜಿದ್ದಾ ಸಮಿತಿಯನ್ನು ಪುನರ್ ರಚಿಸಲಾಯಿತು.ಅಧ್ಯಕ್ಷರಾಗಿ ಹನೀಫ್ ಸಖಾಫಿ ಸಾಲೆತ್ತೂರ್, ಪ್ರಧಾನ ಕಾರ್ಯದರ್ಶಿಯಾಗಿ ಶಬೀರ್ ಅರಸಿನಮಕ್ಕಿ, ಕೋಶಧಿಕಾರಿಯಾಗಿ ಅಬ್ದುಲ್ ಸಲಾಂ ಪಡುಬಿದ್ರೆ ಮತ್ತು ಉಪಾಧ್ಯಕ್ಷರುಗಳಾಗಿ ಜಿ.ಎಂ.ಸುಲೈಮಾನ್ ಹನೀಫೀ ಪಾಣೆಮಂಗಳೂರು, ಅಬ್ಬಾಸ್ ಹಾಜಿ ಕುಕ್ಕಾಜೆ, ಹಾಗೂ ಜೊತೆ ಕಾರ್ಯದರ್ಶಿಗಳಾಗಿ ಅಶ್ರಫ್ ಬೆದ್ರೊಡಿ, ಉಮ್ಮರ್ ಆಸೀಫ್ ರವರನ್ನು ಆಯ್ಕೆ ಮಾಡಲಾಯಿತು.