ಜಾಗೃತೆ! ನೋಟಿನಿಂದಲೂ ಹರಡುತ್ತಿದೆ ಭಾರೀ ರೋಗ

ನವದೆಹಲಿ: ನೋಟು ಮೂಲಕ ಹರಡುವ ಸೋಂಕುಗಳ ಬಗ್ಗೆ ಸಾಕಷ್ಟು ಅಧ್ಯಯನಗಳು ನಡೆದಿವೆ. ಭಾರತದ ಇನ್ಸ್‌ಟಿಟ್ಯೂಟ್‌ ಆಫ್ ಜಿನಾಮಿಕ್ಸ್‌ ಎಂಡ್‌ ಇಂಟಗ್ರೇಟಿವ್‌ ಬಯೊಲಜಿಯು (ಐಜಿಐಬಿ) ಈ ಬಗ್ಗೆ ಅಧ್ಯಯನ ನಡೆಸಿ, ವರದಿಯನ್ನು ಅಂತರರಾಷ್ಟ್ರೀಯ ವಿಜ್ಞಾನ ನಿಯತಕಾಲಿಕವೊಂದರಲ್ಲಿ ಪ್ರಕಟಿಸಿತ್ತು ಎನ್ನಲಾಗಿದೆ.

ವಿಜ್ಞಾನ ಮತ್ತು ಕೈಗಾರಿಕಾ ಸಂಶೋಧನಾ ಪರಿಷತ್ತಿನ (ಸಿಎಸ್‌ಐಆರ್‌) ಅಧೀನದಲ್ಲಿ ಕೆಲಸ ಮಾಡುವ ಐಜಿಐಬಿಯೂ, 78 ವಿವಿಧ ರೋಗಗಳನ್ನು ಹರಡುವ ಸೂಕ್ಷ್ಮಾಣು ಜೀವಿಗಳು ನೋಟುಗಳಲ್ಲಿ ಪತ್ತೆಯಾಗಿವೆ ಎಂದು ತಿಳಿಸಿದೆ. ಅಲ್ಲದೇ ಅಧ್ಯಯನವೊಂದರಲ್ಲಿ 120 ನೋಟುಗಳ ಪೈಕಿ ಶೇ 86.4ರಷ್ಟು ನೋಟುಗಳಲ್ಲಿ ರೋಗ ಹರಡುವ ಬ್ಯಾಕ್ಟೀರಿಯಾಗಳು ಕಂಡಿದ್ದವು ಎಂಬುದು ಸಾಬೀತಾಗಿದೆ.

ಸಾಮಾನ್ಯ ಜ್ವರ, ಹೊಟ್ಟೆನೋವು, ಚರ್ಮರೋಗ, ಮೂತ್ರನಾಳದ ಸೋಂಕು, ಶ್ವಾಸಕೋಶದ ಸೋಂಕು, ಗಂಟಲು ಸೋಂಕು, ಕ್ಷಯ, ಗಲಗ್ರಂಥಿ ಉರಿಯೂತ (ಟಾನ್ಸಿಲೈಟಿಸ್‌), ಮಿದುಳಿನ ಉರಿಯೂತ, ರಕ್ತ ನಂಜು ತರಹ ರೋಗಗಳು ಹರಡುತ್ತವೆ ಎಂದು ಅಧಿಕೃತವಾಗಿ ಅಧ್ಯಯನದಲ್ಲಿ ದಾಖಲಿಸಲಾಗಿದೆ.

ನೋಟು ಅಮಾನ್ಯೀಕರಣ ಬಳಿಕ ದೇಶದಲ್ಲಿ ಬಹಳಷ್ಟು ಬ್ಯಾಂಕ್ ಸಿಬ್ಬಂದಿಗಳು ಅನಾರೋಗ್ಯಕ್ಕೀಡಾಗಿದ್ದರು. ಸಾಮಾನ್ಯ ಜನರಲ್ಲೂ ಆರೋಗ್ಯ ಸಮಸ್ಯೆ ಕಂಡು ಬಂದಿತ್ತು. ಇದಕ್ಕೆ ಕಾರಣವೇ ನೋಟುಗಳು. ನೋಟು ಮುಟ್ಟಿದರಿಂದಲೇ ವಿವಿಧ ಸೋಂಕು ಜನರಿಗೆ ಹರಡಿತ್ತು ಎನ್ನಲಾಗಿತ್ತು.

ಬಳಿಕ ನೋಟುಗಳಲ್ಲಿ ಯಾವ ರೀತಿಯ ಸೋಂಕುಗಳು ಹರಡುತ್ತವೆ ಎಂಬುದರ ಸುತ್ತ ವ್ಯಾಪಕ ಚರ್ಚೆ ನಡೆಸಲಾಯ್ತು. ಸೋಂಕನ್ನು ತಡೆಯುವುದು ಹೇಗೆ ಎನ್ನುವ ಬಗ್ಗೆ ಸಮಗ್ರವಾದ ಅಧ್ಯಯನ ನಡೆಸಬೇಕು ಎಂದು ಅಖಿಲ ಭಾರತ ವರ್ತಕರ ಒಕ್ಕೂಟವು ಕೇಂದ್ರ ಸರ್ಕಾರವನ್ನು ಆಗ್ರಹಿಸಿತ್ತು. ಅಲ್ಲದೇ ಜೇಟ್ಲಿ ಅವರಲ್ಲಿ ಮನವಿ ಮಾಡಲಾಗಿತ್ತು.ನೋಟ್ ಬ್ಯಾನ್ ವಿಚಾರದಿಂದ ಜನರೆಲ್ಲರೂ ತಮ್ಮಲ್ಲಿರುವ ಹಳೆ ನೋಟುಗಳನ್ನು ಜಮಾ ಮಾಡಲು ಬ್ಯಾಂಕ್’ಗೆ ದೌಡಾಯಿಸುತ್ತಿದ್ದರು. ಇದರಿಂದಾಗಿ ಬ್ಯಾಂಕ್’ನಲ್ಲಿ ಹಳೆ ನೋಟುಗಳು ತುಂಬಿಕೊಂಡಿದ್ದವು. ಇಷ್ಟು ಪ್ರಮಾಣದ ನೋಟುಗಳನ್ನು ಎಣಿಸಲು ಎಂಜಲು ಬಳಸಲಾಗುತ್ತಿತ್ತು.

ಎಂಜಲು ಬಳಕೆ ಪರಿಣಾಮವಾಗಿ ಕೀಟಾಣು ಬಾಯಿಗೆ ಸೇರಿ ಅನಾರೋಗಕ್ಕೀಡಾಗುತ್ತಿದ್ದಾರೆ. ವೈದ್ಯರು ಕೂಡಾ ‘ಇತ್ತೀಚೆಗೆ ರೋಗಾಣು ಹಾಗೂ ಫಂಗಸ್ ಇನ್ಫೆಕ್ಷನ್’ನಿಂದಾಗಿ ಚಿಕಿತ್ಸೆ ಪಡೆಯಲು ಬರುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಹೇಳುತ್ತಿದ್ಧಾರೆ. ಹಳೆ ನೋಟುಗಳ ಮೇಲಿರುವ ಕೀಟಾಣುಗಳ ಸಂಖ್ಯೆ ಹೆಚ್ಚಾಗಿರುವುದರಿಂದ ಜನರು ಅನಾರೋಗಕ್ಕೀಡಾಗಿದ್ದರು. ಹೀಗಾಗಿ ಈ ಕುರಿತು ಅಧ್ಯಯನ ಮಾಡಬೇಕು ಎಂದು ಜೇಟ್ಲಿ ಅವರಿಗೆ ಅರ್ಥೈಸಿದ್ದರು.

ನೋಟಿಗೆ ಸೋಂಕು ಹರಡುವಿಕೆ: ಮೂಗಿನಿಂದ ಉಂಟಾಗುವ ಸ್ರಾವಗಳು, ಸೀನುವಾಗ, ಕೆಮ್ಮುವಾಗ ಸಿಡಿಯುವ ದ್ರವ, ಮಲ-ಮೂತ್ರ ನೋಟಿಗೆ ತಗಲುವುದು. ನೋಟಿಗೆ ಜೊಲ್ಲು ರಸ ಹಚ್ಚುವುದು. ಗಾಯಗಳಿಗೆ ನೋಟು ತಾಗುವುದು. ಯಾವುದೇ ರೀತಿಯ ಬ್ಯಾಕ್ಟೀರಿಯಾ ಇರುವ ಸ್ಥಳಕ್ಕೆ ನೋಟು ತಾಗುವುದರಿಂದ ಸೋಂಕು ಹರಡುತ್ತದೆ ಎಂದು ವರದಿಯಾಗಿದೆ.

ಸುರಕ್ಷತೆ: ರೋಗದಿಂದ ನಾವೇ ನಮ್ಮನ್ನು ರಕ್ಷಿಸಿಕೊಳ್ಳಬೇಕು. ಇದಕ್ಕೆ ಬೇರಾವ ಮಾರ್ಗವಿಲ್ಲ. ಎಂಜಲು ಬಳಸಿ ನೋಟು ಎಣಿಸುವವರು ತುಂಬಾ ಎಚ್ಚರಿಕೆ ವಹಿಸಬೇಕು, ಇಲ್ಲವಾದಲ್ಲಿ ರೋಗ ಹರಡುವ ಸಾಧ್ಯತೆ ಇದೆ. ಈ ರೋಗ ಕೇವಲ ಬ್ಯಾಂಕ್ ಸಿಬ್ಬಂದಿಗಳಲ್ಲಷ್ಟೇ ಅಲ್ಲದೆ ATM ನಿಂದ ಹಣ ಪಡೆಯುವವರಲ್ಲಿ ಪತ್ತೆಯಾಗಿದೆ. ಈ ರೋಗದಿಂದ ನಿಮ್ಮನ್ನು ನೀವು ಕಾಪಾಡಿಕೊಳ್ಳಲು ಎಚ್ಚರವಹಸಿಹಬೇಕಿದೆ.

Leave a Reply

Your email address will not be published. Required fields are marked *

error: Content is protected !!